Skoda Octavia RS Review: ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ರಿವ್ಯೂ.. ಬಂಗಾರದಂತಹ ಕಾರಿದು, ಎಲ್ಲವು ಸೋಲ್ಡ್ ಔಟ್!
ಜೆಕ್ ಗಣರಾಜ್ಯದ ಸ್ಕೋಡಾ (Skoda) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಭಾರತದಲ್ಲಿ 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದರ ಸವಿನೆನಪಿಗಾಗಿ ಅ.17ರಂದು ಹೊಚ್ಚ ಹೊಸ 'ಆಕ್ಟೇವಿಯಾ ಆರ್‌ಎಸ್' ಸೆಡಾನ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಕಾರು ರೂ.49.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಕೇವಲ 100 ಯುನಿಟ್‌ಗಳನ್ನು ಮಾತ್ರ ಕಂಪನಿಯು ಮಾರಾಟ ಮಾಡಲಿದೆ. ಈಗಾಗಲೇ ಎಲ್ಲವನ್ನು ಗ್ರಾಹಕರು ಬುಕ್ಕಿಂಗ್ ಮಾಡಿದ್ದು, ಸೋಲ್ಡ್ ಔಟ್ ಆಗಿಬಿಟ್ಟಿವೆ.
ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ನೂತನ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ (Skoda Octavia RS) ಕಾರು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ಸೆಡಾನ್‌ನ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ವಿನ್ಯಾಸ & ಬಣ್ಣಗಳು (Design & Colors):
ಹೊಸ 'ಸ್ಕೋಡಾ ಆಕ್ಟೇವಿಯಾ ಆರ್‌ಎಸ್' ಸೆಡಾನ್ ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಡುಯಲ್ ಪಾಡ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲೈಟ್‌ಗಳು, 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ಗಳು, ಬಾಡಿ ಕಲರ್ ಡೋರ್ ಹ್ಯಾಂಡಲ್‌ಗಳು, ಶಾರ್ಕ್-ಫಿನ್ ಆಂಟೆನಾ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಆದರೆ, ಸನ್‌ರೂಫ್ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದೇ ಎಂದು ಹೇಳಬಹುದು.
ಇದರೊಂದಿಗೆ ದೊಡ್ಡ ಗಾತ್ರದ 19 ಇಂಚಿನ ಅಲಾಯ್ ವೀಲ್‌ಗಳು ಹಾಗೂ 225/40 ಆರ್19 ಅಳತೆಯ ಟೈರ್‌ಗಳನ್ನು ಹೊಂದಿದೆ. ಮಾಂಬಾ ಗ್ರೀನ್, ಮ್ಯಾಜಿಕ್ ಬ್ಲ್ಯಾಕ್, ಕ್ಯಾಂಡಿ ವೈಟ್, ರೇಸ್ ಬ್ಲೂ ಹಾಗೂ ವೆಲ್ವೆಟ್ ರೆಡ್ ಎಂಬ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಸುತ್ತಳತೆ (Dimensions):
ಈ ಕಾರು ಹೆಚ್ಚು ವಿಶಾಲವಾಗಿದೆ. 4,709 ಮಿ.ಮೀ ಉದ್ದ, 1,829 ಮಿ.ಮೀ ಅಗಲ ಹಾಗೂ 1,457 ಮಿಮೀ ಎತ್ತರವಿದೆ. ಜೊತೆಗಿದು 128 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,677 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 1,528 ಕೆಜಿ ತೂಕವಿದೆ.
ಆಸನ ಆಯ್ಕೆ ಬೂಟ್ ಸ್ಪೇಸ್ (Seating Capacity & Boot Space):
ನೂತನ 'ಸ್ಕೋಡಾ ಆಕ್ಟೇವಿಯಾ ಆರ್‌ಎಸ್' 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 600 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):
ಇದು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 265 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 370 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 7-ಸ್ಪೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಕಾರು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 15.81 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 50 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಒಳಗೊಂಡಿದೆ. 250 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 6.4 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಒಳಾಂಗಣ & ವೈಶಿಷ್ಟ್ಯಗಳು (Interior & Features):
'ಸ್ಕೋಡಾ ಆಕ್ಟೇವಿಯಾ ಆರ್‌ಎಸ್' ಸೆಡಾನ್ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದ್ದು, ಪ್ರತಿಯೊಬ್ಬರನ್ನು ಸೆಳೆಯುವಂತಿದೆ. ಬ್ಲ್ಯಾಕ್ ಕಲರ್ ಥೀಮ್ ಒಳಗೊಂಡಿದೆ. ಅತ್ಯಾಧುನಿಕವಾದ ಡ್ಯಾಶ್‌ಬೋರ್ಡ್ ಹಾಗೂ ಸ್ಟೀರಿಂಗ್ ವೀಲ್‌ನ್ನು ಹೊಂದಿದೆ. ಮೆಟಾಲಿಕ್ ಪೆಡಲ್‌ಗಳು & ಸ್ಪೋರ್ಟ್ ಸೀಟ್‌ಗಳನ್ನು ತನ್ನದಾಗಿಸಿಕೊಂಡಿದೆ.
ಇದು ಹತ್ತಾರು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದಿದೆ. 13 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 3-ಜೋನ್ ಕ್ಲೇಮೇಟ್ ಕಂಟ್ರೋಲ್, 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್, ಮೆಮೊರಿ - ಮಸಾಜ್ ಫಂಕ್ಷನ್ ಹೊಂದುರುವ ಫ್ರಂಟ್ ಸೀಟ್‌ಗಳು ಹಾಗೂ ಕೂಲಿಂಗ್ ಪ್ಯಾಡ್‌ನೊಂದಿಗೆ 15ಡಬ್ಲ್ಯೂ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್‌ನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 10 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಚಾಲನಾ ಅನುಭವ (Driving Impressions):
'ಸ್ಕೋಡಾ ಆಕ್ಟೇವಿಯಾ ಆರ್‌ಎಸ್' ಕಾರು ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದು ಸುಲಲಿತವಾಗಿ ಚಲಿಸಿತು. ಎಲ್ಲ ವಿಧದ ರಸ್ತೆಗಳಿಗೂ ಹೊಂದಾಣಿಕೆಯಾಗಬಲ್ಲದು. ಸ್ಟೀರಿಂಗ್ ವೀಲ್ ಉತ್ತಮವಾಗಿ ಕಾರ್ಯ ನಿರ್ವಹಿಸಿತು. ತಿರುವುಗಳಲ್ಲಿ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್‌ಗಳು ಅತ್ಯುತ್ತಮವಾಗಿ ಕೆಲಸ ಮಾಡಬಲ್ಲವು.

ಒಟ್ಟಾರೆ ಅಭಿಪ್ರಾಯ (Overall Opinion):
ಹೊಸ 'ಆಕ್ಟೇವಿಯಾ ಆರ್‌ಎಸ್' ಸೆಡಾನ್ ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೊಂಚ ಮಟ್ಟಿಗೆ ದುಬಾರಿ ಹೊಂದಿದೆ. ಆದರೂ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಬುಕ್ಕಿಂಗ್ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಕಂಪನಿಯು ಈ ಕಾರಿನ ಉತ್ಪಾದನಾ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.


Click it and Unblock the Notifications








