ಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ

ಟೊಯೋಟಾ ಕಂಪನಿ ಕೂಡ ಇದಕ್ಕೆ ಹೊರತಲ್ಲ. 2010ರೊಳಗೆ ಸಣ್ಣ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಕಾರು ಸೇಡನ್ ಅಥವಾ ಹಿಂದೆ ಸರಕು ಇಡಲು ಸಾಕಷ್ಟು ಸ್ಥಳವಿರುವ ಪುಟಾಣಿ ಕಾರಿನ ಮಾದರಿಯದಾಗಿರುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್, ಎರಡೂ ವಿಧದ ಇಂಜಿನ್ನಿನಲ್ಲಿ ಬರಲಿದೆ.
ಇಲ್ಲಿಯವರೆಗೆ ಕಿರ್ಲೋಸ್ಕರ್ ಜೊತೆಗಿನ ಸಹಭಾಗಿತ್ವದಲ್ಲಿ ಎಲ್ಲ ವಿಧದ ಕಾರುಗಳನ್ನು ಟೊಯೋಟಾ ತಯಾರಿಸಿದೆ. ಅದು ಇತ್ತೀಚೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಅಲ್ಟಿಸ್ ಕಾರನ್ನು ಬಿಡುಗಡೆ ಮಾಡಿತು. ಆದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಣ್ಣ ಕಾರಿನ ಹೊರತಾಗಿ ಬೇರೆ ಯಾವ ಯೋಜನೆಯನ್ನೂ ಟೊಯೋಟಾ ಹಾಕಿಕೊಂಡಿಲ್ಲ.
ಕಳೆದ ವರ್ಷ ಜಪಾನ್ ನಲ್ಲಿ ಬಿಡುಗಡೆಯಾದ ಇನ್ನೊವೆಟೀವ್ ಐಕ್ಯೂ ಮಾದರಿಯಲ್ಲೇ ಈ ಸಣ್ಣ ಕಾರು ಮೂಡಿ ಬರಲಿದೆ. ಸಣ್ಣ ಕಾರಾದರೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಹೇಳಿದೆ. ಇದೇ ವರ್ಷ ರಸ್ತೆಗೆ ಬರಲಿರುವ ಟಾಟಾ ನ್ಯಾನೋಗೆ ಪೈಪೋಟಿ ನೀಡುವ ದೃಷ್ಟಿಯಿಂದಲೇ ಟೊಯೋಟಾ ಸಣ್ಣ ಕಾರನ್ನು ತರಲಿದೆ.
ಈ ಸಣ್ಣ ಕಾರು ತಯಾರಿಕಾ ಘಟಕ 63 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಮ್ಮ ಬೆಂಗಳೂರಿನಲ್ಲಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬುದು ವಿಶೇಷ.


Click it and Unblock the Notifications








