ಜನಸಾಮಾನ್ಯರ ಬೀಟಲ್, ಪೊಲೊ ಕಾರುಗಳು

ಇದಲ್ಲದೆ ಭಾರತದಲ್ಲಿ ಸುಮಾರು 3600 ಕೋಟಿ ರು. ಬಂಡವಾಳ ಹೂಡುವುದು ನಿಶ್ಚಿತ. ಬೀಟಲ್ ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ವೋಲ್ಸ್ ವಾಗನ್ ಸಂಸ್ಥೆ ಭಾರತದ ಯೋಜನಾ ಮುಖ್ಯಸ್ಥ ಲುಡ್ವಿಗ್ ಗ್ರೀಗೆನ್ ಹೇಳುತ್ತಾರೆ.
ಪುಣೆಯಲ್ಲಿನ ಕಾರು ತಯಾರಿಕ ಘಟಕದ ಮೇಲೆ 3600 ಕೋಟಿ ರು. ಬಂಡವಾಳ ಹೂಡಿರುವ ವೋಲ್ಸ್ ವಾಗನ್ ಸಂಸ್ಥೆ, ಅಲ್ಲಿ ತನ್ನ ಇನ್ನೊಂದು ಜನಪ್ರಿಯ ಮಾದರಿ 'ಪೊಲೊ' ಕಾರುಗಳ ತಯಾರಿ ಕಾರ್ಯವನ್ನು ಮುಂದಿನ ವರ್ಷ ಜನವರಿಯಿಂದ ಪ್ರಾರಂಭಿಸಲಿದೆ. ಮುಂದಿನ ಮಾರ್ಚ್ ವೇಳೆಗೆ ಪೊಲೊ ಕಾರುಗಳು ಕೂಡ ರಸೆಗಿಳಿಯುವ ಸಾಧ್ಯತೆಗಳಿವೆ ಎಂದು ಸಂಸ್ಥೆ ಹೇಳಿದೆ. ಆದರೆ ಬೀಟಲ್ ತಯಾರಿಕೆ ಸದ್ಯಕ್ಕೆ ಇಲ್ಲಂತೂ ಆಗುವುದಿಲ್ಲ. ಸಂಪೂರ್ಣವಾಗಿ ತಯಾರಿಸಲ್ಪಟ್ಟ ಭಾಗಗಳನ್ನು ತಂದು ಇಲ್ಲಿ ಜೋಡಿಸಲಾಗುವುದು ಎಂದು ಸುದ್ದಿ ಬಂದಿದೆ.
ಜನಾನುರಾಗಿ ಸಂಸ್ಥೆ ಎಂದೇ ಹೆಸರಾದ ವೋಲ್ಸ್ ವಾಗನ್, ಬೀಟಲ್ ಎಂಬ ಜನಸಾಮಾನ್ಯರ ಕಾರು(ಮೂಲ ಜರ್ಮನ್ : ಫೋಕ್ಸ್ ವಾಗನ್) ಮಾರುಕಟ್ಟೆ ತಂದು ಹೆಸರುವಾಸಿ ಆಗಿದ್ದು ಸರ್ವವಿದಿತ. ಪೊಲೊ ಕಾರುಗಳ ಜನಪ್ರಿಯತೆಯನ್ನು ಭಾರತದಲ್ಲಿ ಹರಡಲು ಸಿದ್ದರಾಗಿರುವ ಗಿರ್ಕೇನ್, ಪೊಲೊ ಕಾರಿನ ಬೆಲೆಯ ಬಗ್ಗೆ ಯಾವುದೇ ವಿವರ ನೀಡದೆ, ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುತ್ತದೆ ಎಂದಷ್ಟೇ ಹೇಳಿದ್ದಾರೆ.
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ.10ರಷ್ಟು ಸ್ವಾಮ್ಯವನ್ನು ಹೊಂದುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ. ಎಲ್ಲವೂ ಪೊಲೊ ಸಣ್ಣ ಕಾರಿನ ಮೇಲೆ ನಿಂತಿದೆ. 1.2 ಮತ್ತು 1.4 ಲೀ ಟಿಡಿಐ ಮೋಟರ್ ಇಂಜಿನ್ ಉಳ್ಳ ಪೊಲೊ ಕಾರುಗಳು ಪೆಟ್ರೋಲ್ ಹಾಗೂ ಡಿಸೇಲ್ ಇಂಜಿನ್ ಗಳೆರಡು ಮಾದರಿಯಲ್ಲೂ ಲಭ್ಯವಿರುತ್ತದೆ. 26 ಕಿ.ಮೀ/ಲೀ ನೀಡಬಲ್ಲ ಪೊಲೊ ಕಾರು ಸ್ಕೋಡಾ ಫಾಬಿಯಾ ಕಾರಿನಂತೆ ಹಲವು ವಿಶೇಷಣಗಳನ್ನು ತನ್ನಲ್ಲಿ ಹೊಂದಿರುತ್ತದೆ ಎನ್ನಲಾಗಿದೆ. 2010ರ ವೇಳೆಗೆ ಭಾರತದ ಮಾರುಕಟ್ಟೆಗೆ ಬರಲಿರುವ ಪೊಲೊ ಕಾರಿನ ಬೆಲೆ ಸುಮಾರು 5.5 ಲಕ್ಷ ರು. ಇರುವ ಸಾಧ್ಯತೆಯಿದೆ. ಇನ್ನೊಂದು ಅಚ್ಚರಿಯ ಉತ್ಪನ್ನದ ಬಗ್ಗೆ ವೊಲ್ಸ್ ವಾಗನ್ ಸದ್ಯದಲ್ಲೇ ಪ್ರಕಟನೆ ನೀಡುವ ಸುದ್ದಿ ಬಂದಿದೆ. ಅದು ವಿಶ್ವದ ಅತ್ಯಂತ ಮಿತವ್ಯಯಿ ಕಾರಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಯಾವುದಕ್ಕೂ ಕಾದು ನೋಡಬೇಕು.


Click it and Unblock the Notifications








