ಹೀಗುಂಟು ನನ್ನ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ನಂಟು

ಈ ಕಾರು ಲಾಂಚ್ ಆದದ್ದು ಕಳೆದ ವರ್ಷ ಜೂನ್ ತಿಂಗಳಲ್ಲಿ. ಇದು 1598 ಸಿಸಿಯ ಡೀಸೆಲ್ ಸಲೂನ್ ಕಾರು. ಆನ್ ರೋಡ್ ದರ 10.6 ಲಕ್ಷ ರುಪಾಯಿ. ಲೀಟರಿಗೆ 15 ಕಿ.ಮೀ. ಆಸುಪಾಸಿನಲ್ಲಿ ಮೈಲೇಜ್ ನೀಡುತ್ತಿದೆ.
ನಿತ್ಯ ಮನೆ ಮತ್ತು ಕಚೇರಿಗೆ ನನ್ನ ಸವಾರಿಗೆ ವೆಂಟೊ ಜೊತೆಯಾಗುತ್ತದೆ. ಕರೆಕ್ಟಾಗಿ ಹೇಳ್ಬೆಕಾದ್ರೆ ವೆಂಟೊ ಪ್ರತಿಲೀಟರ್ ಡೀಸೆಲಿಗೆ 15.5 ಕಿ.ಮೀ. ಮೈಲೇಜ್ ನೀಡುತ್ತೆ. ಬೆಂಗ್ಳೂರಿಗೆ ಇಷ್ಟು ಮೈಲೇಜ್ ಸಾಕು ಅಲ್ವ. ಈ ಕಾರಿನ ಸಸ್ಪೆನ್ಷನ್ ಕೂಡ ಸೂಪರ್ ಆಗಿದೆ.
ಒಂದು ಸರ್ವಿಸ್ ಮಾಡಿದ ನಂತರ ಈ ಕಾರು ಹೆಚ್ಚು ಆಯಿಲ್ ಕುಡಿಯುತ್ತೆ ಅನ್ನೋದು ಸ್ವಅನುಭವ. ಇಂಟಿರಿಯರ್ ನನ್ನ ಫ್ಯಾಮಿಲಿ ಪ್ರಯಾಣಕ್ಕೆ ಹೆಚ್ಚು ಕಂಫರ್ಟ್ ನೀಡಿದೆ. ನೋಡಲು ಲುಕ್ ಸ್ಟೈಲಾಗಿದೆ. ನಂಗೆ ನನ್ನ ವೆಂಟೊ ಕಾರು ಇಷ್ಟ.
ಇದು ನನ್ನ ಎರಡನೇಯ ಕಾರು. ಮೊದಲು ಮಾರುತಿ 800 ಇತ್ತು. ಅದನ್ನು ಮಾರಾಟ ಮಾಡಿಲ್ಲ. ನನ್ನ ತಮ್ಮ ಯೂಸ್ ಮಾಡ್ತಾ ಇದ್ದಾನೆ. ವೆಂಟೊ ಕಾರಿಗೆ ಬ್ಯಾಂಕ್ ಸಾಲ ಮಾಡಿದೆ. ಎಚ್ ಡಿಎಫ್ ಸಿನವರು ಶೇಕಡ 80ರಷ್ಟು ಸಾಲ ನೀಡಿದ್ರು. ಈಗ ತಿಂಗ್ಳಿಗೆ ನಾಲ್ಕು ಸಾವಿರ ರುಪಾಯಿ ಕಂತು ಕಟ್ತಾ ಇದ್ದೀನಿ. ಈ ಕಾರು ಸದ್ಯಕ್ಕೆ ಮಾರೋ ಪ್ಲಾನ್ ಇಲ್ಲ. ಇನ್ನು ಖರೀದಿಸಿದ್ರೆ ಲಕ್ಷುರಿ ಕಾರು ಖರೀದಿಸ್ತಿನಿ. ಅದಕ್ಕೆ ಸಮಯ ಯಾವಾಗ ಬರುತ್ತೋ ಗೊತ್ತಿಲ್ಲ ಸಾರ್.
ನಿಮ್ಮ ಕಾರು/ಬೈಕ್ ಕಥೆಯನ್ನು ಕನ್ನಡ ಡ್ರೈವ್ ಸ್ಪಾರ್ಕಿಗೆ ಕಳುಹಿಸಿಕೊಡಬಹುದು. ನಿಮ್ಮ ಮತ್ತು ಕಾರು/ಬೈಕಿನ ಚಿತ್ರ ಜೊತೆಗಿದ್ದರೆ ಚೆನ್ನ.
ನಮ್ಮ ವಿಳಾಸ: [email protected]


Click it and Unblock the Notifications








