ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

By Nagaraja

ಹಾಗೆಯೇ ವಾಹನಗಳ ವಿಮರ್ಶೆಗಳನ್ನು ಪ್ರಾಮಾಣಿಕವಾಗಿ ನಡೆಸುಕೊಂಡು ಬರುತ್ತಿರುವ ನಮ್ಮ ತಂಡಕ್ಕೆ ಅಂದೊಂದು ದಿನ ಶನಿವಾರ ಅಪರಾಹ್ನ ಆಕರ್ಷಕ ಟೊಯೊಟಾ ಎಟಿಯೋಸ್ ಲಿವಾ ಕಾರು ಬಂದು ತಲುಪಿತ್ತು. ಟೊಯೊಟಾ ವಿಶ್ವಾಸಾರ್ಹತೆ ಬಗ್ಗೆ ಆಗಲೇ ಅರಿತುಕೊಂಡಿರುವ ನಮಗೆ ಎಟಿಯೋಸ್ ಲಿವಾ ಸಂಪೂರ್ಣ ಹೊಸ ಅನುಭವವಾಗಿತ್ತು.

ಇನ್ಯಾಕೆ ತಡ ಎಂಬಂತೆ ಸಂಪೂರ್ಣ ಪ್ರಯಾಣ ವಿಮರ್ಶೆ ಬರೆಯುವ ಹುಮ್ಮಸ್ಸಿನಲ್ಲಿದ್ದ ನಮ್ಮ ತಂಡವು ಬೆಂಗಳೂರಿನಿಂದ ನಮ್ಮ ನಿಮ್ಮೆಲ್ಲರ ಪ್ರವಾಸಿ ತಾಣ ಕೊಡೈಕೆನಾಲ್‌ಗೆ ಪಯಣ ಬೆಳೆಸಿತ್ತು. ಹೈವೇ ಜೊತೆ ಜೊತೆಗೆ ವಾಹನ ದಟ್ಟಣೆ ಹಾಗೂ ಬೆಡ್ಡಗಾಡು ಪ್ರದೇಶಗಳಲ್ಲಿ ಎಟಿಯೋಸ್ ಲಿವಾ ನಿರ್ವಹಣೆ ಹೇಗಿದೆ ಎಂಬುದು ಪರೀಕ್ಷಿಸುವ ಉದ್ದೇಶ ನಮ್ಮದ್ದಾಗಿತ್ತು.

ಸ್ಟ್ಯಾರ್ಟಿಂಗ್ ಪಾಯಿಂಟ್

ಸ್ಟ್ಯಾರ್ಟಿಂಗ್ ಪಾಯಿಂಟ್

ಬೆಂಗಳೂರಿನ ಜನನಗರದಲ್ಲಿರುವ ನಮ್ಮ ಒನ್ ಇಂಡಿಯಾ ಕಚೇರಿಯಿಂದ ಹೊರಗಿಳಿದು ಕಾರೊಳಗೆ ಸೇರಿಕೊಂಡು ನಮ್ಮ ತಂಡದ ಸದಸ್ಯರು ಸೀಟು ಬೆಲ್ಟ್ ಬಿಗುಗೊಳಿಸಿ ಕೀ ಮೂಲಕ ಚಾಲನೆಯ ಕಿಡಿ ಹೊತ್ತಿಸಿಯೇ ಬಿಟ್ಟರು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಆಗಲೇ ಮಳೆಯಿಂದಾಗಿ ಮೋಡ ಕವಿದ ವಾತಾವರಣ ಹಾಗೂ ಆಕಾಶವನ್ನು ಕತ್ತಲೆ ಆವರಿಸಿರುವುದು ಇನ್ನೊಂದೆಡೆ ವಾಹನ ದಟ್ಟಣೆಯ ಟ್ರಬಲ್ ಇವೆಲ್ಲವೂ ಎಟಿಯೋಸ್ ಲಿವೊಗೆ ಎದುರಾದ ಮೊದಲ ಸವಾಲಾಗಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಹೊಸುರು ರಸ್ತೆ ದಾಟಿದ ತಂಡವು ಚಹಾ ಪ್ರಿಯ ದೇಶದ ಸಾಮಾನ್ಯ ಪ್ರಜೆಯಂತೆ ನಮ್ಮ ಮನದಲ್ಲೂ ಟೀ ಬ್ರೇಕ್ ತಗೊಳ್ಳುವ ಹುಮ್ಮಸ್ಸಾಗಿತ್ತು. ಈಗ ಸ್ವಲ್ಪ ಬ್ರೇಕ್, ಒಂದು ಕಡಕ್ ಟೀ ಕುಡಿದು ಮತ್ತೆ ಬರ್ತಿವಿ...

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಅಲ್ಲಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ 7ರ ಮೂಲಕ ತಮಿಳುನಾಡು ಪ್ರವೇಶವಾದ ನಮ್ಮ ತಂಡಕ್ಕೆ ಭವ್ಯ ಭಾರತದ ದರ್ಶನವಾಗಿತ್ತು. ಆ ದೇವಿಯ ಆಶೀರ್ವಾದ ಪಡೆದುಕೊಂಡೇ ಮುಂದೆ ಸಾಗುವುದೇ ನಮ್ಮ ಇರಾದೆಯಾಗಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಕೊಡೈಕೆನಾಲ್‌‌ನಲ್ಲಿ ಸುಂದರ ಮುಂಜಾನೆ ನಮ್ಮನ್ನು ಸ್ವಾಗತಿಸಿತ್ತು. ನಮ್ಮ ತಂಡದ ಸಹ ಸದಸ್ಯನ ಕೈಗಳು ಆ ಆಕರ್ಷಕ ದೃಶ್ಯಗಳನ್ನು ಸೆರೆ ಹಿಡಿಯುವ ತವಕದಲ್ಲಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಹಾಗಿದ್ದರೆ ಬನ್ನಿ ಕಾರಿನ ಬಗ್ಗೆ ಸ್ವಲ್ಪ ಮಾತನೋಡಣವೇ. ಜಪಾನ್ ಮೂಲದ ಈ ಹ್ಯಾಚ್ ಬ್ಯಾಕ್ ಕಾರಿನ ಮುಂಭಾಗವು ಸರಳ ವ್ಯಕ್ತಿತ್ವವನ್ನು ತೋರಿಸುವಂತಿತ್ತು. ಹೊಸ ಗ್ರಿಲ್ ವಿನ್ಯಾಸ ಸೇರಿದಂತೆ ಒಟ್ಟಾರೆ ಮುಂಭಾಗ ವಿನ್ಯಾಸವು ಮನಸೆಳೆಯುವಂತಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಬದಿಯಿಂದ ನೋಡಿದರೆ ಒಂದು ಕಾಂಪಾಕ್ಟ್ ಕಾರಿನಂತೆ ಭಾಸವಾಗುತ್ತಿತ್ತು. 15 ಇಂಚುಗಳ ಅಲಾಯ್ ವೀಲ್, ಸ್ವಭಾವ ರೇಖೆ ಹಾಗೂ ದೊಡ್ದದಾದ ಚಕ್ರಗಳು ನಿಜಕ್ಕೂ ಚಾಲಕನ ಮೆಚ್ಚುಗೆಗೆ ಪಾತ್ರವಾಗಲಿದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಹಿಂಬದಿಯಲ್ಲಿ ಟೊಯೊಟಾ ಲಾಂಛನದ ಮೇಲ್ಗಡೆಯಲ್ಲಿ ಕ್ರೋಮ್ ಸ್ಪರ್ಶವನ್ನು ಕಾಣಬಹುದಾಗಿದೆ. ಟೈಲ್ ಲ್ಯಾಂಪ್ ಗಳು ಸ್ವಲ್ಪ ಮುದುಡಿಕೊಂಡಂತೆ ಇದ್ದರೂ ಹ್ಯಾಚ್ ಬ್ಯಾಕ್ ಕಾರಿಗಿದು ಬೇಕಾದಷ್ಟಾಗಿದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಸಾಮಾನ್ಯಗಿಂತಲೂ ವಿಭಿನ್ನವಾಗಿ ಕಾರಿನ ಮೇಲ್ಬಾಗದಿಂದ ಕ್ಲಿಕ್ಕಿಸುವ ಪ್ರಯತ್ನ ನಮ್ಮದ್ದಾಗಿತ್ತು. ಲಿವಾ ಒಟ್ಟಾರೆ ವಿನ್ಯಾಸವು ಸರಳ ಹಾಗೂ ಕಣ್ಮಣ ಸೆಳೆಯುವಂತಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಕೊಡೈಕೆನಾಲ್‌‌ ಸುತ್ತುಮುತ್ತಲಿನ ಪ್ರದೇಶವನ್ನು ಸುತ್ತಾಡಿದ ನಮ್ಮ ತಂಡ ಟೊಯೊಟಾ ಎಟಿಯೋಸ್ ಲಿವಾ ಕಾರಿನ ಪರಿಪೂರ್ಣ ಚಾಲನಾ ಪರೀಕ್ಷೆಯನ್ನು ಹಮ್ಮಿಕೊಂಡಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಕಾರಿನೊಳಗೆ ಟು ಟೋನ್ ಬೀಜ್ ಬಣ್ಣಗಳು ಪ್ರಮುಖ ಆಕರ್ಷಣೀಯವೆನಿಸಿತ್ತು. 180 ಡಿಗ್ರಿಯಲ್ಲಿ ತಿರುಗಬಲ್ಲ ಏರ್ ವೆಂಟ್ಸ್ ಸೇರಿದಂತೆ ಒಂದು ಹ್ಯಾಚ್ ಬ್ಯಾಕ್ ಕಾರಿಗೆ ಬೇಕಾದ ರೀತಿಯ ಸೌಲಭ್ಯಗಳನ್ನು ಕೈಗೆಟುಕುವಂತೆ ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಆಕ್ಸಿಲೇಟರ್, ಬ್ರೇಕ್ ಹಾಗೂ ಕ್ಲಚ್ ಪೆಡಲ್ ಗಳ ಚಿತ್ರಣ.

ಚಾಲನಾ ಸಾಮರ್ಥ್ಯ

ಚಾಲನಾ ಸಾಮರ್ಥ್ಯ

ಟೊಯೊಟಾ ಎಟಿಯೋಸ್ ಲಿವಾ ಚಾಲನಾ ಸಾಮರ್ಥ್ಯವನ್ನು ನಿಜಕ್ಕೂ ಎತ್ತಿ ಹೇಳಲೇಬೇಕಾಗುತ್ತದೆ. ಸಾಮಾನ್ಯವಾಗಿ 1.4 ಲೀಟರ್ ಡೀಸೆಲ್ ಎಂಜಿನ್ ಅಷ್ಟೊಂದು ಶಕ್ತಿಶಾಲಿ ಆಗಿಲ್ಲವಾದರೂ ಸರಾಸರಿ 68 ಅಶ್ವಶಕ್ತಿ ಉತ್ಪಾದಿಸುವ ಈ ಕಾರು ನಿರೀಕ್ಷೆಗೂ ಮೀರಿದ ಪವರ್ ವಿತರಿಸುತ್ತದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಚಾಲನೆ ಹಾಗೂ ಹ್ಯಾಂಡ್ಲಿಂಗ್ ವಿಷಯಕ್ಕೆ ಬಂದಾಗ ಉತ್ತಮ ಸಮತೋಲನವನ್ನು ಟೊಯೊಟಾ ಎಟಿಯೋಸ್ ಲಿವಾ ಕಾಪಾಡಿಕೊಳ್ಳುತ್ತದೆ. 170 ಎಂಎಂ ಗ್ರೌಂಡ್ ಕ್ಲಿಯರನ್ಸ್ ನೊಂದಿಗೆ ತಿರುವುಗಳಲ್ಲೂ ವಿಶ್ವಾಸಭರಿತ ಚಾಲನೆಯನ್ನು ಪ್ರದಾನ ಮಾಡುತ್ತದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಟೊಯೊಟಾ ಎಟಿಯೋಸ್ ಲಿವಾ ಟಾಪ್ ಎಂಡ್ ವಿಎಕ್ಸ್‌ಡಿ ಕಾರಿನಲ್ಲಿ ಅಲಾಯ್ ವೀಲ್, ಫಾಗ್ ಲ್ಯಾಂಪ್, ರಿಯರ್ ವಾಶ್ ವೈಪರ್ ಮತ್ತು ಕ್ರೋಮ್ ಗಾರ್ನಿಶ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಹಸಿರು ತೋರಣಗಳಂತೆ ಕೊಡೈಕೆನಾಲ್‌ ರಸ್ತೆಗಳ ಎರಡು ಕಡೆಗಳಲ್ಲೂ ಹರಡಿರುವ ಗಿಡ ಮರಗಳು ನಿಜಕ್ಕೂ ನಮ್ಮ ಚಾಲನಾ ಅನುಭವವನ್ನು ಸ್ಮರಣೀಯವಾಗಿಸಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಹಸಿರು ವರ್ಣದಿಂದ ಆಲಂಕೃತವಾದ ಪ್ರದೇಶಗಳು ಅಲ್ಲಲ್ಲಿ ನಿಂತು ಫೋಟೊ ಕ್ಲಿಕ್ಕಿಸುವಂತೆ ನಮ್ಮನ್ನು ಪದೇ ಪದೇ ಪ್ರೇರೇಪಿಸುತ್ತಿದ್ದವು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

1000 ಕೀ.ಮೀ.ಗಳಷ್ಟು ದೂರ ಸುತ್ತಾಡಿದರೂ ಇನ್ನು ನಮ್ಮ ಟೊಯೊಟಾ ಕಾರಿಗೆ ಕಿಂಚಿತ್ತು ದಣಿವು ಆವರಿಸಿರಲಿಲ್ಲ. ಅಲ್ಲವೇ ?

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಲಿವಾ ಹೆಸರಲ್ಲೇ ಸೂಚಿಸಿರುವಂತೆಯೇ ಸುಂದರ ಜೀವನವನ್ನು ಕೊಡೈಕೆನಾಲ್ ಕೈಬೀಸಿ ಕರೆಯುತ್ತಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ರಾತ್ರಿ ವೇಳೆಯಲ್ಲಿ ಪ್ರಕಾಶಮಾನವಾದ ಟೊಯೊಟಾ ಎಟಿಯೋಸ್ ಲಿವಾ ಹೆಡ್ ಲೈಟ್ ನಿಖರತೆ ಆನಂದಿಸಿ...

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಟೈಲ್ ಲೈಟ್ ಬಗ್ಗೆ ಸಂದೇಹವಿದೆಯೇ ? ಬನ್ನಿ ಇದಕ್ಕೂ ಇಲ್ಲಿದೆ ಉತ್ತರ

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

'ಮಂಗನಿಂದ ಮಾನವ'. ನಮ್ಮ ವ್ಯತ್ಯಸ್ಥ ಫೋಟೊ ಶೂಟ್ ಗೆ ಇದೊಂದು ಉದಾಹರಣೆ ಮಾತ್ರ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಇದು ರಾತ್ರಿ ವೇಳೆಯಲ್ಲಿ ಚಿತ್ರಿಸಿದ ಕೊಡೈ ಸರೋವರದ ಮನ ಸೆಳೆಯುವ ದೃಶ್ಯ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಈಗ ಸ್ವದೇಶಕ್ಕೆ ಹಿಂದಿರುಗುವ ಸಮಯ. ಆಗಲೇ ತಾಪಮಾನ 14 ಡಿಗ್ರಿಗಳಿಗೆ ಇಳಿಕೆಯಾಗಿತ್ತು. ಚಳಿ ಚಳಿಯಲ್ಲೂ ಎಟಿಯೋಸ್ ಲಿವಾ ಜೊತೆಗಿನ ನಮ್ಮ ಪಯಣ ಸುಂದರಮಯವಾಗಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಮಾರನೇಯ ದಿನ ಬೆಳಗ್ಗೆ ಕೊಡೈಕನಾಲ್ ಜೊತೆಗೆ ಪಲನಿ ಬೆಟ್ಟವು ನಮಗೆ ಗುಡೈ ಬೈ ಹೇಳುತ್ತಿದ್ದವು. 251 ಲೀಟರ್ ಢಿಕ್ಕಿ ಜಾಗವು ಟೊಯೊಟಾ ಸಣ್ಣ ಕಾರಿನಲ್ಲಿ ಪರಿಣಾಮಕಾರಿಯೆನಿಸಿತ್ತು.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಪ್ರತಿಯೊಬ್ಬ ವಾಹನ ಹಾಗೂ ಚಾಲನಾ ಪ್ರಿಯರಿಗೆ ಇದೊಂದು ಕನಸಿನ ಯಾತ್ರೆಯಾಗಿರಬಹುದು. ಸುಂದರ ಪ್ರಕೃತಿ ದೃಶ್ಯಗಳೊಂದಿಗೆ ಅಡ್ಡಾದಿಡ್ಡಿ ಮಾರ್ಗವು ನೈಜ ಚಾಲನಾ ಸಾಮರ್ಥ್ಯವನ್ನು ಪರೀಕ್ಷಿಸಲಿದೆ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಎಚ್ಚರ! ಘಾಟಿ ರಸ್ತೆಯಲ್ಲಿ ಇಳಿಮುಖವಾಗಿ ಸಂಚರಿಸುವಾಗ ವೇಗ ಮಿತಿಯೊಂದಿಗೆ

ಸುರಕ್ಷಿತ ಚಾಲನೆಗೂ ಪ್ರಾಮುಖ್ಯತೆ ನೀಡುವುದು ಅಷ್ಟೇ ಮುಖ್ಯ.

ಪ್ರಯಾಣ ವಿಮರ್ಶೆ; ಸರಳ, ಸಂತುಷ್ಟ ಕುಟುಂಬಕ್ಕೆ ಎಟಿಯೋಸ್ ಲಿವಾ

ಅಂತೂ ಕೊನೆಗೆ ಸುರಕ್ಷಿತವಾಗಿ ನಮ್ಮ ಬೆಂಗಳೂರು ನಗರವನ್ನು ತಲುಪಿದೆವು. ಈಗ ಕಾರು ಹಸ್ತಾಂತರಿಸುವ ಸಮಯ. ಆದರೆ ಹೊಸ ಟೊಯೊಟಾ ಎಟಿಯೋಸ್ ಲಿವಾ ಕಾರಿನ ಪರಿಣಾಮಕಾರಿ ಎಂಜಿನ್, ಆಕರ್ಷಕ ನೋಟ, ಇಂಧನ ಕ್ಷಮತೆ, ವಿಶ್ವಾಸಾರ್ಹತೆ, ಹ್ಯಾಂಡ್ಲಿಂಗ್ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಧನಾತ್ಮಕ ಅಂಶಗಳು ನಮ್ಮ ಮನಸ್ಸಿನಲ್ಲಿ ಗೊಣಗುತ್ತಲೇ ಇದ್ದವು. ಕೊನೆಗೆ ನಮ್ಮ ಮನದಲ್ಲಿ ಮೂಡಿದ ಸಂದೇಶ. "ಹ್ಯಾಪಿ ಡ್ರೈವಿಂಗ್ ವಿತ್ ಟೊಯೊಟಾ ಎಟಿಯೋಸ್ ಲಿವಾ, ಹ್ಯಾಪಿ ಲಿವಿಂಗ್ ಟು..."

More from DriveSpark

Article Published On: Saturday, August 1, 2015, 13:14 [IST]
English summary
So we've kinda burst the bubble already, but what made this car tick so many boxes? Well, that's what we're here to reveal to you, so let's dive right into the thick of it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+