ದೇಶದ ಟಾಪ್ 10 ಪೆಟ್ರೋಲ್ ಮೈಲೇಜ್ ಕಾರುಗಳು

By Nagaraja

ಕೆಲವು ದಿನಗಳ ಹಿಂದೆಯಷ್ಟೇ ದೇಶದ ಅಗ್ರ 10 ಡೀಸೆಲ್ ಮೈಲೇಜ್ ಕಾರುಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ಇಂದಿನ ಈ ಲೇಖನದಲ್ಲಿ ಸಮಕಾಲೀನ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ದೇಶದ ಟಾಪ್ 10 ಪೆಟ್ರೋಲ್ ಡೀಸೆಲ್ ಕಾರುಗಳನ್ನು ಚರ್ಚಿಸಲಿದ್ದೇವೆ.

ಇವನ್ನೂ ಓದಿ: ದೇಶದ ಟಾಪ್ 10 ಡೀಸೆಲ್ ಮೈಲೇಜ್ ಕಾರುಗಳು

ಪ್ರಸ್ತುತ ಮಾರುಕಟ್ಟೆ ಸನ್ನವೇಶ ಶಿಪ್ರ ಗತಿಯಲ್ಲಿ ಬದಲಾಗುತ್ತಿದೆ. ಡೀಸೆಲ್ ಹಾಗೂ ಪೆಟ್ರೋಲ್ ಇಂಧನಗಳ ನಡುವಣ ಬೆಲೆ ಕಡಿಮೆಯಾಗಿರುವಂತೆಯೇ ಮಗದೊಮ್ಮೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳು ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಈ ಲೇಖನ ನಿಮ್ಮ ನೆರವಿಗೆ ವಿಶ್ವಾಸ ನಮ್ಮದ್ದು.

ದೇಶದ ಟಾಪ್ 10 ಪೆಟ್ರೋಲ್ ಮೈಲೇಜ್ ಕಾರುಗಳು

ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಪೆಟ್ರೋಲ್ ಕಾರುಗಳು ಅಂದಾಜು ಸ್ವಲ್ಪ ಕಡಿಮೆ ಮೈಲೇಜ್ ಹೊಂದಿದ್ದರೂ ಅಷ್ಟೇ ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಗರಿಷ್ಠ ಶಕ್ತಿಯನ್ನು ಹೊಂದಿದೆ. ಇದೇ ಕಾರಣಕ್ಕಾಗಿ ದೇಶದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳು ರಾರಾಜಿಸುತ್ತಿದೆ. ಹಾಗಿದ್ದರೆ ಇನ್ಯಾಕೆ ತಡ ಮುಂದಿನ ಒಂದೊಂದೇ ಸ್ಲೈಡ್ ಮೂಲಕ ದೇಶದ ಟಾಪ್ 10 ಪೆಟ್ರೋಲ್ ಮೈಲೇಜ್ ಕಾರುಗಳ ಬಗ್ಗೆ ತಿಳಿದುಕೊಳ್ಳಿರಿ. ಭಾರತೀಯ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮೈಲೇಜ್ ಮಾನ್ಯತೆಯ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ.

10. ಮಾರುತಿ ಸ್ವಿಫ್ಟ್ ಪೆಟ್ರೋಲ್ 18.6 kmpl

10. ಮಾರುತಿ ಸ್ವಿಫ್ಟ್ ಪೆಟ್ರೋಲ್ 18.6 kmpl

ದೇಶದ ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಈಗಲೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ. ಈ ಹ್ಯಾಚ್‌ಬ್ಯಾಕ್ ಕಾರು 1197 ಸಿಸಿ 4 ಸಿಲಿಂಡರ್, ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಜೊತೆಗೆ ವಿವಿಟಿ ತಂತ್ರಜ್ಞಾನ ಪಡೆದುಕೊಂಡಿದೆ. 42 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಸ್ವಿಫ್ಟ್ ಪ್ರತಿ ಲೀಟರ್‌ಗೆ 18.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 86 ಅಶ್ವಶಕ್ತಿ (114 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.

ಮಾರುತಿ ಸ್ವಿಫ್ಟ್ ಪೆಟ್ರೋಲ್ ಮೈಲೇಜ್ 18.6 kmpl
9. ಫೋರ್ಡ್ ಇಕೊಸ್ಪೋರ್ಟ್ 1.0 - 18.9 kmpl

9. ಫೋರ್ಡ್ ಇಕೊಸ್ಪೋರ್ಟ್ 1.0 - 18.9 kmpl

ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯ ಕಾರುಗಳಲ್ಲಿ ಒಂದಾಗಿರುವ ಫೋರ್ಡ್ ಇಕೊಸ್ಪೋರ್ಟ್, ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಅಲೆಯೆಬ್ಬಿಸಿತ್ತು. ಈ 999 ಸಿಸಿ 1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ 123 ಅಶ್ವಶಕ್ತಿ (170 ಎನ್‌ಎಂ) ಉತ್ಪಾದಿಸುತ್ತಿದ್ದು, 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುತ್ತದೆ.

ಫೋರ್ಡ್ ಇಕೊಸ್ಪೋರ್ಟ್ 1.0 ಮೈಲೇಜ್ - 18.9 kmpl
8. ನಿಸ್ಸಾನ್ ಮೈಕ್ರಾ ಆಕ್ಟಿವ್ - 19.49 kmpl

8. ನಿಸ್ಸಾನ್ ಮೈಕ್ರಾ ಆಕ್ಟಿವ್ - 19.49 kmpl

ನಿಸ್ಸಾನ್‌ನ ಅತ್ಯಂತ ಆಕರ್ಷಕ ಹ್ಯಾಚ್‌ಬ್ಯಾಕ್ ಕಾರಾಗಿರುವ ಮೈಕ್ರಾ ಆಕ್ಟಿವ್, ಮೈಲೇಜ್ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದರ 1198 ಸಿಸಿ 3 ಸಿಲಿಂಡರ್. ಡಿಒಎಚ್‌ಸಿ 12 ವಾಲ್ವ್ ಪೆಟ್ರೋಲ್ ಎಂಜಿನ್, 67 ಬಿಎಚ್‌ಪಿ (104 ಎನ್‌ಎಂ ಟಾರ್ಕ್) ಉತ್ಪಾದಿಸುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ನಿಸ್ಸಾನ್ ಮೈಕ್ರಾ ಆಕ್ಟಿವ್ ಮೈಲೇಜ್ - 19.49 kmpl
7. ಹ್ಯುಂಡೈ ಐ10 - 19.8 kmpl

7. ಹ್ಯುಂಡೈ ಐ10 - 19.8 kmpl

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈನ ಜನಪ್ರಿಯ ಐ10 ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು 1086 ಸಿಸಿ 4 ಸಿಲಿಂಡರ್ 1.1 ಲೀಟರ್ ಐಆರ್‌ಡಿಇ2 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 68 ಬಿಎಚ್‌ಪಿ (99 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ.

ಹ್ಯುಂಡೈ ಐ10 ಮೈಲೇಜ್ - 19.8 kmpl

6. ಮಾರುತಿ ಆಲ್ಟೊ ಕೆ10 - 20.92 kmpl

6. ಮಾರುತಿ ಆಲ್ಟೊ ಕೆ10 - 20.92 kmpl

ಮಾರುತಿ ಆಲ್ಟೊ ಕೆ 10 ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ದೇಶದ ಸರ್ವಕಾಲಿನ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಕಾರುಗಳಲ್ಲಿ ಗುರುತಿಸಿಕೊಂಡಿರುವ ಈ ಜನಪ್ರಿಯ ಕೆ10 ಮಾದರಿಯು 998 ಸಿಸಿ, 3 ಸಿಲಿಂಡರ್, ಆಲ್ ಅಲ್ಯೂಮಿನಿಯಂ ಲೈಟ್ ವೇಟ್ ಕೆ10ಬಿ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಹೊಂದಿರುವ ಈ ಕಾರು 67 ಬಿಎಚ್‌ಪಿ (90 ಎನ್‌ಎಂ) ಉತ್ಪಾದಿಸುತ್ತದೆ.

ಮಾರುತಿ ಆಲ್ಟೊ ಕೆ10 ಮೈಲೇಜ್ - 20.92 kmpl
5. ಮಾರುತಿ ವ್ಯಾಗನಾರ್ - 20.51 kmpl

5. ಮಾರುತಿ ವ್ಯಾಗನಾರ್ - 20.51 kmpl

ಮಾರುತಿಯ ಮಗದೊಂದು ನೆಚ್ಚಿನ ಮಾದರಿಯಾಗಿರುವ ವ್ಯಾಗನಾರ್ ಮೈಲೇಜ್ ವಿಚಾರದಿಂದಲೇ ಗ್ರಾಹಕರಿಗೆ ಹೆಚ್ಚೆಚ್ಚು ಹತ್ತಿರವಾಗಿದೆ. ಈ 998 ಸಿಸಿ 3 ಸಿಲಿಂಡರ್ ಆಲ್ ಅಲ್ಯೂಮಿನಿಯಂ ಲೈಟ್ ವೇಟ್ ಕೆಬಿ10 ಪೆಟ್ರೋಲ್ ಎಂಜಿನ್ 67 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಮಾರುತಿ ವ್ಯಾಗನಾರ್ - 20.51 kmpl
4. ದಟ್ಸನ್ ಗೊ - 20.6 kmpl

4. ದಟ್ಸನ್ ಗೊ - 20.6 kmpl

ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆಗೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ನಿಸ್ಸಾನ್ ಸಬ್ ಬ್ರಾಂಡ್ ಆಗಿರುವ ದಟ್ಸನ್ ಗೊ, ಸಣ್ಣ ಕಾರುಗಳ ವಿಭಾಗದಲ್ಲಿ ಸಂಚಲ ಮೂಡಿಸಿತ್ತು. ಪ್ರಸ್ತುತ ಕಾರು 1198 ಸಿಸಿ 3 ಸಿಲಿಂಡರ್ 1.2 ಲೀಟರ್ ಡಿಒಎಚ್‌ಸಿ ಜೊತೆ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಅಲ್ಲದೆ 67 ಬಿಎಚ್‌ಪಿ (104 ಎನ್‌ಎಂ ಟಾರ್ಕ್) ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ದಟ್ಸನ್ ಗೊ ಮೈಲೇಜ್ - 20.6 kmpl
3. ಹ್ಯುಂಡೈ ಇಯಾನ್ - 21.1 kmpl

3. ಹ್ಯುಂಡೈ ಇಯಾನ್ - 21.1 kmpl

ದೇಶದ ಅತಿ ದೊಡ್ಡ ರಫ್ತುದಾರ ಸಂಸ್ಥೆ ಹ್ಯುಂಡೈನ ಬಜೆಟ್ ಕಾರುಗಳಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಹ್ಯುಂಡೈ ಇಯಾನ್ 998 ಸಿಸಿ 3 ಸಿಲಿಂಡರ್ 12 ವಾಲ್ವ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 68 ಬಿಎಚ್‌ಪಿ (94 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಹ್ಯುಂಡೈ ಇಯಾನ್ ಮೈಲೇಜ್ - 21.1 kmpl
2. ಮಾರುತಿ ಆಲ್ಟೊ 800 - 22.74 kmpl

2. ಮಾರುತಿ ಆಲ್ಟೊ 800 - 22.74 kmpl

ಆಲ್ಟೊದ ಮಗದೊಂದು ಮಾದರಿಯಾಗಿರುವ 800 ದೇಶದ ಅಗ್ರ 10 ಮೈಲೇಜ್ ಪೆಟ್ರೋಲ್ ಕಾರುಗಳ ಪೈಕಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ 796 ಸಿಸಿ 3 ಸಿಲಿಂಡರ್ ಎಫ್8ಡಿ ಪೆಟ್ರೋಲ್ ಎಂಜಿನ್, 48 ಬಿಎಚ್‌ಪಿ ಉತ್ಪಾದಿಸುವ (69 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಮಾರುತಿ ಆಲ್ಟೊ 800 ಮೈಲೇಜ್ - 22.74 kmpl
1. ಟಾಟಾ ನ್ಯಾನೋ - 25 kmpl

1. ಟಾಟಾ ನ್ಯಾನೋ - 25 kmpl

ನೀವು ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಕಾರುಗಳ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿರಬಹುದು. ಆದರೆ ಜನಸಾಮಾನ್ಯರ ಕಾರೇ ಎಂದೇ ಬಿಂಬಿಸಲ್ಪಟ್ಟಿರುವ ನ್ಯಾನೋ ತನ್ನ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಇದು ಮೈಲೇಜ್ ವಿಚಾರದಲ್ಲೂ ವ್ಯಕ್ತವಾಗುತ್ತಿದೆ. ಹೌದು, ನ್ಯಾನೋ ಪ್ರಿ ಲೀಟರ್‌ಗೆ 25.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು 624 ಸಿಸಿ, 2 ಸಿಲಿಂಡರ್ ಎಂಪಿಎಫ್‌ಐ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 38 ಅಶ್ವಶಕ್ತಿ (51 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 4 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಟಾಟಾ ನ್ಯಾನೋ ಮೈಲೇಜ್- 25 kmpl

More from DriveSpark

Article Published On: Monday, September 29, 2014, 6:06 [IST]
English summary
We'll discuss about the top-10 most fuel efficient peteol cars in India. The basis on which we have short-listed these cars, is the ARAI mileage figures that these cars achieved during their test.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+