ಭಾರತೀಯರಿಗಾಗಿ ಫೋಕ್ಸ್‌ವ್ಯಾಗನ್ 'ಎಮಿಯೊ' ಕೊಡುಗೆ

By Nagaraja

ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಓಗೊಟ್ಟಿರುವ ಜರ್ಮನಿಯ ಪ್ರತಿಷ್ಠಿತ ಸಂಸ್ಥೆ ಫೋಕ್ಸ್ ವ್ಯಾಗನ್ ಅತಿ ನೂತನ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದೆ. 'ಮೇಡ್ ಇನ್ ಇಂಡಿಯಾ' ಎಂಬ ಬಿರುದು ಈ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕಾರು ಪಡೆಯಲು, ಮತ್ತಷ್ಟು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ.

Also Read: ಟಾಟಾ ಟಿಯಾಗೊ ಸಂಪೂರ್ಣ ಚಾಲನಾ ವಿಮರ್ಶೆ

ಇವೆಲ್ಲದರ ನಡುವೆ ಫೋಕ್ಸ್ ವ್ಯಾಗನ್ ಎಮಿಯೊ ಗ್ರಾಹಕರ ಪ್ರೀತಿಗೆ ಪಾತ್ರವಾಗುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ದೇಶಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಸೇರಿದಂತೆ ಸಾಲು ಸಾಲು ಕಾರುಗಳ ಸವಾಲನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧ ಎಮಿಯೊ ಕಾರನ್ನು ಸಮಗ್ರವಾಗಿ ವಿಮರ್ಶೆ ಮಾಡುವ ಪ್ರಯತ್ನವನ್ನು ಮಾಡಲಾಗುವುದು.

ಹೊರಮೈ

ಹೊರಮೈ

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಫೋಕ್ಸ್ ವ್ಯಾಗನ್ ಎಮಿಯೊ, ಸಂಸ್ಥೆಯ ಜನಪ್ರಿಯ ಪೊಲೊ ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣಗೊಂಡಿದೆ.

 ಹೊರಮೈ

ಹೊರಮೈ

ಮುಂಭಾಗದಲ್ಲಿ ನೋಡುವಾಗ ಪೊಲೊಗೆ ಕೊಂಚ ಸಾಮ್ಯತೆಯನ್ನು ಪಡೆದುಕೊಂಡಿದೆ. ಹಾಗಿದ್ದರೂ ಕಪ್ಪು ಸ್ಪರ್ಶಿತ ಡ್ಯುಯಲ್ ಬೀಮ್ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿದೆ.

ಹೊರಮೈ

ಹೊರಮೈ

ಕಾರಿನ ಹೊರಮೈಯಲ್ಲಿ ವಿಶಿಷ್ಟತೆ ಕಾಪಾಡಿಕೊಂಡಿರುವ ಸ್ವಭಾವ ರೇಖೆಗಳು, ಫ್ರಂಟ್ ಗ್ರಿಲ್ ಹಾಗೂ ಬದಿಯಲ್ಲಿ ಎಲ್ ಇಡಿ ಟರ್ನ್ ಇಂಡಿಕೇಟರ್ ಗಳನ್ನು ಕಾಣಬಹುದಾಗಿದೆ.

ಹೊರಮೈ

ಹೊರಮೈ

ಸಬ್ ಫೋರ್ ಮೀಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಸ್ಟಾಟಿಕ್ ಕಾರ್ನರಿಂಗ್ ಲೈಟ್ಸ್ ಗಳನ್ನು ಫೋಕ್ಸ್ ವ್ಯಾಗನ್ ಎಮಿಯೊ ಮೂಲಕ ನೀಡಲಾಗುತ್ತಿದೆ. ಅಂತೆಯೇ ಹಿಂಭಾಗದಲ್ಲೂ ಪರಿಣಾಮಕಾರಿ ವಿನ್ಯಾಸ ಮೈಗೂಡಿಸಲಾಗಿದೆ.

ಒಳಮೈ

ಒಳಮೈ

ಕಾರಿನ ಒಳಮೈಯಲ್ಲೂ ಪೊಲೆಗೆ ಸಮಾನವಾದ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಇದು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹಾಗೂ ಸಿಲ್ವರ್ ಸ್ಪರ್ಶವನ್ನು ಕಾಣಬಹುದಾಗಿದೆ.

ಒಳಮೈ

ಒಳಮೈ

ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್, ಆಡಿಯೋ ಮತ್ತು ಫೋನ್ ನಿಯಂತ್ರಣ ನಿಮ್ಮ ಚಾಲನೆಯನ್ನು ಸುಲಭವಾಗಿಸಲಿದೆ. ಹಿಂಭಾಗದ ಪ್ರಯಾಣಿಕರಿಗೂ ಏರ್ ವೆಂಟ್ಸ್ ಸೇವೆ ಇರಲಿದೆ.

ಎಂಜಿನ್ ಆಯ್ಕೆಗಳು

ಎಂಜಿನ್ ಆಯ್ಕೆಗಳು

ನೂತನ ಎಮಿಯೊ 1.2 ಲೀಟರ್ 3 ಸಿಲಿಂಡರ್ ಎಂಪಿಐ ಮತ್ತು 1.5 ಲೀಟರ್ 4 ಸಿಲಂಡರ್ ಟಿಡಿಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಪೆಟ್ರೋಲ್: 104 ಅಶ್ವಶಕ್ತಿ, 175 ಎನ್‌ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.

ಡೀಸೆಲ್: 89 ಅಶ್ವಶಕ್ತಿ, 230 ಎನ್‌ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಹಾಗೂ 7 ಸ್ಪೀಡ್ ಡಿಎಸ್ ಜಿ ಟ್ರಾನ್ಸ್ ಮಿಷನ್.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ನೂತನ ಎಮಿಯೊ ಮಿರರ್ ಲಿಂಕ್ ಎಂಬ ವೈಶಿಷ್ಟ್ಯವನ್ನು ಪಡೆದಿದ್ದು, ಇದರ ಮುಖಾಂತರ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲೇ ಫೋನ್ ನಿಯಂತ್ರಿಸಬಹುದಾಗಿದೆ. ಈ ಮೂಲಕ ಚಾಲನೆ ವೇಳೆಯಲ್ಲಿ ಫೋನ್ ಕರೆ ಸ್ವೀಕರಿಸಲು, ಮೆಸೇಜ್ ರವಾನಿಸಲು ಹಾಗೂ ಸಂಗೀತ ಆಲಿಸಲು ಸುಲಭವಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ನೂತನ ಎಮಿಯೊದಲ್ಲಿ ಆಳವಡಿಸಲಾಗಿರುವ ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್ ಗಳು ಯಾವುದೇ ತಲೆ ನೋವಿಲ್ಲದೆ ಪಾರ್ಕಿಂಗ್ ಮಾಡಲು ಸಹಕಾರಿಯಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಇನ್ನು ಇದೇ ಮೊದಲ ಬಾರಿಗೆ ರೈನ್ ಸೆನ್ಸಿಂಗ್ ವೈಪರ್ ಮತ್ತು ಕ್ರೂಸ್ ಕಂಟ್ರೋಲ್ ಸೇವೆಯನ್ನು ಒದಗಿಸಲಾಗುತ್ತಿದೆ. ಅಂತೆಯೇ ಮುಂಭಾಗದಲ್ಲಿ ಆರ್ಮ್ ರೆಸ್ಟ್ ಸ್ಟೋರೆಜ್, ಎಲ್ ಇಡಿ ಬೆಳಕು ಹಾಗೂ ಕೂಲ್ಡ್ ಗ್ಲೋವ್ ಬಾಕ್ಸ್ ಸೌಲಭ್ಯಗಳಿರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಇನ್ನುಳಿದಂತೆ ಕ್ಲೈಮಾಟ್ರಾನಿಕ್ ಎಂಬ ಕಂಪ್ಯೂಟರ್ ನಿಯಂತ್ರಿತ ಎಸಿ, ಆಟೋ ಡಿಮ್ಮಿಂಗ್ ಐಆರ್‌ವಿಎಂ ಹಾಗೂ ರಿಮೋಟ್ ನಿಯಂತ್ರಿತ ವಿಂಡೋ ಮುಂತಾದ ಸೇವೆಗಳಿರುತ್ತದೆ.

 ಎಮಿಯೊ ನಿರ್ವಹಣೆ ಮತ್ತು ಮೈಲೇಜ್

ಎಮಿಯೊ ನಿರ್ವಹಣೆ ಮತ್ತು ಮೈಲೇಜ್

ಮಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಿರುವ ಫೋಕ್ಸ್ ವ್ಯಾಗನ್ ಎಮಿಯೊದ ಪೆಟ್ರೋಲ್ ಹಾಗೂ ಡೀಸೆಲ್ ಮ್ಯಾನುವಲ್ ವೆರಿಯಂಟ್ ಗಳು ಅನುಕ್ರಮವಾಗಿ 17 ಹಾಗೂ 20 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಡಿಎಸ್‌ಜಿ ಗೇರ್ ಬಾಕ್ಸ್ ಸಹ 17ರಿಂದ 18 ಕೀ.ಮೀ. ಗಳಷ್ಟು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

10 ವಿಶಿಷ್ಟತೆಗಳು

10 ವಿಶಿಷ್ಟತೆಗಳು

ರೈನ್ ಸೆನ್ಸಿಂಗ್ ವೈಪರ್ (ಫಸ್ಟ್ ಇನ್ ಸೆಗ್ಮೆಂಟ್), ಆಟೋ ಡಿಮ್ಮಿಂಗ್ ಐಆರ್‌ವಿಎಂ, ಕ್ರೂಸ್ ಕಂಟ್ರೋಲ್ (ಫಸ್ಟ್ ಇನ್ ಸೆಗ್ಮೆಂಟ್), ಹಿಂದುಗಡೆ ಎಸಿ ವೆಂಟ್ಸ್, ಎಬಿಎಸ್, ಇಪಿಎಸ್ ಮತ್ತು ಸ್ಟ್ಯಾಂಡರ್ಡ್ ಡ್ಯುಯಲ್ ಏರ್ ಬ್ಯಾಗ್, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ, ಕೂಲ್ಡ್ ಗ್ಲೋವ್ ಬಾಕ್ಸ್, ಫ್ರಂಟ್ ಆರ್ಮ್ ರೆಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಇಂಮೊಬಿಲೈಜರ್

ಬೆಲೆ

ಬೆಲೆ

ಅಂದ ಹಾಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಆರು ಲಕ್ಷ ರು.ಗಳಿಂದ ಒಂಬತ್ತು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಎಮಿಯೊ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆ ಬಿಡುಗಡೆ ಮಾಡಲಿರುವ ಮೊದಲ ಕಾಂಪಾಕ್ಟ್ ಸೆಡಾನ್ ಕಾರಾಗಿದ್ದು, ಸಂಪೂರ್ಣವಾಗಿಯೂ ಭಾರತದ ಚಕನ್ ಘಟಕದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಮಾರುತಿ ಸ್ವಿಫ್ಟ್ ಡಿಜೈರ್ ಗಳಂತಹ ಜನಪ್ರಿಯ ಕಾರುಗಳ ಸವಾಲು ಎದುರಾಗಲಿರುವುದರಿಂದ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿದೆ. ಒಟ್ಟಾರೆಯಾಗಿ ವಿನ್ಯಾಸ, ನಿರ್ವಹಣೆ, ಎಂಜಿನ್, ವೈಶಿಷ್ಟ್ಯ ಹಾಗೂ ನಿರ್ಮಾಣ ಗುಣಮಟ್ಟತೆಯಲ್ಲಿ ಉನ್ನತ ದರ್ಜೆಯನ್ನು ಕಾಪಾಡಿಕೊಂಡಿದೆ.

ಇವನ್ನೂ ಓದಿ...

ಮುಖವಾಡ ಕಳಚಿಟ್ಟ ರೆನೊ ಕ್ವಿಡ್ ಎಎಂಟಿ vs ಆಲ್ಟೊ ಕೆ10 ಎಎಂಟಿ

ಡಿಜೈರ್ vs ಜೆಸ್ಟ್; ಕಾಂಪಾಕ್ಟ್ ಸೆಡಾನ್ ಎಎಂಟಿ ಕಾರುಗಳ ರೇಸ್

More from DriveSpark

Article Published On: Wednesday, March 9, 2016, 9:16 [IST]
English summary
Volkswagen Ameo Review: German Engineering To Dent Other Compact Sedans?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+