Just In
- 8 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 9 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 11 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 12 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಸ್ಟ್ ಡ್ರೈವ್ ರಿವ್ಯೂ: ಭಾರೀ ಬದಲಾವಣೆಯೊಂದಿಗೆ ರಸ್ತೆಗಿಳಿದ ನ್ಯೂ ಜನರೇಷನ್ ಹೋಂಡಾ ಸಿಟಿ
ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಭಾರೀ ಜನಪ್ರಿಯತೆ ಹೊಂದಿರುವ ಹೋಂಡಾ ಸಿಟಿ ಕಾರು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಯೊಂದಿಗೆ ಕಾರು ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ನ್ಯೂ ಜನರೇಷನ್ ಮಾದರಿಯೊಂದಿಗೆ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.
1998ರಲ್ಲೇ ಮಾರುಕಟ್ಟೆ ಪ್ರವೇಶಿಸಿರುವ ಸಿಟಿ ಸೆಡಾನ್ ಕಾರು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವಾರು ಬದಲಾವಣೆಗಳೊಂದಿಗೆ ಉನ್ನತೀಕರಣ ಹೊಂದುತ್ತಿದ್ದು, ಇದೀಗ 5ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದೆ. ಸಿ ಸೆಗ್ಮೆಂಟ್ ಸೆಡಾನ್ ಮಾದರಿಗಳಲ್ಲೇ ಹಲವಾರು ಕಾರುಗಳ ಆಯ್ಕೆ ನಡುವೆಯೂ ಬೇಡಿಕೆಯಲ್ಲಿ ಮುಂಚೂಣಿ ಕಾಯ್ದಕೊಂಡಿರುವ ಸಿಟಿ ಕಾರು ಇದೀಗ ಮತ್ತೊಮ್ಮೆ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.
5ನೇ ತಲೆಮಾರಿನ ಸಿಟಿ ಸೆಡಾನ್ ಕಾರನ್ನು ಈಗಾಗಲೇ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹೋಂಡಾ ಕಂಪನಿಯು ಇದೀಗ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಡ್ರೈವ್ಸ್ಪಾರ್ಕ್ ತಂಡವನ್ನು ಹೊಸ ಕಾರಿನ ತಾಂತ್ರಿಕ ಅಂಶಗಳ ತಿಳಿಯಲು ಸ್ಪೆಷಲ್ ಡ್ರೈವ್ ಆಯೋಜಿಸಿತ್ತು.
ಕರೋನಾ ವೈರಸ್ ಭೀತಿ ನಡುವೆಯೂ ಹಲವಾರು ಸುರಕ್ಷಾ ಸುರಕ್ಷಾ ಕ್ರಮಗಳೊಂದಿಗೆ ಟೆಸ್ಟ್ ಡ್ರೈವ್ ಕಲ್ಪಿಸಿದ್ದ ಹೋಂಡಾ ಕಂಪನಿಯು ಹೊಸ ಕಾರನ್ನು ಜುಲೈ ಮೊದಲ ವಾರದಲ್ಲೇ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರಿನ ಡಿಸೈನ್. ಪರ್ಫಾಮೆನ್ಸ್, ಎಂಜಿನ್ ಆಯ್ಕೆ ಕುರಿತಾಗಿ ಈ ಲೇಖನದಲ್ಲಿ ಸಂಪೂರ್ಣವಾಗಿ ಚರ್ಚಿಸಲಾಗಿದೆ.
ಡಿಸೈನ್ ಮತ್ತು ಸ್ಟೈಲ್
ನ್ಯೂ ಜನರೇಷನ್ ಸಿಟಿ ಕಾರು ಹಳೆಯ ಆವೃತ್ತಿಗಿಂತಲೂ ಭಾರೀ ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿದ್ದು, ಹೊಸ ಕಾರು 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಮೂಲಕ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲೇ ಆಕರ್ಷಕ ಲುಕ್ ಹೊಂದಿದೆ.
ಹೊಸ ಕಾರಿನ ಉದ್ದಳತೆಯು ಹಳೆಯ ಆವೃತ್ತಿಗಿಂತಲೂ ಹೆಚ್ಚಿದ್ದು, ಕಾರಿನ ಹೊರಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಜಪಾನ್ನಲ್ಲಿ ಬಳಕೆ ಮಾಡಲಾಗುತ್ತಿದ್ದ ಪ್ರಾಚೀನ ಆಯುಧ ಮಾದರಿಯಾದ ಕತಾನಾ ಬ್ರೆಡ್ ಮಾದರಿಯಲ್ಲಿ ಹೊಸ ಸಿಟಿ ಕಾರಿನ ಮುಂಭಾಗದ ಡಿಸೈನ್ ಅನ್ನು ವಿನ್ಯಾಸಗೊಳಿಸಿರುವುದು ಕಾರಿನ ನೋಟವನ್ನೇ ಬದಲಾಣೆಗೊಳಿಸಿದೆ.
ಈ ಮೂಲಕ ತಾಂತ್ರಿಕ ಅಂಶಗಳ ವಿಚಾರದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಹೊಸ ಸಿಟಿ ಸೆಡಾನ್ ಕಾರು ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.
ಹೊಸ ಕಾರಿನಲ್ಲಿ ಕಟಿಂಗ್ ಎಡ್ಜ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಡಿಆರ್ಎಲ್, ಎಲ್ ಶೇಪ್ಡ್ ಎಲ್ಇಡಿ ಟರ್ನ್ ಸಿಗ್ನಲ್, ಡೈನಾಮಿಕ್ ಇಂಡಿಕೇಟರ್ ನೀಡಲಾಗಿದ್ದು, ಹೊಸ ಕಾರು 10ನೇ ತಲೆಮಾರಿನ ಸಿವಿಕ್ ಸೆಡಾನ್ ಮಾದರಿಯಿಂದಲೂ ಹಲವಾರು ಫೀಚರ್ಸ್ಗಳನ್ನು ಎರವಲು ಪಡೆದುಕೊಂಡಿದೆ.
ಇಂಟಿರಿಯರ್ ವಿನ್ಯಾಸ
ಹೊಸ ಸಿಟಿ ಕಾರಿನ ಇಂಟಿರಿಯರ್ ಈ ಸಾಕಷ್ಟು ಹೊಸತನದೊಂದಿಗೆ ಅಭಿವೃದ್ದಿಗೊಂಡಿದ್ದು, ಸಾಫ್ಟ್ ಟಚ್ ಮಟಿರಿಯಲ್ನೊಂದಿಗೆ ಸಾಫ್ಟ್ ಟಚ್ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್, ಇನ್ಟೈನ್ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್ರೆಸ್ಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೊಸ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
ಜೊತೆಗೆ ಸ್ಪೋರ್ಟಿ ವಿನ್ಯಾಸದ ಲೆದರ್ ಸೀಟುಗಳು, ಮ್ಯಾನುವಲ್ ಸನ್ರೂಫ್, ಹಿಂಭಾಗದ ಎಸಿ ವೆಂಟ್ಸ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್ನೊಂದಿಗೆ ಕಪ್ ಹೋಲ್ಡರ್ ನೀಡಲಾಗಿದ್ದು, ಹೊಸ ಕಾರು ಹಲವಾರು ಕನೆಕ್ವಿಟಿ ಫೀಚರ್ಸ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್ಹೆಡ್ ಕ್ಯಾಮ್ ಸೆಟಪ್ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್ಪಿ ಮತ್ತು 145-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ನೀಡಲಾಗಿದೆ.
ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 7-ಸ್ಪೀಡ್ ಸಿವಿಟಿ ಗೇರ್ಬಾಕ್ಸ್ ಆಯ್ಕೆ ನೀಡಲಾಗಿದ್ದು, 130-ಬಿಎಚ್ಪಿ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಥೈಲ್ಯಾಂಡ್ನಲ್ಲಿ ಹೊರತುಪಡಿಸಿ ಭಾರತದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ.
ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಪೆಟ್ರೋಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋ ಬಾಕ್ಸ್ ಆಯ್ಕ ಲಭ್ಯವಿರಲಿದ್ದು, ಪೆಟ್ರೋಲ್ ಹೈ ಎಂಡ್ ಮಾದರಿಯೊಂದರಲ್ಲೇ 7-ಸ್ಪೀಡ್ ಸಿವಿಟಿ ಗೇರ್ಬಾಕ್ಸ್ ಆಯ್ಕೆ ನೀಡಲಾಗಿದೆ.
ಈ ಮೂಲಕ ಹೊಸ ಕಾರಿನಲ್ಲಿ ಇಂಧನ ದಕ್ಷತೆ ಹೆಚ್ಚಿರುವುದಲ್ಲದೇ ಪರ್ಫಾಮೆನ್ಸ್ನಲ್ಲೂ ಸಾಕಷ್ಟು ಸುಧಾರಣೆ ಕಂಡಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ಗೆ 17ರಿಂದ 18 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್ಗೆ 22ರಿಂದ 23 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿರಲಿದೆ.
ಸುರಕ್ಷಾ ಸೌಲಭ್ಯಗಳು
ಸಿ-ಸೆಗ್ಮೆಂಟ್ ಸೆಡಾನ್ ಕಾರಿನಲ್ಲೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಸಿಟಿ ಕಾರಿನಲ್ಲಿ ಈ ಬಾರಿ ಮತ್ತಷ್ಟು ಸುಧಾರಿತ ಸುರಕ್ಷಾ ಅಂಶಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹ್ಯಾಂಡ್ಲಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್, 6-ಏರ್ಬ್ಯಾಗ್ಗಳು, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.
ಹೈ ಎಂಡ್ ಮಾದರಿಯಾದ ಸಿಟಿ ಝೆಡ್ಎಕ್ಸ್ ನಲ್ಲಿ ಲೇನ್ ವಾಚ್ ಕ್ಯಾಮೆರಾ ಸಿಸ್ಟಂ ಇದ್ದು, ಇದನ್ನು ಎಡ ಭಾಗದ ರಿಯರ್ ವ್ಯೂ ಮಿರರ್ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ಮೂಲಕ ಗರಿಷ್ಠ ಸುರಕ್ಷತೆ ಪಡೆದುಕೊಳ್ಳಬಹುದಾಗಿದೆ.
2020ರ ಹೋಂಡಾ ಸಿಟಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಹೊಸ ಕಾರು ಜುಲೈ ಮೊದಲ ವಾರದಲ್ಲಿ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ.