MG Cyberster Review: ವಿಮಾನದಂತಿರುವ ಎಂಜಿ ಸೈಬರ್‌ಸ್ಟರ್ ರಿವ್ಯೂ.. ಭಾರೀ ವೈಶಿಷ್ಟ್ಯಗಳು, ಹೇಗಿದೆ ಗೊತ್ತಾ?

ಭಾರತದಲ್ಲಿ ಜಿಂದಾಲ್ ಹಾಗೂ ಎಂಜಿ ಮೋಟಾರ್ಸ್ ಉದ್ಯಮ ಪಾಲುದಾರಿಕೆ ಹೊಂದಿವೆ. ಅದರ ಭಾಗವಾಗಿ ಎಂಜಿ ಕಂಪನಿಯು ಹೊಚ್ಚ ಹೊಸ 'ಸೈಬರ್‌ಸ್ಟರ್' ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೊಂದು ಎಲೆಕ್ಟ್ರಿಕ್ ಸೆಡಾನ್ ಆಗಿದ್ದು, ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡವು ಈ ಕಾರಿನ ಟೆಸ್ಟ್ ಡ್ರೈವ್‌ನ್ನು ನಡೆಸಿದೆ. ಬನ್ನಿ, 'ಎಂಜಿ ಸೈಬರ್‌ಸ್ಟರ್' ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊರಭಾಗದ ವಿನ್ಯಾಸ:

ಹೊಸ ಎಂಜಿ ಸೈಬರ್‌ಸ್ಟರ್ (MG Cyberster), ಹೊರಭಾಗದಲ್ಲಿ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರ ಸೆಳೆಯುವಂತಿದೆ. ಉತ್ತಮವಾಗಿರುವ ಎಂಜಿ ಲೋಗೋ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲಾಂಕ್ಡ್ - ಆಫ್ ಗ್ರಿಲ್, ವಿಡ್ತ್ ಡಿಫ್ಯೂಸರ್, ಎಲ್‌ಇಡಿ ಲೈಟ್ ಬಾರ್, ಟರ್ನ್ ಇಂಡಿಕೇಟರ್‌ಗಳನ್ನು ಪಡೆದಿದೆ.

MG Cyberster Review Specs Driving Impressions Design And Features Details

ಈ ಕಾರು 20-ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಪೈರೆಲ್ಲಿ ಪಿ ಝೀರೋ ಟೈರ್‌ಗಳನ್ನು ಹೊಂದಿದೆ. ಇದರ ಬಟರ್‌ಫ್ಲೈ ಡೋರ್‌ಗಳು ಎಲ್ಲರ ಕಣ್ಣು ಕುಕ್ಕುವಂತಿದೆ. ರಿಮೋಟ್ ಅಥವಾ ಬಟನ್‌ ಸಹಾಯದಿಂದ ಕಂಟ್ರೋಲ್ ಮಾಡಬಹುದು. ಹಾಗೆಯೇ ಕನ್ವರ್ಟಿಬಲ್ ಸಾಫ್ಟ್ ಟಾಪ್‌ನ್ನು ಹೊಂದಿದ್ದು, 10 ಸೆಕೆಂಡುಗಳಲ್ಲಿ ತೆರೆಯಬಹುದು ಹಾಗೂ ಮುಚ್ಚಬಹುದು.

ನೂತನ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ 4,535 ಎಂಎಂ ಉದ್ದ, 1,913 ಎಂಎಂ ಅಗಲ ಮತ್ತು 1,329 ಎಂಎಂ ಎತ್ತರವು ಇದೆ. ಇದರೊಂದಿಗೆ 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,690 ವೀಲ್‌ಬೇಸ್‌ನ್ನು ಒಳಗೊಂಡಿದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ & ಮಾಡ್ರನ್ ಬೀಜ್ ಎಂಬ ನಾಲ್ಕು ಬಣ್ಣಗಳೊಂದಿಗೂ ದೊರೆಯುತ್ತದೆ.

MG Cyberster Review Specs Driving Impressions Design And Features Details

ಆಸನ ಆಯ್ಕೆ & ಬೂಟ್ ಸ್ಪೇಸ್:

ಎಂಜಿ ಸೈಬರ್‌ಸ್ಟರ್ 2 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 230 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಒಳಭಾಗದ ವಿನ್ಯಾಸ & ವೈಶಿಷ್ಟ್ಯಗಳು:

ಇದರ ಕ್ಯಾಬಿನ್ ವಿನ್ಯಾಸವು ವಿಮಾನಕ್ಕೆ ಹೋಲಿಕೆಯಾಗುವ ರೀತಿಯಲ್ಲಿದೆ. ಈ ಕಾರಿನ ಆಸನಗಳು 8-ವೇ ಎಲೆಕ್ಟ್ರಾನಿಲಿ ಅಡ್ಜಸ್ಟೇಬಲ್ ಕೂಡ ಆಗಿವೆ. ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಇದ್ದು, ಡ್ರೈವಿಂಗ್ ಮೋಡ್ ಕಂಟ್ರೋಲ್‌ಗಳು ಹಾಗೂ ಪ್ಯಾಡಲ್ ಶಿಫ್ಟರ್‌ಗಳನ್ನು ನಿಯಂತ್ರಿಸಲು ನೆರವಾಗಬಲ್ಲವು. ಇಷ್ಟೆಲ್ಲ ಆಧುನಿಕತೆಯನ್ನು ಹೊಂದಿದ್ದರೂ ಮ್ಯಾನುಯಲ್ ರೇರ್ ವ್ಯೂ ಮಿರರ್ ಆಯ್ಕೆಯನ್ನು ಮಾತ್ರ ಪಡೆದಿದೆ.

MG Cyberster Review Specs Driving Impressions Design And Features Details

ನೂತನ ಸೈಬರ್‌ಸ್ಟರ್ ಸೆಡಾನ್ 3-ಸ್ಕ್ರೀನ್‌ ಸೆಟಪ್‌ನ್ನು ಒಳಗೊಂಡಿದೆ. 10.25-ಇಂಚಿನ ಡಿಜಿಟಲ್ ಡ್ರೈವರ್ ಸ್ಕ್ರೀನ್, 7-ಇಂಚಿನ ಆಕ್ಸಿಲರಿ ಸ್ಕ್ರೀನ್ ಮತ್ತು 7-ಇಂಚಿನ ವರ್ಟಿಕಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನ್ನು ಹೊಂದಿದೆ. ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಕಾರ್ಯಕ್ಷಮತೆ:

ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 77 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 580 ಕಿ.ಮೀ ಓಡುತ್ತದೆ. ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್ 510 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 725 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ.

MG Cyberster Review Specs Driving Impressions Design And Features Details

ಹೊಸ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್, ಚಾಲಕರಿಗೆ ನೆರವಾಗಲು ಎಡಬ್ಲ್ಯೂಡಿ (ಆಲ್ ವೀಲ್ ಡೈವ್) ಟೆಕ್ನಾಲಜಿಯನ್ನು ಹೊಂದಿದೆ. ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಚಾಲನಾ ಅನುಭವ:

ನಮ್ಮ ತಂಡಕ್ಕೆ ನವದೆಹಲಿಯ ಬುದ್ಧ ಇಂಟರ್‌ನ್ಯಾಷನಲ್ ಟ್ರಾಕ್‌ನಲ್ಲಿ ಟೆಸ್ಟ್ ಡ್ರೈವ್ ಮಾಡುವಾಗ 'ಎಂಜಿ ಸೈಬರ್‌ಸ್ಟರ್' ಎಲೆಕ್ಟ್ರಿಕ್ ಸೆಡಾನ್, ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದು ಲೀಲಾಜಾಲವಾಗಿ ಚಲಿಸಿತು. ಸ್ಟೀರಿಂಗ್ ಬಲವಾಗಿದ್ದು, ಗರಿಷ್ಠ ವೇಗದಲ್ಲಿದ್ದರೂ ಕಾರನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದ್ದು, ಡ್ರೈವಿಂಗ್ ಇಷ್ಟಪಡುವರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ.

MG Cyberster Review Specs Driving Impressions Design And Features Details

ಇದನ್ನು ಯಾವುದೇ ರಸ್ತೆಯಲ್ಲಿ ಬೇಕಾದರೂ ಓಡಿಸಬಹುದು. ಆದರೆ, ಟ್ರಾಕ್‌ಗೆ ಹೋಲಿಕೆ ಮಾಡಿದರೆ, ಸಾಮಾನ್ಯ ರಸ್ತೆಯಲ್ಲಿ ಕೊಂಚ ಕಷ್ಟವಾಗಬಹುದು. ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್‌ಗಳು ತುಂಬಾ ಚೆನ್ನಾಗಿ ನಿರ್ವಹಿಸಿದವು. ಅತಿ ಎತ್ತರದ ವ್ಯಕ್ತಿಗಳು ಪ್ರಯಾಣ ಮಾಡುವುದಕ್ಕೆ ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು.

ಒಟ್ಟಾರೆ ಅಭಿಪ್ರಾಯ:

ಎಂಜಿ ಸೈಬರ್‌ಸ್ಟರ್ ರೂ.74.99 ಲಕ್ಷ ಬೆಲೆಯನ್ನು ಹೊಂದಿದೆ. ಈ ದರಗಳು ಹೊಸ ಬುಕ್ಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಮೊದಲೇ ಪ್ರಿ-ಬುಕ್ಕಿಂಗ್‌ ಮಾಡಿದವರಿಗೆ ರೂ.72.49 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ. ಇದು ವಿಶಿಷ್ಟ ಶೈಲಿಯಲಿದ್ದು, ಸ್ಪೋರ್ಟ್ ಕಾರನ್ನು ಇಷ್ಟಪಡುವವರಿಗೆ ಒಳ್ಳೆಯ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ.

More from DriveSpark

Article Published On: Saturday, August 2, 2025, 10:00 [IST]
English summary
Mg cyberster review specs driving impressions design and features details
Read more on mg motors india review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+