ಹಣದ ಮುಗ್ಗಟ್ಟಿನಲ್ಲಿ ಬರಲಿದೆ ಕೋಟಿ ಬಾಳುವ ಕಾರು

ಬಡವರು ಕನಸಿನಲ್ಲಿಯೂ ನೆನೆಸಿಕೊಳ್ಳಲಾಗದ ಸ್ಪೋರ್ಟ್ಸ್ ಮಾಡೆಲ್ ನಲ್ಲಿರುವ ಈ ಕಾರನ್ನು ಹೊಸ ಪೀಳಿಗೆಯ ಕೋಟ್ಯಾಧಿಪತಿಗಳಿಗಾಗಿಯೇ ತಯಾರಿಸಲಾಗಿದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಬಡವರು ಶ್ರೀಮಂತರೆನ್ನದೆ ಭಾರತದಲ್ಲಿ ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಈ ಕಾರು ಬಂದಿರುವುದು ಸರಿಯೆ ಎಂಬುದು ಪ್ರಶ್ನೆ. ಮುಗ್ಗಟ್ಟನ್ನು ಗಮನದಲ್ಲಿಟ್ಟಿರುವ ಕಾರು ತಯಾರಕ ಕಂಪನಿ ಖರೀದಿದಾರರಿಗೆ ಕಂತಿನ ರೀತಿಯಲ್ಲಿ ಹಣ ಸಂದಾಯ ಮಾಡುವ ಸ್ವಾತಂತ್ರ್ಯ ನೀಡಿದೆ.
ಕಳೆದ ವರ್ಷ ಐಷಾರಾಮಿ ಕಾರುಗಳಿಗೆ ಭಾರತದಲ್ಲಿ ಶುಕ್ರದೆಸೆ ಕೂಡಿಬಂದಿಲ್ಲ. ವೈಭವೋಪೇತ ಕಾರುಗಳಲ್ಲಿ ಕೇವಲ 14 ಕಾರುಗಳ ಮಾತ್ರ ಬಿಕರಿಯಾಗಿವೆ. ಆದರೆ, ಈ ವರ್ಷ ಆರಂಭದಲ್ಲೇ ಮೂರು ಕಾರುಗಳನ್ನು ಖರೀದಿಸಲಾಗಿದೆ ಮತ್ತು 3 ಕಾರುಗಳನ್ನು ಬುಕ್ ಮಾಡಲಾಗಿದೆ. ರೋಲ್ಸ್ ರಾಯ್ಸ್ ಕಾರಿನ ಕಂಪನಿ ಬಿಡಿಭಾಗಗಳಿಗೆ ನೂರು ವರುಷಗಳ ವಾರಂಟಿ ನೀಡಿದೆ.
ಎಲ್ಲ ಬಗೆಯ ರೋಲ್ಸ್ ರಾಯ್ಸ್ ಕಾರುಗಳ ವಿತರಣೆಯ ಹಕ್ಕನ್ನು ನವೀನ್ ಮೋಟರ್ಸ್ ಹೊಂದಿದೆ. ಫ್ಯಾಂಟಮ್ ಕಾರಿಗಿಂತ ರೋಲ್ಸ್ ರಾಯ್ಸ್-4 ಕಾರು ಕೋಟಿ ರು. ಕಡಿಮೆ ದರ ಹೊಂದಿದ್ದರೂ ಅದರ ಮಾರಾಟದಿಂದ ಶೇ.50ರಷ್ಟು ಅಭಿವೃದ್ಧಿ ಹೊಂದುವ ಗುರಿ ಹೊಂದಿದೆ.


Click it and Unblock the Notifications








