ರಮ್ಯಳಿಗೆ ಒಲಿದ ಎತ್ತರದ ಹುಡುಗ-ವ್ಯಾಗನಾರ್

By * ಪ್ರವೀಣ ಚಂದ್ರ

New Maruti Wagon R User Review
ಕೊನೆಗೂ ರಮ್ಯಳ ಎರಡು ವರುಷದ ಕನಸೊಂದು ನನಸಾಗಿದೆ. ಬಹುದಿನಗಳಿಂದ ಕನಸಲ್ಲಿ ಕಾಡುತ್ತಿದ್ದ ಎತ್ತರದ ಹುಡುಗ ಒಲಿದಿದ್ದಾನೆ. ಮುದ್ದುಮುಖದ ಗಂಭೀರೆ ರಮ್ಯಳ ಮುಖದಲ್ಲಿ ಥ್ರಿಲ್ಲಿಂಗ್, ಆನಂದ ಎದ್ದು ಕಾಣುತ್ತಿದೆ. ಹಳೆ ಗೆಳತಿ ಆಕ್ಟಿವಾ ಮುನಿಸಿಕೊಂಡಿದ್ದಾಳೆ.

ಕ್ಷಮಿಸಿ, ಕನ್ನಡ ಚಿತ್ರನಟಿ ರಮ್ಯಳ ಬಗ್ಗೆ ಹೇಳುತ್ತಿಲ್ಲ. ಬೆಂಗ್ಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ರಮ್ಯ ಎಂಎನ್ ವ್ಯಾಗನಾರ್ ವಿಎಕ್ಸ್ಐ ಕಾರೊಂದನ್ನು ಖರೀದಿಸಿದ್ದಾರೆ. ಕಾರು ಖರೀದಿಯ ಎರಡು ಕನಸುಗಳನ್ನು ಕನ್ನಡ ಡ್ರೈವ್ ಸ್ಪಾರ್ಕಿನೊಂದಿಗೆ ಹಂಚಿಕೊಂಡಿದ್ದಾರೆ.

ಐದು ಲಕ್ಷ ರುಪಾಯಿ ಆಸುಪಾಸಿನ ಕಾರೊಂದನ್ನು ಖರೀದಿಸಬೇಕೆಂದಿದ್ದರು. ಕೊನೆಗೆ ಬೆಂಗಳೂರಿನ ಕಲ್ಯಾಣಿ ಮೋಟರ್ಸ್ ನಲ್ಲಿ 4.6 ಲಕ್ಷ ರುಪಾಯಿಗೆ ವ್ಯಾಗನಾರ್ ವಿಎಕ್ಸ್ಐ ಕಾರು ಖರೀದಿಸಿದ್ದಾರೆ. ವ್ಯಾಗನಾರಿನ ಸ್ಪೀಡಿನಷ್ಟೇ ವೇಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲವನ್ನು ನೀಡಿತ್ತು.

ನಿಜಕ್ಕೂ ಕಾರಿನ ಅವಶ್ಯಕತೆ ಇದೆಯೆ? ಬೆಂಗ್ಳೂರಲ್ಲಿ ಪ್ರಯಾಣಿಸಲು ಆಕ್ಟಿವಾ ಸಾಲದೇ? ಎಂದೊಮ್ಮೆ ಯೋಚಿಸಿದ್ರು. ಸ್ವಿಫ್ಟ್, ಫಿಗೊ, ವ್ಯಾಗನಾರ್ ಈ ಮೂವರಲ್ಲಿ ಯಾರು ಹಿತವರು? ಎಂಬ ಪ್ರಶ್ನೆಯೂ ಕಾಡಿತ್ತು. ಈ ಎಲ್ಲಾ ಸಂದಿಗ್ಧತೆ, ಪ್ರಶ್ನೆಯಿಂದಾಗಿ ಕಾರು ಖರೀದಿ ಎರಡು ವರ್ಷ ಡಿಲೇ ಆಗಿತ್ತು.

ಫೈನಲಿ, ಫೆಬ್ರವರಿ ಹತ್ತರ ಒಂದು ಶುಭಮಹೂರ್ತದಲ್ಲಿ ಎತ್ತರದ ಹುಡುಗ ವ್ಯಾಗನಾರಿಗೆ ರಮ್ಯ ಲೈನ್ ಹೊಡೆದಿದ್ದಾರೆ. ಪುಣ್ಯಕ್ಕೆ ಅವ್ರ ಪತಿ ವಿನಯ್ ಗೂ ಈ ಹುಡುಗ ಇಷ್ಟವಾಗಿದ್ದಾನೆ. ಈ ಕಾರು ನನ್ನ ಮಗುವಿನಂತೆ ಅಂದಾಗ ರಮ್ಯಳ ಮಗ ಅಭಯ್ ಅಸೂಯೆ ಪಟ್ಟಿಲ್ಲ.

ಈ ಕಾರು ಖರೀದಿಸುವ ಮುನ್ನ ಹೋಂಡಾ ಆಕ್ಟಿವಾ ರೈಡ್ ಮಾಡುತ್ತಿದ್ರು. ಯಾವಾಗ್ಲೂ ಕಾರಲ್ಲೇ ಪ್ರಯಾಣಿಸಲು ಆಗುವುದಿಲ್ಲ. ಹೀಗಾಗಿ ಆಕ್ಟಿವಾ ಸ್ಕೂಟರನ್ನು ಉಳಿಸಿಕೊಂಡಿದ್ದಾರೆ. ದರ, ಮೈಲೇಜ್, ಕಂಫರ್ಟ್ ಈ ಕಾರಲ್ಲಿ ಮುಖ್ಯವಾಗಿ ರಮ್ಯಳಿಗೆ ಇಷ್ಟವಾದ ಸಂಗತಿಗಳು. ಈ ಕಾರಲ್ಲಿ ಸದ್ಯಕ್ಕೆ ಸಿಟಿ ಪ್ರಯಾಣ ಮಾಡಿದ್ದಾರೆ. ದೂರ ಪ್ರಯಾಣ ಮಾಡಲು ಟೈಂ ಎಲ್ಲಿದೆ ಎನ್ನುತ್ತಾರೆ(ಸಾಫ್ಟ್ ವೇರ್ ಉದ್ಯೋಗಿಗಳ ಹಣೆಬರಹ!).

ವ್ಯಾಗನಾರ್ ಅಲ್ಲದೇ ನೀವು ಇಷ್ಟಪಡುವ ನಿಮ್ಮ ಕನಸಿನ ಕಾರು ಯಾವುದೆಂಬ ಪ್ರಶ್ನೆಗೆ ದುಬಾರಿ ಲಕ್ಷುರಿ ಪೋರ್ಷ್ ರೆಕ್ಸಾಟನ್ ಎಂದು ಹೇಳಿ ರಮ್ಯ ಗಂಭೀರವಾದರು. ಮಾರುತಿ ಸುಜುಕಿಯ ವ್ಯಾಗನಾರ್ ಲಕ್ಷ ಲಕ್ಷ ಜನರ ಇಷ್ಟದ ಕಾರು. ಕಂಪನಿಯು ಈಗಾಗಲೇ ಹತ್ತು ಲಕ್ಷಕ್ಕಿಂತಲೂ ಹೆಚ್ಚು ವ್ಯಾಗನಾರ್ ಮಾರಾಟ ಮಾಡಿದೆ. ಇದೀಗ ವ್ಯಾಗನಾರ್ ಫ್ಯಾನ್ ಕ್ಲಬಿಗೆ ರಮ್ಯ ಬಿಎಂ ಜಾಯಿನ್ ಆಗಿದ್ದಾರೆ.

ವ್ಯಾಗನಾರ್ ಆರ್ 998ಸಿಸಿಯ ಮೂರು ಸಿಲಿಂಡರಿನ ಎಂಜಿನ್ ಹೊಂದಿದ್ದು 68 ಹಾರ್ಸ್ ಪವರ್ ಮತ್ತು 90 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 156 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 18 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ 14.6 ಕಿ.ಮೀ. ಮೈಲೇಜ್ ನೀಡುತ್ತದೆ.

ಪ್ರತಿಯೊಬ್ಬರಿಗೂ ಎರಡು ಬಗೆಯ ಕಾರಿನ ಕನಸಿರುತ್ತದೆ. ಒಂದು ಖರೀದಿಸಬಹುದಾದ ಕನಸಿನ ಕಾರು. ಇನ್ನೊಂದು ಸುಲಭವಾಗಿ ಖರೀದಿಸಲಾಗದ ದುಬಾರಿ ಕನಸಿನ ಕಾರು. ಅದ್ರಲ್ಲಿ ಮೊದಲ ಕನಸು ಈಡೇರಿಸುವುದು ಸುಲಭ. ಎರಡನೇ ಕನಸು ಕೆಲವೊಮ್ಮೆ ಕನಸಾಗಿಯೇ ಉಳಿಯುತ್ತದೆ. ನನ್ನ ಮೊದಲ ಕನಸು ಈಗ ನನಸಾಗಿದೆ. ಎರಡನೇ ಕನಸು ಯಾವಾಗ ನನಸಾಗುತ್ತೋ ಗೊತ್ತಿಲ್ಲ! ಎಂದು ರಮ್ಯ ಹೇಳುತ್ತಾರೆ.

ರಮ್ಯಳ ಕನಸು ನನಸಾಗಲಿ ಎನ್ನುವುದು ಕನ್ನಡ ಡ್ರೈವ್ ಸ್ಪಾರ್ಕ್ ಆಶಯ. ನೀವು ಹೊಸ ಕಾರು, ಬೈಕು ಖರೀದಿಸಿದ್ರೆ, ಅಥವಾ ನಿಮ್ಮಲ್ಲಿರುವ ಹಳೆಯ ಕಾರು ಕುರಿತಾಗಿ ನಮಗೆ ಬರೆದು ಕಳುಹಿಸಬಹುದು. ನಮ್ಮ ವಿಳಾಸ. [email protected]

More from DriveSpark

Article Published On: Monday, February 13, 2012, 12:41 [IST]
English summary
The Maruti Suzuki Wagon R is one of the most preferred small cars in India. It offers the best of space, mileage and comfort at an affordable
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+