ಬಿಡದಿಯಲ್ಲಿ ಟೊಯೋಟಾ ಸಣ್ಣಕಾರು ಎಟಿಯೋಸ್

ಟೊಯೋಟಾ ಬಿಡದಿ ಬಳಿ ಈಗಾಗಲೇ ಒಂದು ಉತ್ಪಾದನಾ ಘಟಕ ಹೊಂದಿದೆ. ಸುಮಾರು 1400ಕೋಟಿ ರು.ಗಳನ್ನು ತನ್ನ ಎರಡನೇ ಘಟಕಕ್ಕೆ ಹೂಡುತ್ತಿದ್ದು, ಸಂಪೂರ್ಣವಾಗಿ ಸಣ್ಣಕಾರು ತಯಾರಿಕೆಗೆ ಬಳಸಲಾಗುವುದು.
ವಾರ್ಷಿಕವಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರುಗಳನ್ನು ತಯಾರಿಸಲಾಗುವುದು. ಎಟಿಯೋಸ್ 1.2 ಹಾಗೂ 1.5 ಲೀ ಇಂಜಿನ್ ಸಾಮರ್ಥ್ಯ ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ.
ಮೊದಲ ವರ್ಷದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಇಟಿಯೋಸ್ ಸಣ್ಣಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ" ಎಂದು ಟಯೋಟಾ ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಕಗವಾ ಹೇಳಿದರು.
ದೆಹಲಿಯ ಆಟೋ ಎಕ್ಸ್ ಪೋ 2010 ರಲ್ಲಿ ಸಣ್ಣಕಾರು ಏಟಿಯೋಸ್ ಅಲ್ಲದೆ ಟಯೋಟಾ ಪ್ರಾಡೊ(ಡೀಸೆಲ್). ಟಯೋಟಾ ಕರೋಲಾ ಆಲ್ಟೀಸ್ ಸಿಎನ್ ಜಿ, ಟಯೊಟಾ ಇನ್ನೋವಾ ಸಿಎನ್ ಜಿ, ಟಯೋಟಾ ಪ್ರೈಯಸ್ ಗಳನ್ನು ಪ್ರದರ್ಶಿಸಲಾಗಿತ್ತು.


Click it and Unblock the Notifications








