ನೀವ್ಯಾಕೆ ಹೋಂಡಾ ಸಿಟಿ ಖರೀದಿಸಬೇಕು? ಟಾಪ್ 10 ಅಂಶಗಳು

By Nagaraja

2014ನೇ ಸಾಲಿನ ಪೈಕಿ ಅತಿ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಳ್ಳುತ್ತಿರುವ ಕಾರೆಂದರೆ ಅದುವೇ ನಾಲ್ಕನೇ ತಲೆಮಾರಿನ 2014 ಹೋಂಡಾ ಸಿಟಿ ಮಿಡ್ ಸೈಜ್ ಸೆಡಾನ್ ಕಾರು. ದೇಶದಲ್ಲೇ ಅತಿ ಹೆಚ್ಚು ಇಂಧನ ಕ್ಷಮತೆ ನೀಡುವ ಕಾರುಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹೋಂಡಾ ಸಿಟಿ ಪ್ರತಿ ಲೀಟರ್‌ಗೆ 26 ಕೀ.ಮೀ. ವರೆಗೂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇದರ ಐ-ಡಿಟೆಕ್ ಡೀಸೆಲ್ ಎಂಜಿನ್ ಹೋಂಡಾ ಸಿಟಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಷ್ಟಕ್ಕೂ ಹೋಂಡಾ ಸಿಟಿ ನೀವು ಏಕೆ ಕೊಳ್ಳಬೇಕು? ಅದರಲ್ಲಿ ಅಂತದ್ದೇನಿದೆ ? ಎಂಬ ಸಂದೇಹ ನಿಮ್ಮಲ್ಲೂ ಮೂಡಬಹುದು. ಈ ನಿಟ್ಟಿನಲ್ಲಿ ನೀವು ಹೋಂಡಾ ಸಿಟಿ ಕಾರನ್ನು ಯಾಕೆ ಕೊಳ್ಳಬೇಕು ಎಂಬುದರ ನಿಟ್ಟಿನಲ್ಲಿ 10 ಅಮೂಲ್ಯ ಅಂಶಗಳು ನಾವು ಪಟ್ಟಿ ಮಾಡಿ ಕೊಡಲಿದ್ದೇವೆ.

ತಾಜಾ ವಿನ್ಯಾಸ

ತಾಜಾ ವಿನ್ಯಾಸ

ಕಳೆದ ತಲೆಮಾರಿನ ಕಾರಿಗೆ ಹೋಲಿಸಿದರೆ ನೂತನ 2014 ಹೋಂಡಾ ಸಿಟಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. ಇದು ಎಲ್ಲ ಹಂತದಲ್ಲೂ ತಾಜಾ ವಿನ್ಯಾಸ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

ಐ-ಡಿಟೆಕ್ ಡೀಸೆಲ್ ಎಂಜಿನ್

ಐ-ಡಿಟೆಕ್ ಡೀಸೆಲ್ ಎಂಜಿನ್

ಹೋಂಡಾ 1.5 ಲೀಟರ್ ಐ-ಡಿಟೆಕ್ (i-DTEC) ಡೀಸೆಲ್ ಎಂಜಿನ್ ಸಿಟಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಲ್ಲಿ ಅಮೇಜ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಳವಡಿಸಲಾಗಿದೆ. ಇದು ಗಂಟೆಗೆ 195 ಕೀ.ಮೀ. ವರೆಗೂ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್

ಮೈಲೇಜ್

ದೇಶದ ಮೈಲೇಜ್ ಕಾರೆಂದೇ ಬಿಂಬಿತವಾಗಿರುವ ನೂತನ ಹೋಂಡಾ ಸಿಟಿ, ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಪ್ರಕಾರ ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇಂಟಿರಿಯರ್

ಇಂಟಿರಿಯರ್

2014 ಹೋಂಡಾ ಸಿಟಿ ಒಳಭಾಗದಲ್ಲಿ ಉತ್ತಮ ಹೆಡ್ ಹಾಗೂ ಲೆಗ್ ರೂಂ ಕಲ್ಪಿಸಲಾಗಿದೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ. ಅಂದರೆ ಈ ಸೆಗ್ಮೆಂಟ್ ಹೆಚ್ಚು ಆರಾದಾಯಕ ಕಾರುಗಳಲ್ಲಿ ಹೋಂಡಾ ಒಂದೆನಿಸಿಕೊಳ್ಳಲಿದೆ. ಕೇವಲ ಹಿಂದುಗಡೆ ಪ್ರಯಾಣಿಕರು ಮಾತ್ರ ಕಾರಿನ ಮುಂಭಾಗ ಸೀಟಿನಲ್ಲಿ ಕುಳಿತುಕೊಳ್ಳುವವರಿಗೂ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಇನ್ನು ಹ್ಯುಂಡೈ‌ನ ಐ-ಡಿಟೆಕ್ ಎಂಜಿನ್ ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದು ತನ್ನ ಸಮೀಪ ಪ್ರತಿಸ್ಪರ್ಧಿಗಳನ್ನು ಮೀರಿಸಲು ನೆರವಾಗಲಿದ್ದು, ಸುಖಕರ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

 ಗ್ರೌಂಡ್ ಕ್ಲಿಯರನ್ಸ್

ಗ್ರೌಂಡ್ ಕ್ಲಿಯರನ್ಸ್

ಹಿಂದಿನ ತಲೆಮಾರಿನ ಹೋಂಡಾ ಸಿಟಿ ಕಡಿಮೆ ಗ್ರೌಂಡ್ ಕ್ಲಿಯರನ್ಸ್‌ನಿಂದಾಗಿ ಹಿನ್ನಡೆಗೊಳಗಾಗಿತ್ತು. ಆದರೆ ಈ ಬಾರಿ ಮತ್ತದೇ ತಪ್ಪನ್ನು ಪುನರಾವರ್ತಿಸದ ಸಂಸ್ಥೆಯು ಒಟ್ಟಾರೆ 17 ಎಂಎಂ ಗ್ರೌಂಡ್ ಕ್ಲಿಯರನ್ಸ್ ನೀಡಿದೆ. ಇದು ಒರಟಾದ ರಸ್ತೆಗಳಲ್ಲೂ ಉತ್ತಮ ಚಾಲನಾ ಅನುಭವ ನೀಡಲಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ಯಾವುದೇ ಮಾದರಿ ಆಗಿದ್ದರೂ ಆ ನಿರ್ಧಿಷ್ಟ ಕಾರಿನ ಯಶಸ್ಸಿನಲ್ಲಿ ಹ್ಯಾಂಡ್ಲಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಸಮತೋಲಿತ ಚಾಸೀಸ್, ಕಡಿಮೆ ಕರ್ಬ್ ಭಾರ ಕಾರಿನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಹಣದ ಮೌಲ್ಯ

ಹಣದ ಮೌಲ್ಯ

ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಿರುವುದು ಹೋಂಡಾ ಸಿಟಿ ಯಶಸ್ಸಿನಲ್ಲಿ ಇನ್ನೊಂದು ಪ್ರಮುಖ ಪಾತ್ರ ವಹಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 7.42 ಲಕ್ಷ ರು.ಗಳಿಂದ ಆರಂಭವಾಗುತ್ತಿದ್ದು, ಟಾಪ್ ವೆರಿಯಂಟ್‌ಗೆ 11.10 ಲಕ್ಷ ರು.ಗಳನ್ನು ಪಾವತಿಸಬೇಕಾಗಿದೆ.

ಹೋಂಡಾ ಬ್ರಾಂಡ್

ಹೋಂಡಾ ಬ್ರಾಂಡ್

ಸಮಕಾಲೀನ ಪರಿಸ್ಥಿತಿಯಲ್ಲಿ ಹೋಂಡಾ ಕಾರುಗಳು ಜಾಗತಿಕವಾಗಿ ಗುಣಮಟ್ಟತೆಗೆ ಹೆಸರುವಾಸಿಯಾಗಿದೆ. ಇದನ್ನೇ ಕಾಪಾಡಿಕೊಂಡು ಬರುವಲ್ಲಿ ಹೋಂಡಾ ಯಶಸ್ವಿಯಾಗಿದೆ. ಇದು ಹ್ಯುಂಡೈ ವರ್ನಾಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರಲಿದೆ.

ಅಮೇಜ್ ಯಶಸ್ಸು ಸ್ಫೂರ್ತಿ

ಅಮೇಜ್ ಯಶಸ್ಸು ಸ್ಫೂರ್ತಿ

ದೇಶದಲ್ಲಿ ಅಮೇಜ್ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಹೋಂಡಾ, ನೂತನ ಸಿಟಿ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಈಗಾಗಲೇ ಅಭೂತಪೂರ್ವ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಅಮೇಜ್ ದೇಶದ ರಸ್ತೆ ಪರಿಸ್ಥಿತಿಗೆ ಅನುಯೋಜ್ಯವಾದ ಕಾರೆನಿಸಿದೆ.

Most Read Articles
 
English summary
The Honda City is one of the most important cars for 2014. But here are 10 reasons why you should buy one!
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X