Tayron R-Line: 7-ಸೀಟರ್.. ಫಾರ್ಚುನರ್ ವಿರುದ್ಧದ ಹೊಸ ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ರಿವ್ಯೂ.. ಹೇಗಿದೆ ಗೊತ್ತಾ?
ಟೊಯೊಟಾ ಫಾರ್ಚುನರ್ (Toyota Fortuner) ಫುಲ್-ಸೈಜ್ ಎಸ್‌ಯುವಿಯಾಗಿದೆ. ಇದಕ್ಕೆ ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ (Volkswagen Tayron R-Line) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇತ್ತೀಚೆಗೆ ಈ ಕಾರನ್ನು ಅನಾವರಣಗೊಳಿಸಲಾಯಿತು. ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಅತಿ ಶೀಘ್ರದಲ್ಲೇ ಅದ್ದೂರಿಯಾಗಿಯೂ ಬಿಡುಗಡೆಯಾಗಲಿದೆ. ಕನಿಷ್ಠ ರೂ.48 ಲಕ್ಷ ಹಾಗೂ ಗರಿಷ್ಠ ರೂ.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಕೆಲವೇ ದಿನಗಳ ಹಿಂದೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಹೊಚ್ಚ ಹೊಸ 'ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್' ಎಸ್‌ಯುವಿಯು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ನೂತನ ಕಾರಿನ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ವಿನ್ಯಾಸ & ಬಣ್ಣಗಳು (Design & Colours):
ನೂತನ 'ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್' ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್), ದೊಡ್ಡದಾದ ಗ್ರಿಲ್, ಇಲ್ಯುಮಿನೇಟ್ 'ಪೋಕ್ಸ್‌ವ್ಯಾಗನ್' ಲೋಗೋಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 19-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಅಲ್ಟ್ರಾ ವೈಲೆಟ್, ನೈಟ್‌ಶೇಡ್ ಬ್ಲೂ, ಸಿಪ್ರೆಸಿನೊ ಗ್ರೀನ್, ಗ್ರೆನಡಿಲ್ಲಾ ಬ್ಲ್ಯಾಕ್, ಓರಿಕ್ಸ್ ವೈಟ್, ಡಾಲ್ಫಿನ್ ಗ್ರೇ ಹಾಗೂ ಆಯ್ಸ್ಟರ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಸುತ್ತಳತೆ (Dimensions):
ಈ ಕಾರು ಸಾಕಷ್ಟು ವಿಶಾಲವಾಗಿದೆ. 4,792 ಮಿ.ಮೀ ಉದ್ದ, 1,866 ಮಿ.ಮೀ ಅಗಲ ಹಾಗೂ 1,665 ಮಿ.ಮೀ ಎತ್ತರವಿದೆ. 181 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,789 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 1,918 ಕೆಜಿ ತೂಕವಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ಇದು 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 445 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಕಾರ್ಯಕ್ಷಮತೆ (Performance):
ಹೊಸ 'ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್' ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 204 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 320 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. ಎಡಬ್ಲ್ಯೂಡಿ (ಆಲ್-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ. 12.6 ರಿಂದ 13.15 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಒಳಾಂಗಣ & ವೈಶಿಷ್ಟ್ಯಗಳು (Interior & Features):
ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಅತ್ಯುತ್ತಮವಾದ ಡ್ಯಾಶ್‌ಬೋರ್ಡ್‌ನ್ನು ಒಳಗೊಂಡಿದೆ. 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪ್ರೀಮಿಯಂ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, ಕನೆಕ್ಟ್ಡ್ ಕಾರ್ ಟೆಕ್, ಹೆಡ್ಸ್-ಅಪ್ ಡಿಸ್‌ಪ್ಲೇ, ಮಸಾಜ್, ವೆಂಟಿಲೇಷನ್ & ಹೀಟೆಡ್ ಫ್ರಂಟ್ ಸೀಟ್‌ಗಳು, ಟ್ರಿಪಲ್-ಜೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 30-ಕಲರ್ ಆಂಬಿಯೆಂಟ್ ಲೈಟಿಂಗ್ ಹಾಗೂ ಡುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ನೂತನ ಟೇರಾನ್ ಆರ್-ಲೈನ್' ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 9-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಚಾಲನಾ ಅನುಭವ (Driving Impressions):
ಇದು ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಎಲ್ಲ ವಿಧದ ರಸ್ತೆಗಳಲ್ಲಿಯೂ ಸುಲಭವಾಗಿ ಓಡಿಸಲು ಸಾಧ್ಯವಾಗಲಿದೆ. ಸ್ಟೀರಿಂಗ್ ವೀಲ್ ಸಹ ಉತ್ತಮವಾಗಿದೆ. ರಸ್ತೆಯ ಮೇಲೆ ಗಟ್ಟಿಯಾದ ಹಿಡಿತ ಒದಗಿಸಲು ನೆರವಾಗಲಿದೆ. ಈ ಕಾರಿನಲ್ಲಿರುವ ಸಸ್ಪೆನ್ಷನ್ ಸೆಟಪ್ ಬಾಡಿ ರೋಲ್‌ನ್ನು ನಿಯಂತ್ರಿಸಬಲ್ಲದು. ವಿಶೇಷವಾಗಿ ತಿರುವುಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಸುಲಲಿತವಾಗಿ ಕೆಲಸ ಮಾಡಬಲ್ಲವು.
ಹೊಸ 'ಪೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್'ನ ಲೆವೆಲ್-2 ಎಡಿಎಎಸ್ ವೈಶಿಷ್ಟ್ಯವು ಭರ್ಜರಿಯಾಗಿದೆ. ಜೊತೆಗಿದು 224 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 7.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಹಾಗೆಯೇ ಕ್ಯಾಬಿನ್‌ನಲ್ಲಿರುವ ಮೃದುವಾದ ಸೀಟ್‌ಗಳು ಪ್ರಯಾಣಿಕರಿಗೆ ಸರಿಯಾಗಿ ಹೊಂದಿಕೆಯಾಗಬಲ್ಲವು.

ಒಟ್ಟಾರೆ ಅಭಿಪ್ರಾಯ (Overall Opinion):
ಈ ಕಾರು ಆದಷ್ಟು ಬೇಗ ಮಾರಾಟಕ್ಕೆ ಬರಲಿದೆ. ದೊಡ್ಡದಾದ ಫ್ಯಾಮಿಲಿ ಎಸ್‌ಯುವಿ ಹುಡುಕುತ್ತಿರುವವರಿಗೆ ಬೆಸ್ಟ್ ಚಾಯ್ಸ್ ಆಗಲಿದೆ. ಅದಕ್ಕೆ ತಕ್ಕಂತೆ ಹೆಚ್ಚು ಅತ್ಯಾಕರ್ಷಕವಾಗಿದೆ. ನೂತನ 'ಟೇರಾನ್ ಆರ್-ಲೈನ್'ಗೆ ಟೊಯೊಟಾ ಫಾರ್ಚುನರ್ ಮಾತ್ರವಲ್ಲದೆ, ಜೀಪ್ ಮೆರಿಡಿಯನ್ ಹಾಗೂ ಬಿಎಂಡಬ್ಲ್ಯು ಎಕ್ಸ್1 ಮಾಡೆಲ್‌ಗಳು ಸಹ ನೇರವಾದ ಎದುರಾಳಿಯಾಗಿವೆ.


Click it and Unblock the Notifications








