10 ಲಕ್ಷದೊಳಗೆ ಲಭ್ಯವಾಗುವ ಜನಪ್ರಿಯ ಸೆಡಾನ್ ಕಾರುಗಳು
ನೂತನ ಕಾರು ಖರೀದಿಗಾರರಿಗೆ ಹ್ಯಾಚ್‌ಬ್ಯಾಕ್ ಕಾರು ಯಾವುದು? ಸೆಡಾನ್ ವಿಭಾಗ ಯಾವುದು? ಎಂಬ ಬಗ್ಗೆ ಗೊಂದಲವುಂಟಾಗುವುದು ಸಹಜ. ಆದರೆ ಇವೆರಡರ ನಡುವಣ ವ್ಯತ್ಯಾಸ ಕಂಡುಹುಡುವುದು ತುಂಬಾನೇ ಸುಲಭ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...
ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತ್ಯೇಕ ಲಗ್ಗೇಜ್ ಸ್ಪೇಸ್ (ಢಿಕ್ಕಿ) ಇರುವುದಿಲ್ಲ. ಇನ್ನೊಂದೆಡೆ ಸೆಡಾನ್ ಕಾರುಗಳನ್ನು ಎ,ಬಿ ಹಾಗೂ ಸಿ ಪಿಲ್ಲರ್‌ಗಳೆಂದು ಪ್ರತ್ಯೇಕಿಸಲಾಗುತ್ತದೆ. ಅಂದರೆ ಎಂಜಿನ್, ಪ್ರಯಾಣಿಕರು ಹಾಗೂ ಕಾರ್ಗೊ ಅಥವಾ ಲಗ್ಗೇಜ್ ಸ್ಪೇಸ್ ಹೀಗೆ ಮೂರು ವಿಭಾಗಗಳಲ್ಲಾಗಿ ವಿಭಜಿಸಲಾಗುವುದು. ಈ ಪೈಕಿ ಪ್ಯಾಸೆಂಜರ್ ವಿಭಾಗ ಎರಡು ಸಾಲುಗಳ ಆಸನ ವ್ಯವಸ್ಥೆ ಹೊಂದಿರುತ್ತದೆ.
ಅಂದ ಹಾಗೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಿಮೆ ದರಗಳ ಸೆಡಾನ್ ಕಾರುಗಳ ಬಗ್ಗೆ ಮಾಹಿತಿಯಿದೆಯೇ? ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಎಂಟ್ರಿ ಲೆವೆಲ್ ಸೆಡಾನ್ ಕಾರು ಅಥವಾ 10 ಲಕ್ಷದೊಳಗೆ ಲಭ್ಯವಾಗುವ ಸೆಡಾನ್ ಕಾರುಗಳ ನಡುವೆ ತುಲನೆ ಮಾಡಲಿದ್ದೇವೆ.

ನಾಲ್ಕು ಮೀಟರ್‌ಗಿಂತಲೂ ದೊಡ್ಡದಾಗಿರುವ ಕಾರುಗಳಿಗೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ಹೆಚ್ಚಿನ್ನೆಲ್ಲ ಎಂಟ್ರಿ ಲೆವೆಲ್ ಕಾರುಗಳನ್ನು ಈ ಪರಿಮಿತಿಯೊಳಗೆ ನಿರ್ಮಿಸುವ ಪ್ರಯತ್ನವನ್ನು ಕಾರು ಕಂಪನಿಗಳು ಮಾಡಿದೆ. ನೆನಪಿಡಿ ಇಲ್ಲಿ ಎಆರ್‌ಎಐ ಮಾನ್ಯತೆ ಪ್ರಕಾರ ಇಂಧನ ಕ್ಷಮತೆ ನೀಡಲಾಗಿದೆ.

ಷೆವರ್ಲೆ ಸೈಲ್
ಏಕೆ ಬೇಕು: ಅತ್ಯುತ್ತಮ ಹ್ಯಾಚ್‌ಬ್ಯಾಕ್ ಕಾರು, ರೈಡಿಂಗ್ ಗುಣಮಟ್ಟ ಹಾಗೂ ವೈಶಿಷ್ಟ್ಯ.
ಏಕೆ ಬೇಡ: ಹಿಂದೆ ಮೂರು ಮಂದಿ ಪ್ರಯಾಣಿಕರಿಗೆ ಆರಾಮದಾಯಕದಾಗಿ ಕುಳಿತುಕೊಳ್ಳಲು ಸ್ವಲ್ಪ ಕಷ್ಟ, ಒಳಗಡೆ ಪ್ರೀಮಿಯಂ ವಿನ್ಯಾಸದ ಕೊರತೆ.
ತೀರ್ಪು: ಈ ಸೆಗ್ಮೆಂಟ್‌ನಲ್ಲಿ ಷೆವರ್ಲೆ ಸೈಲ್ ಅತ್ಯುತ್ತಮ ಕಾರೆನಿಸಿಕೊಂಡಿದೆ.

ಷೆವರ್ಲೆ ಸೈಲ್
ದರ: ಆರಂಭಿಕ ದರ 5.11 ಲಕ್ಷ ರು.
ಮೈಲೇಜ್: 18.2 kmpl (ಪೆಟ್ರೋಲ್), 22 kmpl (ಡೀಸೆಲ್)

ಫೋರ್ಡ್ ಕ್ಲಾಸಿಕ್
ಏಕೆ ಬೇಕು: ಉತ್ತಮ ಹ್ಯಾಂಡ್ಲಿಂಗ್, ಆರಾಮದಾಯಕತೆ, ಸ್ಥಳಾವಕಾಶ, ನಿರ್ವಹಣೆ
ಏಕೆ ಬೇಡ: ಟಾಪ್ ಎಂಡ್ ಟೈಟಾನಿಯಂ ಹೊರತುಪಡಿಸಿ ಇತರೆಲ್ಲ ವೆರಿಯಂಟ್‌ಗಳಿಗೆ ಎಬಿಎಸ್ ಮತ್ತು ಏರ್‌ಬ್ಯಾಗ್ ಫೀಚರ್ಸ್‌ಗಳ ಕೊರತೆ, ಔಟ್‌ಡೇಟಡ್ ವಿನ್ಯಾಸ.
ತೀರ್ಪು: ಸುರಕ್ಷತಾ ಫೀಚರ್ಸ್ ಹೊರತುಪಡಿಸಿ ಅತ್ಯುತ್ತಮ ರೈಡಿಂಗ್ ಅನುಭವ ನೀಡುವಲ್ಲಿ ಫೋರ್ಡ್ ಕ್ಲಾಸಿಕ್ ಯಶಸ್ವಿಯಾಗಿದೆ.

ಫೋರ್ಡ್ ಕ್ಲಾಸಿಕ್
ದರ: 5.64 ಲಕ್ಷ ರು.
ಮೈಲೇಜ್: 13.9 kmpl (ಪೆಟ್ರೋಲ್), 20 kmpl (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಹೋಂಡಾ ಅಮೇಜ್
ಏಕೆ ಬೇಕು: ಭಾರತದಲ್ಲಿ ಲಭ್ಯವಾಗುವ ಕಾರುಗಳ ಪೈಕಿ ಗರಿಷ್ಠ ಇಂಧನ ಕ್ಷಮತೆಯನ್ನು ಹೋಂಡಾ ಅಮೇಜ್ ಹೊಂದಿದೆ. ಮಾರುತಿ ಡಿಜೈರ್ ಹೋಲಿಸಿದಾಗ ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಪಯಣ ಖಾತ್ರಿಪಡಿಸುತ್ತದೆ. ಹೆಚ್ಚಿನ ಬೂಟ್ ಸ್ಪೇಸ್, ಮೃದುವಾದ ಗೇರ್, ಸ್ಟೀರಿಂಗ್ ಹಾಗೂ ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲೂ ಲಭ್ಯ.
ಏಕೆ ಬೇಡ: ಬೇಸಿಕ್ ಡ್ಯಾಶ್‌ಬೋರ್ಡ್ ಡಿಸೈನ್, ಡೀಸೆಲ್ ವೆರಿಯಂಟ್‌ನಲ್ಲಿ ಹೆಚ್ಚು ಶಬ್ದ ಮಾಲಿನ್ಯ. ವೈಬ್ರೇಷನ್.
ತೀರ್ಪು: ಹಾಗಿದ್ದರೂ ಹೋಂಡಾ ಅಮೇಜ್ ಅತ್ಯುತ್ತಮ ಸೆಡಾನ್ ಕಾರಾಗಿದೆ ಎಂಬುದು ಮಾರಾಟ ಅಂಕಿಅಂಶ ಪರಿಗಣಿಸಿದಾಗಲೇ ಬೆಳಕಿಗೆ ಬರುತ್ತದೆ.

ಹೋಂಡಾ ಅಮೇಜ್
ದರ: 5.05 ಲಕ್ಷ ರು.
ಮೈಲೇಜ್: 18 kmpl (ಪೆಟ್ರೋಲ್), 25.8 kmpl (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಮಹೀಂದ್ರ ವೆರಿಟೊ ವೈಬ್
ಏಕೆ ಬೇಕು: ಚಾಲನಾ ಗುಣಮಟ್ಟತೆ, ಹೆಚ್ಚು ಸ್ಥಳಾವಕಾಶ ಹೊಂದಿರುವ ಇಂಟಿರಿಯರ್.
ಏಕೆ ಬೇಡ: ರಿಯರ್ ಎಂಡ್ ವಿನ್ಯಾಸ, ಹೆವಿ ಸ್ಟೀರಿಂಗ್, ಅಶ್ವಶಕ್ತಿ ಕಡಿಮೆ, ವೈಶಿಷ್ಟ್ಯಗಳ ಕೊರತೆ
ತೀರ್ಪು: ನೂತನ ಎಂಟ್ರಿ ಲೆವೆಲ್ ಸೆಡಾನ್ ಕಾರು ಖರೀದಿಗಾರರನ್ನು ಗುರಿಯಾಗಿರಿಸಿಕೊಂಡು ಕಾರೊಂದನ್ನು ನಿರ್ಮಿಸುವಲ್ಲಿ ಮಹೀಂದ್ರ ಯಶಸ್ವಿಯಾಗಿದೆ. ಆದರೆ ವಿನ್ಯಾಸದ ಕೊರತೆ ಹಾಗೂ ಗ್ರಾಹಕರಲ್ಲಿ ಟ್ಯಾಕ್ಸಿ ಕಾರೆಂಬ ಭಾವನೆ ಮಾರಾಟ ಕುಸಿತಕ್ಕೆ ಕಾರಣವಾಗಿದೆ.

ಮಹೀಂದ್ರ ವೆರಿಟೊ ವೈಬ್
ದರ: 5.68 ಲಕ್ಷ ರು.
ಮೈಲೇಜ್: 20.8 (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ಏಕೆ ಬೇಕು: ಇದು ತನ್ನ ಇಂಧನ ಕ್ಷಮತೆಗೂ ಉತ್ತಮ ಹ್ಯಾಡ್ಲಿಂಗ್ ಹಾಗೂ ನಿರ್ವಹಣೆಗೆ ಮೆಚ್ಚುಗೆಗೆ ಪಾತ್ರವಾಗಿದೆ. ಮಾರುತಿ ಡಿಜೈರ್ ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲೂ ಲಭ್ಯವಿದೆ.
ಏಕೆ ಬೇಡ: ಹಿಂದುಗಡೆ ವಿನ್ಯಾಸ ಮನಸೆಳೆಯುವಲ್ಲಿ ವಿಫಲ, ಕಡಿಮೆ ಬೂಟ್ ಸ್ಪೇಸ್.
ತೀರ್ಪು: ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಡಿಜೈರ್ ಈಗಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ದೇಶದ ರಸ್ತೆ ಪರಿಸ್ಥಿತಿಯನ್ನು ಗಮನಿಸಿದಾಗ ಡಿಜೈರ್ ಉತ್ತಮ ಆಯ್ಕೆಯಾಗಿರಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ದರ: ಆರಂಭಿದ ದರ 4.92 ಲಕ್ಷ ರು.
ಮೈಲೇಜ್: 19 kmpl (ಪೆಟ್ರೋಲ್), 23.4 kmpl (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಟೊಯೊಟಾ ಎಟಿಯೋಸ್
ಏಕೆ ಬೇಕು: ಚಾಲನಾ ಗುಣಮಟ್ಟತೆ, ಸ್ಥಳಾವಕಾಶ, 5 ಮಂದಿಗೆ ಆರಾಮದಾಯಕ ಪಯಣ, ಡೀಸೆಲ್ ಎಂಜಿನ್ ಇಂಧನ ದಕ್ಷತೆ
ಏಕೆ ಬೇಡ: ಹೈವೇಯಲ್ಲಿ ಎಂಜಿನ್ ನಿರ್ವಹಣೆ ಹಿನ್ನಡೆ, ವಿನ್ಯಾಸದ ಕೊರತೆ.
ತೀರ್ಪು: ಟೊಯೊಟಾದ ವಿಶ್ವಾಸಾರ್ಹ ಸೇವೆ (ಸರ್ವೀಸ್) ಪ್ರಮುಖ ಅಂಶವಾಗಿದೆ.

ಟೊಯೊಟಾ ಎಟಿಯೋಸ್
ದರ: 5.49 ಲಕ್ಷ ರು.
ಮೈಲೇಜ್: 16.78 kmpl (ಪೆಟ್ರೋಲ್), 23.59 kmpl (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಟಾಟಾ ಇಂಡಿಗೊ ಇಸಿಎಸ್ (eCS)
ಏಕೆ ಬೇಕು: ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನಿಂದ ಆಗಮನವಾಗಿರುವ ಆಕರ್ಷಕ ಸೆಡಾನ್ ಕಾರು ಇಸಿಎಸ್ ಆಗಿದೆ. ದರ ಹಾಗೂ ಫೀಚರ್ಸ್‌ಗಳಲ್ಲಿ ಉತ್ತಮ ಆಯ್ಕೆಯಾಗಿರಲಿದೆ.
ಏಕೆ ಬೇಡ: ಸಾಫ್ಟ್ ಸಸ್ಫೆಷನ್, ಹ್ಯಾಂಡ್ಲಿಂಗ್, ಫಿನಿಶಿಂಗ್ ಕೊರತೆ.
ಅಂತಿಮ ತೀರ್ಪು: ನಾಲ್ಕು ಮೀಟರ್ ಪರಿಮಿತಿಯೊಳಗೆ ಲಭ್ಯವಾಗುವ ಅಗ್ಗದ ಸೆಡಾನ್ ಕಾರು ಇದಾಗಿದೆ.

ಟಾಟಾ ಇಂಡಿಗೊ ಇಸಿಎಸ್ (eCS)
ದರ: ಆರಂಭಿಕ ದರ 4.99 ಲಕ್ಷ ರು.
ಮೈಲೇಜ್: 14 kmpl (ಪೆಟ್ರೋಲ್), 25 kmpl (ಡೀಸೆಲ್)
ವೆರಿಯಂಟ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಅಂತಿಮ ತೀರ್ಪು
ಒಟ್ಟಾರೆಯಾಗಿ ಹೇಳುವುದಾದ್ದಲ್ಲಿ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಕಾರು ಆಯ್ಕೆ ಮಾಡಬೇಕಾಗಿದೆ. ಯಾಕೆಂದರೆ ಕೆಲವೊಂದು ಮಾದರಿಗಳು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ನೀವು ರೈಡಿಂಗ್ ಹಾಗೂ ಹ್ಯಾಂಡ್ಲಿಂಗ್ ಪರಿಗಣಿಸುವುದಾದ್ದಲ್ಲಿ ಫೋರ್ಡ್ ಕ್ಲಾಸಿಕ್ ಉತ್ತಮ ಆಯ್ಕೆಯಾಗಿರಲಿದೆ. ಇನ್ನೊಂದೆಡೆ ಇಂಧನ ಕ್ಷಮತೆ ದೃಷ್ಟಿಕೋನಲ್ಲಿ ಹೋಂಡಾ ಅಮೇಜ್ ಇತರೆಲ್ಲ ಆವೃತ್ತಿಗಳನ್ನು ಮೀರಿ ನಿಂತಿದೆ. ಇನ್ನು ಅಗ್ಗದ ದರದಲ್ಲಿ ಇಸಿಎಸ್ ಲಭ್ಯವಾಗಲಿದೆ. ಹಾಗೆಯೇ ವೈಶಿಷ್ಟ್ಯಗಳ ದೃಷ್ಟಿಕೋನಲ್ಲಿ ಸೈಲ್ ಉತ್ತಮವಾಗಿರಲಿದೆ. ಈಗಲೂ ನಿಮ್ಮನ್ನು ಗೊಂದಲ ಕಾಡುತ್ತಿದ್ದಲ್ಲಿ ನಮ್ಮ 'ಹೊಸ ಕಾರು' ಪುಟಕ್ಕೆ ಭೇಟಿ ಕೊಟ್ಟು ಸ್ವತ: ಮಾಹಿತಿ ಗಿಟ್ಟಿಸಿಕೊಳ್ಳಿರಿ...


Click it and Unblock the Notifications








