ಈ ಬೈಸಿಕಲ್ ಗೆ 25 ವರ್ಷ ಗ್ಯಾರಂಟಿ !

ಸೈಕಲ್ ಬಿಡುಗಡೆ ಮಾಡಿದ ಲೂಧಿಯಾನದ ಹೈ ಬರ್ಡ್ ಸೈಕಲ್ ತಯಾರಿಕಾ ಕಂಪೆನಿಯ ಅಧ್ಯಕ್ಷ ಆರ್ ಡಿ ಶರ್ಮ ಅವರು ಬುಲ್ ಪವರ್ ಸೈಕಲ್ ಬೆಲೆ 4,000 ರುಪಾಯಿಗಳಾಗಲಿದೆ ಎಂದು ಹೇಳಿದರು. ದೇಶದಲ್ಲೆ ಮೊದಲ ಬಾರಿಗೆ 25 ವರ್ಷಗಳ ಗ್ಯಾರಂಟಿ ನೀಡಲಾಗುತ್ತಿದೆ ಎಂದ ಅವರು ಸೈಕಲ್ ನ ಫ್ರೇಮ್ ಮತ್ತು ಫೋರ್ಕ್ ನಲ್ಲಿ 25 ವರ್ಷಗಳ ವರೆಗೆ ಏನಾದರೂ ದೋಷವಿದ್ದಲ್ಲಿ ಉಚಿತವಾಗಿ ಬದಲಾಯಿಸಿಕೊಡುವುದಾಗಿ ಹೇಳಿದರು.
ಸಾಮಾನ್ಯ ಸೈಕಲ್ ಬೆಲೆ 2,500 ರಿಂದ 3,000 ರುಪಾಯಿಗಳ ವರೆಗೆ ಇದ್ದು 6 ತಿಂಗಳಿನಿಂದ ವರ್ಷದ ವರೆಗೆ ಗ್ಯಾರಂಟಿ ಹೊಂದಿರುತ್ತದೆ. ಈ ಸೈಕಲ್ ನ್ನು ಅಭಿವೃದ್ದಿ ಪಡಿಸಲು ಕಳೆದ ಎರಡು ವರ್ಷಗಳಲ್ಲಿ 5 ಲಕ್ಷ ರುಪಾಯಿ ವ್ಯಯ ಮಾಡಲಾಗಿದೆ ಎಂದ ಅವರು ಸೈಕಲ್ ನ ಫ್ರೇಮ್ ನ್ನು ಉತ್ತಮ ದರ್ಜೆಯ ಲೋಹದಿಂದ ತಯಾರಿಸಲಾಗಿದೆ ಎಂದರು.


Click it and Unblock the Notifications








