Skoda Kylaq Review: ಸ್ಕೋಡಾ ಕೈಲಾಕ್ ರಿವ್ಯೂ.. ಹೇಗಿದೆ ಗೊತ್ತಾ, ಯಾರು ಹೇಳಲ್ಲ!

ಭಾರತದ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿ ಸ್ಕೋಡಾ (Skoda) ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಆದರೆ, ಜೆಕ್ ರಿಪಬ್ಲಿಕ್‌ನ ಪೋಕ್ಸ್‌ವ್ಯಾಗನ್ (volkswagen) ಗ್ರೂಪ್ ಸೇರಿದ ಬಳಿಕ, ಮಾರಾಟ ಪ್ರಮಾಣ ಸುಧಾರಿಸಿದೆ. ಕುಶಾಕ್ ಎಸ್‌ಯುವಿ ಮತ್ತು ಸ್ಲಾವಿಯಾ ಸೆಡಾನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡಿದ್ದಾರೆ. ಇವುಗಳ ಮಾರಾಟದಲ್ಲಿ 50,000 ಯುನಿಟ್ ಗಡಿಯನ್ನು ದಾಟಲಾಗಿದೆ. ಈ ವರ್ಷ ನೂತನ ಸಬ್-4-ಮೀಟರ್ ಎಸ್‌ಯುವಿ 'ಕೈಲಾಕ್' ನೆರವಿನಿಂದ ಮಾರಾಟ ಸಂಖ್ಯೆಯು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ನೂತನ ಸ್ಕೋಡಾ ಕೈಲಾಕ್ ಕಾರು, ಪೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ-ಎ0 ಇನ್ (MQB-A0 IN) ಪ್ಲಾಟ್‌ಫಾರ್ಮ್ ಆಧರಿಸಿದೆ. ಗಾತ್ರದಲ್ಲಿ ಕೊಂಚ ಚಿಕ್ಕದಾಗಿದೆ. ಈ ಹಿಂದೆ 'ನೇಮ್ ಯುವರ್ ಸ್ಕೋಡಾ' ಅಭಿಯಾನದಡಿ ಈ ಎಸ್‌ಯುವಿಗೆ ಹೆಸರೊಂದನ್ನು ಸೂಚಿಸುವಂತೆ ಕಂಪನಿಯು ಜನರನ್ನು ಕೇಳಿತ್ತು. ಅಂತಿಮವಾಗಿ 'ಕೈಲಾಕ್' ಎಂದು ನಾಮಕರಣ ಮಾಡಲಾಯಿತು. ಈ ಹೆಸರನ್ನು ಸ್ಫಟಿಕ (Crystal) ಎಂಬ ಸಂಸ್ಕೃತ ಪದದಿಂದ ತೆಗೆದುಕೊಳ್ಳಲಾಗಿದೆ.

Skoda Kylaq Review Specs Driving Impressions Design Features Details

ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಎದುರಾಳಿ ಕಂಪನಿ ಕಾರುಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಇತ್ತೀಚೆಗೆ ನಮ್ಮ ತಂಡಕ್ಕೆ ಗೋವಾದಲ್ಲಿ ನೂತನ 'ಕೈಲಾಕ್' ಎಸ್‌ಯುವಿ ಟೆಸ್ಟ್ ಡ್ರೈವ್ ನಡೆಸುವ ಸದವಕಾಶ ಲಭ್ಯವಾಯಿತು. ಬನ್ನಿ.. ಈ ಕಾರು ಹೇಗಿದೆ ಎಂಬುದನ್ನು ತಿಳಿಯೋಣ.

ಸ್ಕೋಡಾ ಕೈಲಾಕ್ (Skoda Kylaq) ವಿನ್ಯಾಸ & ವೈಶಿಷ್ಟ್ಯಗಳು: ಹೊಸ ಎಸ್‌ಯುವಿ ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಮೊದಲ ನೋಟದಲ್ಲಿ ಪುಟ್ಟ ಗಾತ್ರದ 'ಸ್ಕೋಡಾ ಕುಶಾಕ್' ಕಾರು ಎಂಬಂತೆ ಭಾಸವಾಗುತ್ತದೆ. ಆದರೂ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ. ಇದು ರಸ್ತೆಯಲ್ಲಿ ಹೋಗುವವರ ಕಣ್ಣು ಕುಕ್ಕುವಂತಿದೆ.

Skoda Kylaq Review Specs Driving Impressions Design Features Details

ಈ ಕಾರು, ಮುಂಭಾಗ (ಫ್ರಂಟ್) ಹೊಸದಾಗಿರುವ ಸ್ಲಿಮ್ಡ್-ಡೌನ್ ಗ್ರಿಲ್, ಡಿಆರ್‌ಎಲ್‌ಗಳು & ಹೆಡ್‌ಲೈಟ್‌ಗಳಿಗಾಗಿ ಸ್ಪ್ಲಿಟ್ ಎಲ್ಇಡಿ ಲೈಟಿಂಗ್ ಕಾನ್ಫಿಗರೇಶನ್, ಬ್ಲ್ಯಾಕ್ ಕ್ಲಾಡಿಂಗ್ ಮತ್ತು ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್‌ನ್ನು ಒಳಗೊಂಡಿದೆ. ನೂತನ ಎಸ್‌ಯುವಿಯ ಅಕ್ಕಪಕ್ಕದ (ಸೈಡ್) ವಿನ್ಯಾಸವು ಅತ್ಯುತ್ತಮವಾಗಿದೆ. ಸ್ಪೋರ್ಟ್ಸ್ ಫ್ಲೇರ್ಡ್-ಔಟ್ ವೀಲ್ ಆರ್ಚ್‌ಗಳು ಮತ್ತು ನವೀನವಾಗಿರುವ ಡೋರ್‌ಗಳನ್ನು ಒಳಗೊಂಡಿದೆ.

ಇದು ಮಾತ್ರವಲ್ಲದೆ, ಬ್ಲ್ಯಾಕೆಡ್-ಔಟ್ ರೂಫ್ ರೈಲ್‌ಗಳು, ಥೀಕ್ ಸಿ-ಪಿಲ್ಲರ್ ಹಾಗೂ 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಹಿಂಭಾಗದ (ರೇರ್) ವಿನ್ಯಾಸವು ಚೆನ್ನಾಗಿದೆ. ಹೊಸದಾಗಿರುವ ಟೈಲ್‌ಲೈಟ್‌ಗಳನ್ನು ಹೊಂದಿದೆ. 'ಸ್ಕೋಡಾ' ಎಂಬ ಹೆಸರನ್ನು ದೊಡ್ಡ ಗಾತ್ರದಲ್ಲಿಯೂ ಬರೆಯಲಾಗಿದೆ. ದಪ್ಪದಾಗಿರುವ ಬಂಪರ್‌ನ್ನು ಹೊಂದಿದ್ದು, ಕೈಲಾಕ್ ಕಾರಿಗೆ ಪ್ರಿಮಿಯಂ ಲುಕ್ ನೀಡುತ್ತದೆ.

Skoda Kylaq Review Specs Driving Impressions Design Features Details

ನೂತನ ಸ್ಕೋಡಾ ಕೈಲಾಕ್ ಎಸ್‌ಯುವಿಯ ಒಳಭಾಗವು ಹೆಚ್ಚು ಉತ್ತಮವಾಗಿದೆ. ಅತ್ಯಾಧುನಿಕವಾದ ಡ್ಯಾಶ್‌ಬೋರ್ಡ್ ಹೊಂದಿದೆ. ಹಾಗೆಯೇ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಸಿಂಗಲ್-ಪೇನ್ ಸನ್‌ರೂಫ್, ಕೀಲೆಸ್ ಎಂಟ್ರಿ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು, 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ನಡೆಸಲು ಸಾಧ್ಯವಾಗುವಂತೆ ಸೀಟ್‌ಗಳನ್ನು ಲೆದರ್ ಬಳಸಿ ಸಿದ್ಧಪಡಿಸಲಾಗಿದೆ. ಮುಂಭಾಗದ ಸೀಟ್‌ಗಳು ವೆಂಟಿಲೇಟೆಡ್ & ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಆಗಿವೆ. ಹಿಂಭಾಗದ ಸೀಟ್‌ಗಳು ಕೂಡ ಉತ್ತಮವಾಗಿದ್ದು, ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳನ್ನು ಪಡೆದಿವೆ.

Skoda Kylaq Review Specs Driving Impressions Design Features Details

ಆದರೆ, ನೂತನ ಎಸ್‌ಯುವಿ ಹಿಂಭಾಗದಲ್ಲಿ ಮೂವರು ವಯಸ್ಕರು ಕುಳಿತುಕೊಂಡು ಪ್ರಯಾಣಿಸುವುದು ಸ್ವಲ್ಪ ಕಷ್ಟವಾಗಬಹುದು. ಈ ಸ್ಕೋಡಾ ಕೈಲಾಕ್ ಕಾರು, ವಾರಾಂತ್ಯ ಮತ್ತು ರಜಾದಿನಗಳಲ್ಲಿ ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 446 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.

ಈ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಚೈಲ್ಡ್ ಸೀಟ್ ಮೌಂಟ್‌ಗಳು ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Skoda Kylaq Review Specs Driving Impressions Design Features Details

ಕಾರ್ಯಕ್ಷಮತೆ: ಸ್ಕೋಡಾ ಕೈಲಾಕ್ ಎಸ್‌ಯುವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1.0-ಲೀಟರ್ ಟಿಎಸ್‌ಟಿ ಪೆಟ್ರೋಲ್ ಎಂಜಿನ್‌, 115 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 178 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ಕಾರು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 15 ರಿಂದ 18 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಕೇವಲ 10.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಜೊತೆಗೆ ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್‌ಗಳು ಹಾಗೂ ಹಿಂಭಾಗ (ರೇರ್) ಡ್ರಮ್‌ ಬ್ರೇಕ್‌ಗಳನ್ನು ಅಳವಡಿಕೆ ಮಾಡಲಾಗಿದೆ.

Skoda Kylaq Review Specs Driving Impressions Design Features Details

ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ 3,995 ಎಂಎಂ ಉದ್ದ, 1,783 ಎಂಎಂ ಅಗಲ ಹಾಗೂ 1,619 ಎಂಎಂ ಎತ್ತರವಿದೆ. 189 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,566 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಚಾಲನಾ ಅನುಭವ: ನಮಗೆ ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿಯ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿರುವ ಟಾಪ್-ಎಂಡ್ ಮಾಡೆಲ್‌ನ್ನು ಓಡಿಸಲು ಅವಕಾಶ ದೊರೆಯಿತು. ಇದು ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಗೋವಾದ ರಸ್ತೆಯಲ್ಲಿ ಲೀಲಾಜಾಲವಾಗಿ ಚಲಿಸಿತು. ಯಾವೊದೋ ಪ್ರೀಮಿಯಂ ಕಾರಿನಲ್ಲಿ ಕುಳಿತುಕೊಂಡ ರೀತಿಯಲ್ಲಿ ಭಾಸವಾಗುತ್ತಿತ್ತು.

Skoda Kylaq Review Specs Driving Impressions Design Features Details

ನೂತನ ಕಾರು, ಹಳ್ಳ-ದಿಣ್ಣೆ ಹಾಗೂ ಉಬ್ಬು ತಗ್ಗಿನಿಂದ ಕೂಡಿದ ರಸ್ತೆಯಲ್ಲಿಯೂ ಸುಲಭವಾಗಿ ಹೋಯಿತು. ಇದರ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಉತ್ತಮವಾಗಿ ಕಾರ್ಯನಿರ್ವಹಿಸಿತು. ಸ್ಟೀರಿಂಗ್ ವೀಲ್ ಕೂಡ ಅತ್ಯುತ್ತಮವಾಗಿದೆ. ಇದು ರಸ್ತೆ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ಈ ಕೈಲಾಕ್ ಎಸ್‌ಯುವಿ ಓಡಿಸಿದ್ದು, ಎಲ್ಲಿಯೂ ಬೇಸರ ತರಿಸಲಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಸ್ಕೋಡಾ ಕೈಲಾಕ್ ಕಾರು, ರೂ.7.89 ಲಕ್ಷದಿಂದ ರೂ.14.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಬ್ರಿಲಿಯಂಟ್ ಸಿಲ್ವರ್, ಲಾವಾ ಬ್ಲೂ, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್, ಟೊರ್ನಾಡೊ ರೆಡ್ ಹಾಗೂ ಕ್ಯಾಂಡಿ ವೈಟ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿರುವುದರಿಂದ ಬಹುತೇಕ ಕುಟುಂಬಗಳ ಆಯ್ಕೆ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 25, 2025, 11:00 [IST]
English summary
Skoda kylaq review specs driving impressions design features details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+