ಕಾರು ಆಯ್ಕೆ ಮಾಡಲು ನೆರವಾಗುವ ಮ್ಯಾಜಿಕ್ ಟೂಲ್

ಯಾವ ಕಂಪನಿಯ ಕಾರು ಹಿತ, ಯಾಕೆ ಆ ಮಾಡೆಲ್ ಕಾರು ಖರೀದಿಸಬಾರದು. ನಮ್ಮ ಅವಶ್ಯಕತೆಗೆ ತಕ್ಕಂತೆ ಆ ಕಾರು ಇದೆಯೇ? ಅದೇ ದರಕ್ಕೆ ಅದಕ್ಕಿಂತ ಉತ್ತಮವಾದ ಕಾರು ಸಿಗಬಹುದೇ? ಮೈಲೇಜ್ ಎಷ್ಟು? ದರವೆಷ್ಟು? ಫೀಚರುಗಳೇನು? ಬೇರೆ ಕಾರಿನೊಂದಿಗೆ ಹೋಲಿಕೆ ಮಾಡುವುದು ಹೇಗೆ? ಹೀಗೆ ಕಾರು ಖರೀದಿಗೆ ಮುನ್ನ ಸಾಕಷ್ಟು ಅಧ್ಯಯನ ನಡೆಸುವುದು ಅತ್ಯಂತ ಅಗತ್ಯ.
ಪ್ರತಿಕಾರಿನ ಬಗೆಯೂ ಪುಟಗಟ್ಟಲೆ ಓದಲು ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ದೊರಕಬಹುದು. ಆದರೆ ಅದನ್ನು ಓದುವಷ್ಟು ವ್ಯವಧಾನ ಎಲ್ಲರಿಗೂ ಇರುವುದು ಕಷ್ಟ. ಅಷ್ಟೊಂದು ಮಾಹಿತಿಗಳನ್ನು ಓದುವುದು ಸುಲಭವೂ ಅಲ್ಲ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಮಾಹಿತಿಯನ್ನು ಪಡೆಯುವ ಸರಳ ವ್ಯವಸ್ಥೆ ಇದ್ದರೆ ಚೆನ್ನಾಗಿತ್ತು ಎಂದು ಹೆಚ್ಚಿನವರು ಬಯಸಬಹುದು.
ನಿಮ್ಮ ಕಾರು ಖರೀದಿ ಬಯಕೆಗೆ ಇನ್ನಷ್ಟು ಅಶ್ವಶಕ್ತಿ ನೀಡಲು ಡ್ರೈವ್‌ಸ್ಪಾರ್ಕ್ ಸಿದ್ಧವಾಗಿದೆ. ನಾವೊಂದು ವಿಶೇಷ ಮಾತ್ರಿಕ ಟೂಲ್ ರಚಿಸಿದ್ದೇವೆ. ಇಲ್ಲಿ ನಿಮಗೆ ಬೇಕಾದ ಎಲ್ಲಾ ಕಾರುಗಳ ಮಾಹಿತಿಗಳು ಮೌಸ್ ಕ್ಲಿಕ್‌ನಲ್ಲಿ ದೊರಕುತ್ತವೆ. ಇಲ್ಲಿ ಕಾರು ಕಾರುಗಳನ್ನು ಆವೃತ್ತಿಗಳ ನಡುವೆ ಹೋಲಿಕೆ ಮಾಡಿಯೂ ನೋಡಬಹುದಾಗಿದೆ. ಇದು ಬ್ರಹ್ಮಾಂಡದಷ್ಟು ಮಾಹಿತಿ ನೀಡುವ ಸಿಂಪಲ್ ಟೂಲ್. ಈ ಟೂಲ್ ಜೊತೆ ಆಟವಾಡುತ್ತ ನಿಮಗೆ ಬೇಕಾದ ಮಾಹಿತಿ ಪಡೆಯಬಹುದು.
ಕಂಪನಿಗೆ ತಕ್ಕಂತೆ ಮತ್ತು ದರಕ್ಕೆ ತಕ್ಕಂತೆ ಕಾರು ಆಯ್ಕೆಮಾಡಲು ಈ ಟೂಲ್ ನೆರವು ನೀಡುತ್ತದೆ. ಉದಾಹರಣೆಗೆ ಒಂದು ಲಕ್ಷ ರು.ನಿಂದ 5 ಲಕ್ಷ ರು.ವರೆಗಿನ ಕಾರಿನ ಮಾಹಿತಿ ಪಡೆಯಲು ಅಥವಾ ಹೋಲಿಕೆ ಮಾಡಲು ಬಯಸುತ್ತೀರಿ ಎಂದಿಟ್ಟುಕೊಳ್ಳೋಣ. ಇಲ್ಲೊಂದು ಸ್ಕೇಲ್ ಇದೆ. ಅಲ್ಲಿ ನಿಮಗೆ ಬೇಕಾದ ದರವನ್ನು ಆಯ್ಕೆ ಮಾಡಿಕೊಂಡು ಸರ್ಚ್ ಮಾಡಿದರೆ ಸಾಕು. ಮಾಹಿತಿಗಳ ಖಜಾನೆ ತೆರೆದುಕೊಳ್ಳುತ್ತದೆ.
ಇಲ್ಲಿ ವಿವಿಧ ಕಾರುಗಳ ಆವೃತ್ತಿಗಳೂ ಇವೆ. ಆವೃತ್ತಿ ಆವೃತ್ತಿಗಳ ನಡುವೆ ಹೋಲಿಕೆ ಮಾಡಿನೋಡಬಹುದಾಗಿದೆ. ಕಾರುಗಳ ಬಣ್ಣ, ಫೀಚರುಗಳ ಮಾಹಿತಿಯಿದೆ. ಇದು ನೋಡಲು ಪುಟ್ಟ ಟೂಲ್ ತರಹ ಕಾಣಬಹುದು. ಅದರೆ ಇಲ್ಲಿ ಬಗೆದಷ್ಟು, ಅಗೆದಷ್ಟು, ಮೊಗೆದಷ್ಟು, ಮುಗಿಯದ ಹೇರಳ ವಿಷಯಗಳಿವೆ. ನಿಮ್ಮ ಆಸಕ್ತಿಗೆ ತಕ್ಕಂತೆ ಹುಡುಕಾಡಿ, ಆಟವಾಡಿ, ಕಾರು ಸಂಶೋಧನೆ ಮಾಡಿ. ಡ್ರೈವ್‌ಸ್ಪಾರ್ಕ್ ವಿಶೇಷ ಟೂಲ್ ಕುರಿತು ನಿಮ್ಮ ಸ್ನೇಹಿತರಿಗೆ, ಬಂದುಬಳಗಕ್ಕೆ ತಿಳಿಸಲು ಮರೆಯಬೇಡಿ. ಬನ್ನಿ ಇಲ್ಲಿ ಕ್ಲಿಕ್ ಮಾಡಿ. ಮ್ಯಾಜಿಕ್ ಟೂಲ್‌ಗೆ ಸುಸ್ವಾಗತ.


Click it and Unblock the Notifications








