ಮಾರುತಿ ವ್ಯಾಗನಾರ್ ತದ್ರೂಪ ಸ್ಟಿಂಗ್ರೇ?
ಇತ್ತೀಚೆಗಷ್ಟೇ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಾರುತಿ ಸ್ಟಿಂಗ್ರೇ ಮಾರಾಟ ಈಗಾಗಲೇ ಆರಂಭಗೊಂಡಿದೆ. ಕಳೆಗುಂದಿರುವ ವ್ಯಾಗನಾರ್ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಆಲ್ ನ್ಯೂ ಸ್ಟಿಂಗ್ರೇ ಪರಿಚಯಿಸಲಾಗಿತ್ತು.
ಅಷ್ಟಕ್ಕೂ ಮಾರುತಿ ವ್ಯಾಗನಾರ್ ತದ್ರೂಪವೇ ಸ್ಟಿಂಗ್ರೇ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಓದುಗರಿಗಾಗಿ ಈ ವಿಶೇಷ ಲೇಖನ ಸಿದ್ಧಪಡಿಸಿದೆ.
ದೇಶದ ಸಣ್ಣ ಕಾರು ಪ್ರಯಾಣಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರಿಸಿರಿರುವ ಮಾರುತಿ ಸುಜುಕಿ ನೆಚ್ಚಿನ ಬ್ರಾಂಡ್ ಎನಿಸಿಕೊಂಡಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯು ಹಿನ್ನಡೆ ಅನುಭವಿಸುತ್ತಿದ್ದು, ನೂತನ ಸ್ಟಿಂಗ್ರೇ ಉತ್ತೇಜಿಸುವ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನೂತನ ಸ್ಟಿಂಗ್ರೇ ಬಿಡುಗಡೆಗೊಳಿಸಲಾಗಿದೆ. ಅಷ್ಟಕ್ಕೂ ವ್ಯಾಗನಾರ್ ನಕಲು ಮಾಡುವ ಪ್ರಯತ್ನ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಈ ಲೇಖನ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುವುದು.

ದರ ಮಾಹಿತಿ
ದೇಶದ ಗ್ರಾಹಕರು ದರಕ್ಕೆ ಹೆಚ್ಚಿನ ಆದ್ಯತೆ ಕೂಡುತ್ತಾರೆ. ಇದಕ್ಕಾಗಿ ಆರಂಭದಲ್ಲಿ ದರ ಹೋಲಿಕೆ ಮಾಡಲಾಗುತ್ತಿದೆ.
ದರ ಹಾಗೂ ವೆರಿಯಂಟ್ (ದೆಹಲಿ ಎಕ್ಸ್ ಶೋ ರೂಂ)
* ವ್ಯಾಗನಾರ್ ಸ್ಟಿಂಗ್ರೇ ಎಲ್‌ಎಕ್ಸ್‌ಐ: 4.09 ಲಕ್ಷ ರು.
* ವ್ಯಾಗನಾರ್ ಸ್ಟಿಂಗ್ರೇ ವಿಎಕ್ಸ್‌ಐ: 4.38 ಲಕ್ಷ ರು.
* ವ್ಯಾಗನಾರ್ ಸ್ಟಿಂಗ್ರೇ ವಿಎಕ್ಸ್‌ಐ (ಆಪ್ಷನ್): 4.67 ಲಕ್ಷ ರು.
* ಮಾರುತಿ ವ್ಯಾಗನಾರ್ ಎಂಸಿ ಎಲ್‌ಎಕ್ಸ್: 3.58 ಲಕ್ಷ ರು.
* ಮಾರುತಿ ವ್ಯಾಗನಾರ್ ಎಂಸಿ ಎಲ್‌ಎಕ್ಸ್‌ಐ: 3.87 ಲಕ್ಷ ರು.
* ಮಾರುತಿ ವ್ಯಾಗನಾರ್ ಎಂಸಿ ವಿಎಕ್ಸ್‌ಐ: 4.13 ಲಕ್ಷ ರು.

ನಿರ್ವಹಣೆ
ಮಾರುತಿ ಸ್ಟಿಂಗ್ರೇ ಹಾಗೂ ವ್ಯಾಗನಾರ್‌ನಲ್ಲಿ ಸಮಾನ ಎಂಜಿನ್ ಮಾನದಂಡಗಳನ್ನು ಬಳಸಲಾಗಿದೆ. ಅಂದರೆ ನೂತನ ಸ್ಟಿಂಗ್ರೇ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಇದರಲ್ಲಿ 1.0 ಲೀಟರ್ 3 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, 67.1 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಎಕ್ಸ್‌ಟೀರಿಯರ್
ನೂತನ ಸ್ಟಿಂಗ್ರೇದಲ್ಲಿ ಸ್ಟೈಲಿಷ್ ಕ್ರೋಮ್ ಫಿನಿಶ್ ಗ್ರಿಲ್, ನೂತನ ಅಲಾಯ್ ವೀಲ್ ಹಾಗೂ ಟೈಲ್ ಲ್ಯಾಂಪ್ ಆಳವಡಿಸಲಾಗಿದೆ. ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ರಿಯರ್ ವ್ಯೂ ಮಿರರ್ ಹಾಗೂ ಪ್ರೊಜೆಕ್ಟರ್ ಹೆಡ್ ಲೈಟ್, ದೊಡ್ಡದಾದ ಏರ್ ಡ್ಯಾಮ್ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್ ಕೂಡಾ ಹೊಂದಿದೆ.

ಇಂಟಿರಿಯರ್
ಇನ್ನು ಕಾರಿನ ಇಂಟಿರಿಯರ್ ಬಗ್ಗೆ ಮಾತನಾಡುವುದಾದರೆ ಕಪ್ಪು ಬಣ್ಣದ ಇಂಟಿರಿಯರ್ ಹಾಗೂ ಲೆಥರ್ ಹೋದಿಕೆಯ ಸ್ಟೀರಿಂಗ್ ಲಗತ್ತಿಸಲಾಗಿದೆ. ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಲಭ್ಯವಿರುತ್ತದೆ. ಇನ್ನೊಂದೆಡೆ ವ್ಯಾಗನಾರ್ ಡ್ಯುಯಲ್ ಟೋನ್ ಇಂಟಿರಿಯರ್ ಹೊಂದಿದೆ.

ಲಗ್ಗೇಜ್ ಸ್ಪೇಸ್
ಮಡಚಬಹುದಾಗ ಸೀಟ್ ವಿಧಾನದ ಹೊಂದಿರುವ ಸ್ಟಿಂಗ್ರೇದಲ್ಲಿ 180 ಲೀಟರ್‌ಗಿಂತಲೂ ಹೆಚ್ಚು ಲಗ್ಗೇಜ್‌ಗಳನ್ನು ಹೊತ್ತೊಯ್ಯಬಹುದಾಗಿದೆ. ಇದು ವ್ಯಾಗನಾರ್‌ಗಿಂತಲೂ ಹೆಚ್ಚಿನ ಲಗ್ಗೇಜ್ ಸ್ಪೇಸ್ ಹೊಂದಿದೆ.

ಮೈಲೇಜ್
ಭಾರತದ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ಪಡೆದಿರುವ ಮಾರುತಿ ವ್ಯಾಗನಾರ್ ಸ್ಟಿಂಗ್ರೇ ಪ್ರತಿ ಲೀಟರ್‌ಗೆ 20.51 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಕಲರ್ ವೆರಿಯಂಟ್
ನೂತನ ಮಾರುತಿ ಸ್ಟಿಂಗ್ರೇ ಐದು ವ್ಯತ್ಯಸ್ತ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ,
1. Midnight Blue,
2. Passion Red,
3. Glistening Grey,
4. Superior White,
5. Silky Silver.

ಅಂತಿಮ ತೀರ್ಪು
ವಿನ್ಯಾಸದ ವಿಚಾರಕ್ಕೆ ಬಂದಾಗ ವ್ಯಾಗನಾರ್‌ನ್ನು ಸ್ಟಿಂಗ್ರೇ ಮೀರಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ನೀವು ದೊಡ್ಡದಾದ ಸ್ಟೈಲಿಷ್ ಕಾರನ್ನು ಬಯಸುವುದಾದರೆ ಸ್ಟಿಂಗ್ರೇ ಉತ್ತಮ ಆಯ್ಕೆಯಾಗಿರಲಿದೆ. ಅಂತಿಮದಲ್ಲಿ ವ್ಯಾಗನಾರ್ ಆವೃತ್ತಿಯಲ್ಲಿರುವ ಕೊರತೆಗಳನ್ನು ನೀಗಿಸುವ ಪ್ರಯತ್ನವನ್ನು ಸ್ಟಿಂಗ್ರೇ ಹ್ಯಾಚ್‌ಬ್ಯಾಕ್ ಮುಖಾಂತರ ಮಾಡಲಾಗಿದೆ.


Click it and Unblock the Notifications