ಹೋಂಡಾ ಸಣ್ಣ ಕಾರು, ದೊಡ್ಡ ನಿರೀಕ್ಷೆ

ಭಾರತದಲ್ಲಿ ಸಣ್ಣಕಾರು ಎಂದರೆ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ನಿರೀಕ್ಷೆಸಿದಂತೆ. ಒಂದು ವೇಳೆ ಗುಣಮಟ್ಟದಲ್ಲಿ ರಾಜಿ ಆದರೂ, ಬೆಲೆ ಮಾತ್ರ 4 ಲಕ್ಷವನ್ನು ಮೀರುವಂತಿಲ್ಲ. ಇದು ಮಧ್ಯಮ ವರ್ಗದ ಜನರ ಮನಸ್ಥಿತಿ. ಇದನ್ನರಿತ ಹೋಂಡಾ, ತನ್ನ ಭಾರಿ ಬೆಲೆಯ ವಾಹನಗಳತ್ತ ಕೊಂಚ ಗಮನ ಕಮ್ಮಿಮಾಡಿ, ಸಣ್ಣಕಾರು ತಯಾರಿಕೆಗೆ ಮುಂದಾಗಿದೆ.
ಹೋಂಡಾ ಸಿಯಲ್ ಕಾರು ಇಂಡಿಯಾ (HSCI) ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರ ಹಾಗೂ ಚೆವರ್ಲೆ ನಂತರದ ಸ್ಥಾನದಲ್ಲಿದೆ. ಜಪಾನಿನಿಂದ ಹೋಂಡಾ ಸಿಆರ್ ವಿ (ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರ ಮೆಚ್ಚಿನ ವಾಹನ) ಆಮದು ಮಾಡಿಕೊಂಡು ಮಾರಾಟ ಮಾಡಿದಷ್ಟು ಸುಲಭವಾಗಿ ಸಣ್ಣಕಾರುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂಬ ಸತ್ಯ ಹೋಂಡಾ ಅರಿತಿದೆ.


Click it and Unblock the Notifications








