ಷೋರೂಂನಿಂದ ನ್ಯಾನೋ ನೇರ ನಿಮ್ಮ ಮನೆಗೆ

ಮುಗಂಡ ಬುಕ್ಕಿಂಗ್ ಮಾಡಿ, ಕಾದು ಕಾದು ಸುಸ್ತಾಗಿ ಮುಖ ಬಾಡಿಸಿಕೊಂಡ ಗ್ರಾಹಕರ ಮುಖದಲ್ಲಿ ನಗು ಮೂಡಿಸಲು ನಿರ್ಧರಿಸಿರುವ ಟಾಟಾ, ಷೋರೂಮ್ ನಿಂದ ನೇರವಾಗಿ ನ್ಯಾನೋ ಕಾರು ಖರೀದಿಸುವ ಅವಕಾಶ ಕಲ್ಪಿಸಿದೆ.
ಈ ಸೌಲಭ್ಯ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರಲಿದ್ದು, ಗ್ರಾಹಕರು ಷೋರೂಂನಿಂದ ನೇರ ಮನೆಗೆ ಕಾರು ಒಯ್ಯಬಹುದು ಎಂದು ಟಾಟಾ ಮೋಟರ್ಸ್ ನ ಹಿರಿಯ ವ್ಯವಸ್ಥಾಪಕ ಮನೋಜ್ ಅರೋರಾ ಬುಧವಾರ ಹೇಳಿದರು.
ಸನಂದ್ ನ 1100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ನ್ಯಾನೋ ಉತ್ಪಾದನಾ ಘಟಕಕ್ಕೆ ಟಾಟಾ ಸುಮಾರು 2000 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದೇವೆ. ವಾರ್ಷಿಕವಾಗಿ 2.5 ಲಕ್ಷ ನ್ಯಾನೋ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ.
2009 ರಿಂದ ಸುಮಾರು 35 ಸಾವಿರ ನ್ಯಾನೋ ಕಾರುಗಳನ್ನು ಭಾರತದ ರಸ್ತೆಗಿಳಿಸಿದ್ದೇವೆ. ಅಡ್ವಾಸ್ ಬುಕ್ಕಿಂಗ್ ನಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗಿದೆ ಎಂದು ಮನೋಜ್ ತಿಳಿಸಿದರು.


Click it and Unblock the Notifications