ಫಸ್ಟ್ ಡ್ರೈವ್ ರಿವ್ಯೂ: ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2022ರ ಮಾರುತಿ ಸುಜುಕಿ ಆಲ್ಟೊ ಕೆ10

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಮಾರುತಿ ಸುಜುಕಿ ಆಲ್ಟೊ ಕಾರು ಮಾದರಿಯು ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರೀ ಪ್ರಮಾಣದ ಬೇಡಿಕೆಯೊಂದಿಗೆ ಹಲವಾರು ದಾಖಲೆಗಳಿಗೆ ಕಾರಣವಾಗಿದೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಕಳೆದ ಎರಡು ದಶಕಗಳ ಅವಧಿಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿಯಲ್ಲಿರುವ ಆಲ್ಟೊ ಮಾದರಿಯು ಇದೀಗ ಮತ್ತೊಂದು ಹಂತದ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

2000 ದಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಿದ್ದ ಆಲ್ಟೊ ಹ್ಯಾಚ್‌ಬ್ಯಾಕ್ ಮಾದರಿಯು ತನ್ನದೆ ಆದ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಇದುವರೆಗೆ ಆಲ್ಟೊ ಕಾರು ಮಾದರಿಯು ವಿವಿಧ ಸರಣಿಗಳೊಂದಿಗೆ ಒಟ್ಟು 43 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಇದೀಗ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಮಾರುತಿ ಸುಜುಕಿ ಕಂಪನಿಯು ಹೊಸ ಆಲ್ಟೊ ಕೆ10 ಮಾದರಿಯೊಂದಿಗೆ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ, ಬದಲಾವಣೆಗೊಳಿಸಲಾಗಿರುವ ವಿನ್ಯಾಸ ಮತ್ತು ತಂತ್ರಜ್ಞಾನಗಳು ಮತ್ತು ಕಾರಿನ ವೈಶಿಷ್ಟ್ಯತೆಗಳ ಮಾಹಿತಿಯನ್ನು ಈ ವಿಮರ್ಶೆ ಲೇಖನದಲ್ಲಿ ತಿಳಿಯಬಹುದಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಕಾರು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕೆ10 ಮಾದರಿಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ 2022ರ ಆಲ್ಟೊ ಕೆ10 ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ನೀಡಲಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಜನಪ್ರಿಯ ಪ್ರವೇಶ ಮಟ್ಟದ ಕಾರು ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿರುವ ಆಲ್ಟೊ ಕೆ10 ಮಾದರಿಯು ಈ ಹಿಂದಿನ ಮಾದರಿಗಳಿಂತಲೂ ಇದೀಗ ಅತ್ಯುತ್ತಮ ವಿನ್ಯಾಸ ಭಾಷೆ, ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಮತ್ತು ಹಲವಾರು ಸುರಕ್ಷಾ ಸೌಲಭ್ಯಗಳನ್ನು ಹೊಂದಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆಲ್ಟೊ ಕೆ10 ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಮಾದರಿಯು ಅತ್ಯಂತ ಸರಳ ವಿನ್ಯಾಸದೊಂದಿಗೆ ಹಲವು ಗಮನ ಸೆಳೆಯುವಂತಹ ಅಂಶಗಳನ್ನು ಒಳಗೊಂಡಿದೆ. ಹೊಸ ಕಾರಿನ ವಿನ್ಯಾಸವು ಮೇಲ್ನೋಟಕ್ಕೆ ಸೆಲೆರಿಯೊ ಮಾದರಿಯ ಹೋಲಿಕೆ ಇದ್ದರೂ ಹಲವಾರು ವಿಭಿನ್ನತೆಗಳನ್ನು ಹೊಂದಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಮುಂಭಾಗದಲ್ಲಿ ಹೊಸ ಆಲ್ಟೊ ಕೆ10 ಮಾದರಿಯಲ್ಲಿ ದೊಡ್ಡದಾದ ಮತ್ತು ಹೆಚ್ಚು ಅಂತರದ ಗ್ರಿಲ್ ನೀಡಲಾಗಿದ್ದು, ಅದರ ಮೇಲೆ ಸುಜುಕಿ ಬ್ಯಾಡ್ಜ್ ಅನ್ನು ಸೇರಿಸಲಾಗಿದೆ. ಬಾನೆಟ್‌ನ ಅಂಚುಗಳಲ್ಲಿರುವ ಹೊಸ ರೌಂಡ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಕಾಣಬಹುದಾಗಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್‌ನ ಹೊಸ ಗ್ರಿಲ್ ಅಡಿಯಲ್ಲಿ ಸ್ಲಿಕ್ ಆಗಿರುವ ಸೆಂಟ್ರಲ್ ಇನ್‌ಟೆಕ್ ನೀಡಲಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇದರೊಂದಿಗೆ ಹೊಸ ಆಲ್ಟೊ ಕೆ10 ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚು ಆಕರ್ಷಣೆ ಹೊಂದಿರುವ ಬಾಡಿ ಲೈನ್‌ ಒಳಗೊಂಡಂತೆ ಇನ್ನೂ ಕೆಲವು ಲೈನಿಂಗ್‌ಗಳನ್ನು ನೀಡಲಾಗಿದೆ. ಸೈಡ್ ಫೆಂಡರ್‌ಗಳಲ್ಲಿ ಇಂಡಿಕೇಟರ್‌ಗಳನ್ನು ಅಳವಡಿಸಲಾಗಿದ್ದು, ಹೊಸ ಕಾರಿನಲ್ಲಿ 13-ಇಂಚಿನ ಸ್ಟೀಲ್ ವೀಲ್ಹ್‌ಗಳೊಂದಿಗೆ ತೆಳುವಾದ ಟೈರ್‌ಗಳನ್ನು ಜೋಡಿಸಲಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹಿಂಭಾಗದ ವಿನ್ಯಾಸದ ಕುರಿತು ಮಾತನಾಡುವುದಾದರೆ ಆಲ್ಟೊ ಕೆ10 ಮಾದರಿಯುಲ್ಲಿ ಇಂಟಿಗ್ರೇಟೆಡ್ ಸ್ಪಾಯ್ಲರ್, ಸ್ಕ್ವೇರ್ಡ್ ಆಫ್ ಟೈಲ್‌ಲೈಟ್‌ಗಳ ಸೆಟ್ಅಪ್ ಮತ್ತು ಹೈ ಮೌಂಟೆಡ್ ಥರ್ಡ್ ಬ್ರೇಕ್ ಲೈಟ್ ಅನ್ನು ಹೊಂದಿದ್ದು, ಮುಂಭಾಗದಲ್ಲಿರುವಂತೆ ಹಿಂಭಾಗದ ಬಂಪರ್ ಸಾಕಷ್ಟು ಬದಲಾವಣೆಯಿಂದ ಕೂಡಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಒಳಾಂಗಣ ವೈಶಿಷ್ಯತೆಗಳು

ಹೊಸ ಆಲ್ಟೊ ಕೆ10 ಮಾದರಿಯಲ್ಲಿ ಒಳ ಪ್ರವೇಶಿಸುತ್ತಿದ್ದಂತೆ ಕಪ್ಪು ಬಣ್ಣದ ಆಂತರಿಕ ಥೀಮ್ ಗಮನಸೆಳೆಯುತ್ತದೆ. ಸ್ಟೀರಿಂಗ್ ವೀಲ್ಹ್ ಮತ್ತು ಹೊಸ ಇನ್ಫೋಟೈನ್‌ಮೆಂಟ್, ಇನ್ಫೋಟೈನ್‌ಮೆಂಟ್ ಪರದೆಯ ಸುತ್ತಲೂ ಸಿಲ್ವರ್ ಆಕ್ಸೆಂಟ್ ಉತ್ತಮವಾಗಿವೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹೊಸ ಕಾರಿನ ಇನ್ಫೋಟೈನ್‌ಮೆಂಟ್ ಯೂನಿಟ್ ಕುರಿತು ಮಾತನಾಡುವುದಾದರೇ ಹೊಸ ಕಾರಿನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಎರಡಕ್ಕೂ ಬೆಂಬಲಿಸುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇನ್ಫೋಟೈನ್‌ಮೆಂಟ್ ಸೆಟಪ್ ಅನ್ನು 4-ಸ್ಪೀಕರ್ ಆಡಿಯೋ ಸಿಸ್ಟಂನೊಂದಿಗೆ ಸಂಪರ್ಕಿಸಲಾಗಿದ್ದು, ಟಾಪ್ ಎಂಡ್ ವೆರಿಯೆಂಟ್ ವಿಎಕ್ಸ್‌ಐ+ ಮಾದರಿಯಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಲಭ್ಯವಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇದರೊಂದಿಗೆ ಹೊಸ ಸ್ಟೀರಿಂಗ್ ವೀಲ್ಹ್ ‌ನಲ್ಲಿ ಫೋನ್ ಮತ್ತು ಅದರ ಶಬ್ದಗಳ ನಿಯಂತ್ರಕ ಮೌಂಟೆಡ್‌ಗಳನ್ನು ಅಳವಡಿಸಲಾಗಿದ್ದು, ಗಾಢ ಕಪ್ಪು ಬಣ್ಣದ ಥೀಮ್ ಕಾರು ಚಾಲನೆಗೆ ಮತ್ತಷ್ಟು ಉತ್ಸಾಹ ನೀಡುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ನಗರಗಳಲ್ಲಿ ಮಾತ್ರವಲ್ಲದೇ ದೂರದ ಪ್ರಯಾಣಕ್ಕೂ ಅನುಕೂಲಕರವಾಗಿರುವಂತಹ ಉತ್ತಮವಾದ ಆಸನಗಳು ಮತ್ತು ಎತ್ತರ ಹೊಂದಾಣಿಕೆಯನ್ನು ಹೊಂದಿರುವ ಡ್ರೈವರ್ ಸೀಟ್‌, ಉತ್ತಮ ಸ್ಥಳಾವಕಾಶ ಹೊಂದಿರುವ ಎರಡನೇ ಸಾಲಿನ ಆಸನಗಳು ಗಮನಸೆಳೆಯುತ್ತವೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆದರೆ ಹೊಸ ಕಾರಿನಲ್ಲಿ ಗ್ರಾಹಕರಿಗೆ ಬೇಸರ ಉಂಟುಮಾಡುವ ಅಂಶವೆಂದರೆ ಹಿಂಬದಿ ಆಸನದಲ್ಲಿರುವ ಕಿಟಿಕಿಗಳನ್ನು ತೆರೆಯಲು ಮತ್ತು ಮುಚ್ಚಲು ಪವರ್ ವಿಂಡೋ ಬದಲಾಗಿ ರೋಲ್ ಡೌನ್ ಫೀಚರ್ಸ್ ನೀಡಿದ್ದು, ಹೊಸ ಕಾರನ್ನು ಪ್ರಮುಖ ಬದಲಾವಣೆಗಳೊಂದಿಗೆ ಬಜೆಟ್‌ ಬೆಲೆಯಲ್ಲಿ ಉಳಿಸಿಕೊಳ್ಳಲು ಹಲವು ಕಡೆಗಳಲ್ಲಿ ನೀರಿಕ್ಷೆ ಮಾಡಲಾಗಿದ್ದ ಪ್ರೀಮಿಯಂ ಫೀಚರ್ಸ್‌ಗಳಿಗೆ ಕತ್ತರಿ ಹಾಕಲಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆದಾಗ್ಯೂ ಹಿಂದಿನ ಸೀಟುಗಳಲ್ಲಿ ಸಾಮಾನ್ಯ ಭಾರತೀಯ ಖರೀದಿದಾರರಿಗೆ ಯೋಗ್ಯವಾದ ಲೆಗ್‌ರೂಂ ಮತ್ತು ಹೆಡ್‌ರೂಮ್ ಅನ್ನು ನೀಡಲಾಗಿದ್ದು, ಹೊಸ ಕಾರಿನಲ್ಲಿ ಐದು ಜನ ಪ್ರಯಾಣ ಮಾಡಬಹುದಾದರೂ ಅರಾಮದಾಯಕ ಪ್ರಯಾಣಕ್ಕೆ ನಾಲ್ಕು ಜನರಿಗೆ ಉತ್ತಮವಾಗಿದೆ ಎನ್ನಬಹುದು.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇನ್ನು ಹೊಸ ಕಾರಿನಲ್ಲಿರುವ ಸುರಕ್ಷತಾ ಸೌಲಭ್ಯಗಳು ಕೂಡಾ ಉತ್ತಮವಾಗಿದ್ದು, ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಮುಂಭಾಗದಲ್ಲಿ ಸೀಟ್ ಬೆಲ್ಟ್ ಅಲರ್ಟ್, ಇಬಿಡಿ ಜೊತೆಗೆ ಎಬಿಎಸ್ ಪಡೆದುಕೊಂಡಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆಕ್ಸೆಸರಿಸ್ ಸೌಲಭ್ಯಗಳು

ಮಾರುತಿ ಸುಜುಕಿಯು ಹೊಸ ಆಲ್ಟೊ ಕೆ10 ಮಾದರಿಗಾಗಿ ಗ್ಲಿಂಟೊ ಮತ್ತು ಇಂಪ್ಯಾಕ್ಟೊ ಎನ್ನುವ ಎರಡು ಕಸ್ಟಮೈಜ್ಡ್ ಪ್ಯಾಕೇಜ್‌ಗಳನ್ನು ಸಹ ನೀಡುತ್ತಿದ್ದು, ಮೊದಲ ಕಸ್ಟಮೈಜ್ಡ್ ಪ್ಯಾಕೇಜ್‌ನಲ್ಲಿ ವಿವಿಧ ವೈಶಿಷ್ಟ್ಯತೆಗಳೊಂದಿಗೆ ಕ್ರೋಮ್ ಸೌಲಭ್ಯಗಳನ್ನು ನೀಡಲಿದ್ದರೆ ಎರಡನೇ ಕಸ್ಟಮೈಜ್ಡ್ ಪ್ಯಾಕೇಜ್‌ನಲ್ಲಿ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳಿಗೆ ಅನುಮತಿಸುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇನ್ನು ಹೊಸ ಆಲ್ಟೊ ಕೆ10 ಮಾದರಿಯಲ್ಲಿ ಕಂಪನಿಯು 6 ಹೊಸ ಬಣ್ಣಗಳ ಆಯ್ಕೆಗಳನ್ನು ನೀಡಿದ್ದು, ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸಿಜ್ಲಿಂಗ್ ರೆಡ್, ಸ್ಪೀಡಿ ಬ್ಲೂ ಮತ್ತು ಹೆಚ್ಚಿನ ಆಕರ್ಷಣೆ ಹೊಂದಿರುವ ಅರ್ಥ್ ಗೋಲ್ಡ್ ಬಣ್ಣಗಳನ್ನು ನೀಡಲಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ

ಹೊಸ ಆಲ್ಟೊ ಕೆ10 ಮಾದರಿಯಲ್ಲಿ ಮಾರುತಿ ಸುಜುಕಿಯು ಇತ್ತೀಚಿನ ಕೆ10ಸಿ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಹೊಸ 998 ಸಿಸಿ ಎಂಜಿನ್ ಮಾದರಿಯು 5,500 ಆರ್‌ಪಿಎಂ ನಲ್ಲಿ 66 ಬಿಎಚ್‌ಪಿ ಮತ್ತು 3,500 ಆರ್‌ಪಿಎಂನಲ್ಲಿ 89 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಹೊಂದಿರುವ ಹೊಸ ಕಾರು ಪ್ರತಿ ಲೀಟರ್‌ಗೆ ಮ್ಯಾನುವಲ್ ಮಾದರಿಯು 24.39 ಕಿ.ಮೀ ಮೈಲೇಜ್ ನೀಡುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹೊಸ ಕಾರಿನಲ್ಲಿ ಎಎಂಟಿ ಮಾದರಿಯು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ಖಾತ್ರಿಪಡಿಸಲಿದ್ದು, ಹೆಚ್ಚಿನ ಮಟ್ಟದ ಇಂಧನ ದಕ್ಷತೆಯೊಂದಿಗೆ ಹೊಸ ಮಾದರಿಯು ಎಂಟ್ರಿ ಲೆವಲ್ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

2022ರ ಆಲ್ಟೊ ಕೆ10 ಮಾದರಿಯು 3,530 ಎಂಎಂ ಉದ್ದ, 1,490 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರ, 2,380 ಎಂಎಂ ವ್ಹೀಲ್‌ಬೆಸ್ ಮೂಲಕ 1,150 ಕೆಜಿ ಒಟ್ಟಾರೆ ತೂಕ ಹೊಂದಿದ್ದು, ಹೊಸ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 85 ಎಂಎಂ ಉದ್ದ, 45 ಎಂಎಂ ಎತ್ತರದೊಂದಿಗೆ 20 ಎಂಎಂ ವ್ಹೀಲ್‌ಬೆಸ್ ಹೊಂದಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹೊಸ ಕಾರನ್ನು ಮಾರುತಿ ಸುಜುಕಿ ಕಂಪನಿಯು ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ ಆಧರಿಸಿ ನಿರ್ಮಾಣಗೊಳಿಸಿದ್ದು, ಹೊಸ ಪ್ಲಾಟ್‌ಫಾರ್ಮ್ ಆಧರಿಸಿರುವ ಮಾರುತಿ ಸಜುಕಿಯ ಇತ್ತೀಚಿನ ಹೊಸ ಕಾರು ಮಾದರಿಗಳು ಕಾರ್ಯಕ್ಷಮತೆ ಸುಧಾರಣೆ ಜೊತೆಗೆ ಸುರಕ್ಷತೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಚಾಲನಾ ವೈಖರಿ

ಹೊಸ ಕಾರಿನಲ್ಲಿರುವ ಸುಧಾರಿತ ಡ್ಯುಯಲ್‌ಜೆಟ್ ವಿವಿಟಿ ಎಂಜಿನ್‌ ಮಾದರಿಯು ನಗರಗಳಲ್ಲಿ ಸುಲಭವಾಗಿ ಸಂಚರಿಸಲು ಉತ್ತಮವಾಗಿದ್ದು, ಎಂಜಿನ್ ಸ್ಪಂದನೆ ಗಮನ ಸೆಳೆಯುತ್ತದೆ. ಜೊತೆಗೆ ಹೆದ್ದಾರಿ ಚಾಲನೆಯಲ್ಲಿ ಮೂರು ಅಂಕಿಯ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಿದ್ದು, ಆದಾಗ್ಯೂ ಹೆಚ್ಚಿನ ಪ್ರಯಾಣಿಕರ ಸಂದರ್ಭದಲ್ಲಿ ಕಾರು ತ್ವರಿತ ವೇಗ ಪಡೆದುಕೊಳ್ಳುವಲ್ಲಿ ತುಸು ಸಮಯ ತೆಗೆದುಕೊಳ್ಳುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹೊಸ ಕಾರಿನಲ್ಲಿ ಹೊರಗಿನ ಶಬ್ದವನ್ನು ಕ್ಯಾಬಿನ್ ಒಳಪ್ರವೇಶಿಸದಂತೆ ಸಾಕಷ್ಟು ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಬದಲಾವಣೆ ನಂತರವೂ ಹೆಚ್ಚಿನ ಆರ್‌ಪಿಎಂನಲ್ಲಿ ಎಂಜಿನ್‌ನಿಂದ ಕೆಲವೊಮ್ಮೆ ಹೆಚ್ಚಿನ ಶಬ್ದವು ಅನುಭವಕ್ಕೆ ಬರುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಜೊತೆಗೆ ಹೊಸ ಕಾರಿನ ಎರಡು ಗೇರ್‌ಬಾಕ್ಸ್ ಮಾದರಿಗಳಲ್ಲೂ ಲೈಟ್ ಕ್ಲಚ್‌ ಹೊಂದಿದ್ದು, ಮ್ಯಾನುವಲ್ ಮಾದರಿಯು ದಿನಬಳಕೆಗೆ ಉತ್ತಮವಾಗಿದೆ ಎನ್ನಬಹುದು. ದೈನಂದಿನ ನಗರ ಪ್ರಯಾಣದ ಜೊತೆಗೆ ಯಾವುದೇ ಹೆಚ್ಚಿನ ಆಯಾಸವಿಲ್ಲದ ಚಾಲನೆಗೆ ಎಎಂಟಿ ಆವೃತ್ತಿಯು ಖರೀದಿಗೆ ಉತ್ತಮವಾಗಿದೆ ಎನ್ನಬಹುದು.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆದರೆ ಎಎಂಟಿ ಮಾದರಿಯಲ್ಲಿ ಕೆಲವೊಮ್ಮೆ ಕಡಿಮೆ ವೇಗದಲ್ಲಿ ಗೇರ್‌ ಬದಲಾಯಿಸುವಾಗ ಜರ್ಕಿ ಅನುಭವವಾಗಲಿದ್ದು, ಬ್ರೇಕ್ ಪೆಡಲ್ ಹೆಚ್ಚಿನ ಕಾರ್ಯಕ್ಷಮತೆ ಹೊಂದಿಲ್ಲವಾದರೂ ಕಾರ್ಯನಿರ್ವಹಣೆಗೆ ಸುಲಭವಾಗಿದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹಾಗೆಯೇ ಹೊಸ ಕಾರಿನಲ್ಲಿ ಸಸ್ಷೆಂಷನ್ ಸೌಲಭ್ಯವು ಉತ್ತಮವಾಗಿದ್ದು, ನಯವಾದ ರಸ್ತೆಗಳಲ್ಲಿ ಮಾತ್ರವಲ್ಲ ಒರಟಾದ ರಸ್ತೆಗಳಲ್ಲಿಯೂ ಸಹ ಹೊಸ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಕಡಿಮೆ ಮತ್ತು ಮಧ್ಯಮ ವೇಗದಲ್ಲಿ ಉತ್ತಮ ಹಿಡಿತದೊಂದಿಗೆ ಮುನ್ನುಗ್ಗುತ್ತದೆ.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಇದರೊಂದಿಗೆ ಪ್ರವೇಶ ಮಟ್ಟದ ಕಾರು ಖರೀದಿದಾರರಿಗೆ ಹೊಸ ಆಲ್ಟೊ ಕೆ10 ಉತ್ತಮ ಮಾದರಿ ಎನ್ನಬಹುದಾಗಿದ್ದು, ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗಿರುವ ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯವು ಕಾರು ನಿಲುಗಡೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ ಎನ್ನಬಹುದು.

ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆಲ್ಟೊ ಕೆ10 ವಿಶೇಷತೆಗಳು

ಉದ್ದಳತೆ ಆಲ್ಟೊ ಕೆ10
ಉದ್ದ 3530 ಎಂಎಂ
ಅಗಲ 1490 ಎಂಎಂ
ಎತ್ತರ 1520 ಎಂಎಂ
ವ್ಹೀಲ್‌ಬೆಸ್ 2380 ಎಂಎಂ
ಫ್ಯೂಲ್ ಟ್ಯಾಂಕ್ 27 ಲೀಟರ್
ಎಂಜಿನ್
ಸಾಮರ್ಥ್ಯ 3 ಸಿಲಿಂಡರ್
ಎಂಜಿನ್ 998 ಸಿಸಿ
ಹಾರ್ಸ್ ಪವರ್ 66.62 ಬಿಎಚ್‌ಪಿ
ಟಾರ್ಕ್ 89 ಎನ್ಎಂ ಟಾರ್ಕ್
ಗೇರ್‌ಬಾಕ್ಸ್ 5-ಸ್ಪೀಡ್ ಮ್ಯಾನುವಲ್/ ಎಜಿಎಸ್
ಸಸ್ಷೆಂಷನ್
ಮುಂಭಾಗ ಮ್ಯಾಕ್ ಫರ್ಸನ್ ಸ್ಟ್ರಟ್ಕಾಯಿಲ್ ಸ್ಪಿಂಗ್ ಸಸ್ಷೆಂಷನ್
ಹಿಂಭಾಗ ಕಾಯಿಲ್ ಸ್ಪ್ರಿಂಗ್ ಹೊಂದಿರುವ ಟಾರ್ಶನ್ ಬೀಮ್
ಬ್ರೇಕ್
ಮುಂಭಾಗ ಡಿಸ್ಕ್
ಹಿಂಭಾಗ ಡ್ರಮ್
ಟೈರ್
ಟೈರ್ 145/80 ಆರ್13 ಟೈರ್
ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಆಲ್ಟೊ ಕೆ10 ಬೆಲೆ ಪಟ್ಟಿ

ಆಲ್ಟೊ ಕೆ10 ಮ್ಯಾನುವಲ್ ಎಜಿಎಸ್
ಸ್ಟ್ಯಾಂಡರ್ಡ್ ರೂ. 3,99,000
ಎಲ್ಎಕ್ಸ್ಐ ರೂ. 4,82,000
ವಿಎಕ್ಸ್ಐ ರೂ. 4,99,500 ರೂ. 5,49,500
ವಿಎಕ್ಸ್ಐ ಪ್ಲಸ್ ರೂ. 5,35,500 ರೂ. 5,83,500
ಸುಧಾರಿತ ವೈಶಿಷ್ಟ್ಯತೆ ಹೊಂದಿರುವ 2022ರ ಮಾರುತಿ ಸುಜುಕಿ ಆಲ್ಟೊ ಕೆ10 ರಿವ್ಯೂ

ಹೊಸ ಆಲ್ಟೊ ಕೆ10 ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕೆ10 ಹೊಸ ಮಾದರಿಯೊಂದಿಗೆ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುವ ಸಿದ್ದತೆಯಲ್ಲಿದ್ದು, ಇದು ಮೊದಲ ಬಾರಿಗೆ ಕಾರು ಖರೀದಿದಾರರಿಗೆ ಹೆಚ್ಚಿನ ಆಕರ್ಷಣೆಯಾಗಲಿದೆ. ಈ ಹಿಂದಿನ ಸರಣಿಗಳಿಂತಲೂ ಹೆಚ್ಚು ಸುಧಾರಿಸಿರುವ ಹೊಸ ಆಲ್ಟೊ ಕೆ10 ಮಾದರಿಯಲ್ಲಿ ಸುಧಾರಿತ ತಾಂತ್ರಿಕ ಸೌಲಭ್ಯಗಳು, ಉನ್ನತೀಕರಿಸಿದ ಎಂಜಿನ್ ಮತ್ತು ಬಜೆಟ್ ಬೆಲೆಯಲ್ಲಿ ಈ ವಿಭಾಗದಲ್ಲಿನ ಉತ್ತಮ ಮಾದರಿಯಾಗಿದೆ ಎನ್ನಬಹುದು.

More from DriveSpark

Article Published On: Wednesday, August 24, 2022, 16:02 [IST]
English summary
New maruti suzuki alto k10 review design features engine driving impressions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+