ಟಾಟಾ ನ್ಯಾನೋ ಗುಣಮಟ್ಟ ಕುರಿತು ಆಡಿ ಅಪಸ್ವರ

By Super

Tough ride ahead of Tata Nano Europa
ಬಿಡುಗಡೆಯಾಗಿ ರಸ್ತೆಯ ಮೇಲಿನ ತಡೆಗಳನ್ನು ದಾಟುವ ಮೊದಲೇ ಟಾಟಾ ಕಂಪನಿಯ ಕನಸಿನ ಕೂಸು ನ್ಯಾನೋ ಇತರ ಸ್ಪರ್ಧಿಗಳಿಂದಲೂ ಅಡೆತಡೆಗಳನ್ನು ಎದುರಿಸುತ್ತಿದೆ. ನ್ಯಾನೋ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿಲ್ಲ ಎಂದು ಹೀಗಳಿಯುವ ಕಂಪನಿಗಳ ಪಟ್ಟಿಗೆ ಆಡಿ ಕೂಡ ಹೊಸದಾಗಿ ಸೇರಿಕೊಂಡಿದೆ.

ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ರಕ್ಷಣೆ ಮತ್ತು ವಾಯುಮಾಲಿನ್ಯ ಪರೀಕ್ಷೆಗಳನ್ನು ಟಾಟಾ ನ್ಯಾನೋ ಪಾಸುಮಾಡುವ ಸಾಮರ್ಥ್ಯದ ಕುರಿತು ಆಡಿ ಕಾರು ತಯಾರಿಕಾ ಕಂಪನಿ ಅವಸ್ವರ ಎತ್ತಿದೆ. ಇತ್ತೀಚೆಗೆ ನಡೆದ ಜಿನೀವಾ ಆಟೋ ಪ್ರದರ್ಶನದಲ್ಲಿ ಟಾಟಾ ಕಂಪನಿ ನ್ಯಾನೋ ಯುರೋಪಾವನ್ನು ಪ್ರದರ್ಶಿಸಿತು. ಅಲ್ಲಿ ಯುರೋಪಾ ಆಕರ್ಷಣೆಯ ಕೇಂದ್ರವಾಗಿತ್ತು. ಯುರೋಪಾ ಉತ್ತಮ ನಿರ್ವಹಣೆ ನೀಡಲಿದೆ ಹಾಗು ವಾಯುಮಾಲಿನ್ಯ ಪರೀಕ್ಷೆಯಲ್ಲಿಯೂ ಪಾಸಾಗಲಿದೆ ಎಂದು ಟಾಟಾ ಕಂಪನಿ ಹೇಳಿಕೆ ನೀಡಿತ್ತು.

ಆದರೆ, ಯುರೋಪ್ ನಲ್ಲಿ ಅದರಲ್ಲೂ ಜರ್ಮನಿಯಲ್ಲಿ ನ್ಯಾನೋ ಯುರೋಪಾ ವ್ಯಾಪಾರ ಕುದುರಿಸಿಕೊಳ್ಳುವ ಬಗ್ಗೆ ಆಡಿ ಬಹಿರಂಗವಾಗಿಯೇ ಶಂಕೆಯನ್ನು ವ್ಯಕ್ತಪಡಿಸುತ್ತಿದೆ. ಯುರೋಪ್ ನ ಮಾರುಕಟ್ಟೆಯ ನಿರೀಕ್ಷೆಯಂತೆ ಯುರೋಪಾ ರಕ್ಷಣೆಯ ಅನುಕೂಲತೆ, ವಾಯುಮಾಲಿನ್ಯ ಗುಣಮಟ್ಟ ಮತ್ತು ಇಂಧನ ಸಾಮರ್ಧ್ಯ ಹೊಂದಿಲ್ಲ ಎಂಬುದು ಆಡಿಯ ಅಭಿಪ್ರಾಯ.

ಟಾಟಾ ನ್ಯಾನೋ ಇದೇ ತಿಂಗಳ ಮಾರ್ಚ್ 23ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಲಿದೆ. 2011ರಲ್ಲಿ ಯೂರೋ 5ರ ಗುಣಮಟ್ಟದಂತೆ ಯುರೋಪಿನಲ್ಲಿಯೂ ಬಿಡುಗಡೆಯಾಗುತ್ತಲಿದೆ.

More from DriveSpark

Article Published On: Friday, March 13, 2009, 18:36 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+