ನಿಸ್ಸಾನ್ ಮೈಕ್ರಾ ಮಾರಾಟ ತಂತ್ರಕ್ಕೆ ಶರಣು

Nissan Micra Pre-Launch Selling Begins in India
ಬೆಂಗಳೂರು,ಮೇ.13: ಭಾರತದ ಸಣ್ಣ ಕಾರು ಮಾರುಕಟ್ಟೆ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಪ್ರಾಬಲ್ಯ ಮುರಿಯಲು ಪಣ ತೊಟ್ಟ ನಿಸ್ಸಾನ್ ಕಾರುಗಳು ಕೊಂಚ ತಡವಾಗಿ ಪ್ರವೇಶ ಪಡೆಯಲಿವೆ. ಏಪ್ರಿಲ್ 2010ರ ವೇಳೆಗೆ ನಿಸ್ಸಾನ್ ಮೈಕ್ರಾ ಕಾರು ರಸ್ತೆಗಿಳಿಯಬೇಕಾಗಿತ್ತು.

ಆದರೆ, ಕೊಂಚ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಜುಲೈನಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ. ಮಾರಾಟ ತಂತ್ರವನ್ನು ಅರಿದು ಕುಡಿದಿರುವ ನಿಸ್ಸಾನ್ , ಅಧಿಕೃತ ಪ್ರವೇಶಕ್ಕೂ ಮುನ್ನ ಹೊಸ ಕಾರುಗಳ ಮುನ್ನೋಟ, ಗ್ರಾಹಕರಿಗೆ ಅದರ ಬಗ್ಗೆ ಮಾಹಿತಿ, ಬುಕ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ.

ಮಾರುತಿ ಸಣ್ಣ ಕಾರುಗಳಿಗೆ ಹೋಲಿಸಿದರೆ ಮೈಕ್ರಾ ಕಾರು ಬೆಲೆ ಕೊಂಚ ಅಧಿಕ ಎನ್ನಬಹುದು. ಕನಿಷ್ಠ 4ರಿಂದ 5 ಲಕ್ಷದವರೆಗೂ ಮುಖಬೆಲೆ ಹೊಂದಿರುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲು ಕಾರು ಮಾರುಕಟ್ಟೆಗೆ ಬರಲಿದೆ. ನಿಸ್ಸಾನ್ ಮೈಕ್ರಾ ಕಾರು ಜಿನೀವಾ ಮೋಟಾರ್ ಶೋದಲ್ಲಿ ಈಗಾಗಲೇ ಪ್ರದರ್ಶನಗೊಂಡಿದೆ.

ಶಾಪಿಂಗ್ ಮಾಲ್ , ಹೋಟೆಲ್ , ಮಲ್ಟಿಪೆಕ್ಸ್ ಮುಂತಾದ ಜನನಿಬಿಡ ಸ್ಥಳಗಳನ್ನು ಆಯ್ದುಕೊಂಡು ಅಲ್ಲೆಲ್ಲಾ ನಿಸ್ಸಾನ್ ಪೆವಿಲಿಯನ್ ತೆರೆದು ತನ್ನ ಹೊಸ ಉತ್ಪನ್ನಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾರಂಭಿಸಿದೆ. ಎಲ್ ಸಿಡಿ ಸ್ಕ್ರೀನ್ ಗಳು, ಕಿಯಾಸ್ಕ್ ಗಳು ಮೈಕ್ರಾ ಕಾರಿನ ಗುಣವಿಶೇಷಗಳನ್ನು ಸಾರುತ್ತಿವೆ.

ಹೊಸ ಕಾರಿನಲ್ಲಿ ಜನ ಏನೆಲ್ಲಾ ಬಯಸುತ್ತಾರೆ ಎಂಬ ಜನಾಭಿಪ್ರಾಯ ಸಂಗ್ರಹದಲ್ಲೂ ನಿಸ್ಸಾನ್ ತೊಡಗಿದೆ. ಸದ್ಯಕ್ಕೆ ಬೆಂಗಳೂರು ಹಾಗೂ ಪುಣೆಯಲ್ಲಿ ಪ್ರೀ ಲಾಂಚ್ ಕಾರ್ಯಕ್ರಮವನ್ನು ಶುರು ಮಾಡಿರುವ ನಿಸ್ಸಾನ್ ಭಾರತದ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಲಿದೆ. ಇದಲ್ಲದೆ, ನಿಸ್ಸಾನ್ ಮೈಕ್ರಾ ಕುರಿತ ಮೈಕ್ರೋ ವೆಬ್ ಸೈಟ್ ಸಹ ಆರಂಭಿಸಿ ಅಲ್ಲಿ ಎಲ್ಲ ವಿವರಗಳನ್ನು ನೀಡಲಾಗಿದೆ ಎಂದು ನಿಸ್ಸಾನ್ ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಕಿಮಿನೊಬೊ ಟೊಕುಯಾಮ ಹೇಳುತ್ತಾರೆ.

More from DriveSpark

Article Published On: Thursday, May 13, 2010, 12:55 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+