ಡಿಜೈರ್ vs ಜೆಸ್ಟ್; ಕಾಂಪಾಕ್ಟ್ ಸೆಡಾನ್ ಎಎಂಟಿ ಕಾರುಗಳ ರೇಸ್!

By Nagaraja

ಸೆಲೆರಿಯೊ, ಆಲ್ಟೊ ಕೆ10 ಯಶಸ್ಸಿನ ಬಳಿಕ ಭಾರತದ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ರೂಪದಲ್ಲಿ ಬೆಳೆದು ಬಂದಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ ಗೇರ್ ಬಾಕ್ಸ್ ತಂತ್ರಗಾರಿಕೆಯನ್ನು ಜನಪ್ರಿಯ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರಿನಲ್ಲೂ ಒದಗಿಸಲು ಮಾರುತಿ ಸುಜುಕಿ ನಿರ್ಧರಿಸಿತ್ತು.

Also Read: ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್

ಇದರೊಂದಿಗೆ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ ನೇರವಾಗಿ ಟಾಟಾ ಜೆಸ್ಟ್ ಕಾರಿಗೆ ಪ್ರತಿಸ್ಪರ್ಧಿಯನ್ನು ಸಿದ್ಧಗೊಳಿಸಿದೆ. ಪ್ರಸ್ತುತ ಲೇಖನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎಎಂಟಿ ಮತ್ತು ಟಾಟಾ ಜೆಸ್ಟ್ ಎಎಂಟಿ ಕಾರುಗಳ ಮಧ್ಯೆ ತುಲನೆ ಮಾಡುವ ಪ್ರಯತ್ನ ಮಾಡಲಾಗುವುದು.

ಮಾರುತಿ ಸ್ವಿಫ್ಟ್ ಡಿಜೈರ್ vs ಟಾಟಾ ಜೆಸ್ಟ್

ಅಂದಾಜು ಆನ್ ರೋಡ್ ಬೆಲೆ (ದೆಹಲಿ)
  • ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಝಡ್‌ಡಿಐ ಎಎಂಟಿ: 9.56 ಲಕ್ಷ ರು.
  • ಟಾಟಾ ಜೆಸ್ಟ್ ಎಕ್ಸ್‌ಎಂಎ (ಡೀಸೆಲ್): 8.37 ಲಕ್ಷ ರು.
  • ಟಾಟಾ ಜೆಸ್ಟ್ ಎಕ್ಸ್‌ಟಿಎ (ಡೀಸೆಲ್): 9.29 ಲಕ್ಷ ರು.

ಸ್ವಿಫ್ಟ್ ಡಿಜೈರ್ ಎಎಂಟಿ
ವಿನ್ಯಾಸ - ಸ್ವಿಫ್ಟ್ ಡಿಜೈರ್
ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿಗೆ ವಿನ್ಯಾಸ ಸಾಮ್ಯತೆಯನ್ನು ಹೊಂದಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಿಂಭಾಗದಲ್ಲಿ ಹೆಚ್ಚುವರಿ ಢಿಕ್ಕಿ ಜಾಗವನ್ನು ಹೊಂದಿದೆ. ಬಹಳ ವರ್ಷಗಳಿಂದಲೂ ಸಮಾನ ವಿನ್ಯಾಸವನ್ನು ಕಾಯ್ದುಕೊಂಡು ಬಂದಿರುವ ಡಿಜೈರ್ ವಿನ್ಯಾಸದ ವಿಚಾರದಲ್ಲಿ ಇದುವರೆಗೆ ಬದಲಾವಣೆಗೆ ಮುಂದಾಗಿಲ್ಲ.

ಟಾಟಾ ಜೆಸ್ಟ್ ಎಎಂಟಿ
ವಿನ್ಯಾಸ - ಟಾಟಾ ಜೆಸ್ಟ್
ಸಂಸ್ಥೆಯ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನಿರ್ಮಾಣವಾಗಿರುವ ಟಾಟಾ ಜೆಸ್ಟ್ ಹೆಚ್ಚು ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಿದೆ. ಈ ನಿಟ್ಟಿನಲ್ಲಿ ಟಾಟಾ ಎಂಜಿನಿಯರ್ ಗಳು ಹೆಚ್ಚಿನ ಪರಿಶ್ರಮ ವಹಿಸಿದ್ದಾರೆ.

ಎಂಜಿನ್, ಗೇರ್ ಬಾಕ್ಸ್ - ಸ್ವಿಫ್ಟ್ ಡಿಜೈರ್

  • 1248 ಸಿಸಿ, ಫೋರ್ ಸಿಲಿಂಡರ್,
  • ಟರ್ಬೊ ಚಾರ್ಜರ್ ಮೋಟಾರ್
  • 74 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ
  • ಫೈವ್ ಸ್ಪೀಡ್ ಗೇರ್ ಬಾಕ್ಸ್

Also Read: ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್

ಎಂಜಿನ್, ಗೇರ್ ಬಾಕ್ಸ್ - ಟಾಟಾ ಜೆಸ್ಟ್

  • 1248 ಸಿಸಿ, ಫೋರ್ ಸಿಲಿಂಡರ್,
  • ಟರ್ಬೊಚಾರ್ಜರ್ ಮೋಟಾರ್
  • 89 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ
  • 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್

ಮೈಲೇಜ್

  • ಸ್ವಿಫ್ಟ್ ಡಿಜೈರ್: 26.5 ಕೀ.ಮೀ.
  • ಟಾಟಾ ಜೆಸ್ಟ್: 23 ಕೀ.ಮೀ.


ವೈಶಿಷ್ಟ್ಯಗಳು - ಸ್ವಿಫ್ಟ್ ಡಿಜೈರ್

ಟಾಪ್ ಎಂಡ್ ವೆರಿಯಂಟ್ ಆಗಿರುವ ಡಿಜೈರ್ ಎಎಂಟಿ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಮೈ ಮಿರರ್, ಮ್ಯೂಸಿಕ್ ಸಿಸ್ಟಂ ಜೊತೆ ಆಕ್ಸ್, ಬ್ಲೂಟೂತ್, ಯುಎಸ್ ಬಿ ಕನೆಕ್ಟಿವಿಟಿ ಮತ್ತು ಫ್ಯಾಬ್ರಿಕ್ ಸೀಟು ಹೋದಿಕೆ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

Also Read: ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರು ಯಾವುದು?

ವೈಶಿಷ್ಟ್ಯಗಳು - ಟಾಟಾ ಜೆಸ್ಟ್
ಇನ್ನೊಂದೆಡೆ ಟಾಟಾ ಜೆಸ್ಟ್ ಎಎಂಟಿ ಎಕ್ಸ್‌ಟಿಎ ಮಾದರಿಯಲ್ಲೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೊಂದಾಣಿಸಬಹುದಾದ ಸ್ಟೀರಿಂಗ್, ಪಾರ್ಕಿಂಗ್ ಸೆನ್ಸಾರ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಪವರ್ ವಿಂಡೋ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ಮಿರರ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಫಾಲೋ ಮಿ ಹೋಮ್ ಲ್ಯಾಂಪ್, ಡೇಟೈಮ್ ರನ್ನಿಂಗ್ಸ್ ಲೈಟ್ಸ್, ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಗ್ ಲ್ಯಾಂಪ್, ಮ್ಯೂಸಿಕ್ ಸಿಸ್ಟಂ, ಆಕ್ಸ್, ಬ್ಲೂಟೂತ್, ಯುಎಸ್ ಬಿ ಕನೆಕ್ಟಿವಿಟಿ, ಸ್ಟೀರಿಂಗ್ ನಿಂದಲೇ ನಿಯಂತ್ರಣ ಹಾಗೂ ಫ್ರಾಬ್ರಿಕ್ ಸೀಟು ಇತ್ಯಾದಿ ಸೇವೆಗಳು ಲಭ್ಯವಾಗಲಿದೆ.

Also Read: ನೆಟ್, ಬೋಲ್ಟ್ ಕಳಚಿಟ್ಟ ಟಾಟಾ; ಹಣೆಬರಹ ಬದಲಾದಿತೇ?

ಸುರಕ್ಷತೆ
ಕಾರಿನ ಭದ್ರತೆಯ ವಿಚಾರಕ್ಕೆ ಬಂದಾಗ ಎರಡು ಮಾದರಿಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್, ಎಂಜಿನ್ ಇಂಮೊಬಿಲೈಜರ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಮುಂತಾದ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.


ಅಂತಿಮ ತೀರ್ಪು

ಮೇಲ್ನೋಟದಲ್ಲಿ ಎರಡು ಕಾರುಗಳನ್ನು ಹೋಲಿಕೆ ಮಾಡಿ ನೋಡಿದಾಗ ಟಾಟಾ ಜೆಸ್ಟ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಪಾರ್ಕಿಂಗ್ ಸೆನ್ಸಾರ್ ಹಾಗೂ ಫಾಗ್ ಲ್ಯಾಂಪ್ ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳು ಲಭ್ಯವಾಗಲಿದೆ. ಬೆಲೆಯ ವಿಚಾರದಲ್ಲೂ ಜೆಸ್ಟ್ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಸಂಪೂರ್ಣ ಪ್ಯಾಕೇಜ್ ನೀಡಲಿದೆ.

ಆದರೆ ಬ್ರಾಂಡ್ ಮೌಲ್ಯವನ್ನು ಗಮನಕ್ಕೆ ತೆಗೆದುಕೊಂಡಾಗ ನಿಷ್ಠಾವಂತ ಸಂಸ್ಥೆ ಎಂಬ ಗೌರವನ್ನು ಕಾಯ್ದುಕೊಂಡಿರುವ ಮಾರುತಿಯ ಸ್ವಿಫ್ಟ್ ಡಿಜೈರ್ ಮೆಚ್ಚುಗೆಗೆ ಪಾತ್ರವಾಗಲಿದೆ. ಇನ್ನು ಜೆಸ್ಟ್ ಗಿಂತಲೂ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ.

More from DriveSpark

Article Published On: Thursday, January 28, 2016, 10:00 [IST]
English summary
Maruti Suzuki Swift Dzire AMT vs Tata Zest AMT Comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+