ಜೂನ್ ನಲ್ಲಿ ಬೈಕ್ ಮಾರಾಟ ಶೇ.30 ಏರಿಕೆ

ಮೋಟಾರ್ ಸೈಕಲ್ ಗಳ ಮಾರಾಟದಲ್ಲಿ ಶೇ 29.98 ಏರಿಕೆ ದಾಖಲಾಗಿದ್ದು ಜೂನ್ ನಲ್ಲಿ ಒಟ್ಟು 7,15,985 ವಾಹನಗಳು ಮಾರಾಟವಾಗಿದ್ದರೆ ಕಳೆದ ವರ್ಷದ ಜೂನ್ ನಲ್ಲಿ 5,50,830ವಾಹನಗಳು ಮಾರಾಟವಾಗಿವೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.31.99 ಏರಿಕೆ ದಾಖಲಾಗಿದ್ದು ಜೂನ್ ನಲ್ಲಿ 9,33,101 ವಾಹನಗಳು ಮಾರಾಟವಾಗಿದ್ದರೆ ಕಳೆದ ವರ್ಷದ ಜೂನ್ ನಲ್ಲಿ 7,06,934 ವಾಹನಗಳು ಮಾರಾಟವಾಗಿದ್ದವು.
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ44.14ಏರಿಕೆ ದಾಖಲಾಗಿದ್ದು ಜೂನ್ ನಲ್ಲಿ 52,211 ವಾಹನಗಳು ಮಾರಾಟವಾಗಿದ್ದರೆ 2009ರ ಜೂನ್ ನಲ್ಲಿ 36,222 ವಾಹನಗಳು ಮಾರಾಟವಾಗಿದ್ದವು.
ಎಲ್ಲಾ ವರ್ಗದ ವಾಹನಗಳ ಮಾರಾಟದಲ್ಲಿ ಶೇ 31.42 ರಷ್ಟು ಏರಿಕೆ ದಾಖಲಾಗಿದ್ದು , ಒಟ್ಟು 12,05,990ವಾಹನಗಳು ಮಾರಾಟವಾಗಿದ್ದು ಕಳೆದ ವರ್ಷದ ಜೂನ್ ನಲ್ಲಿ 9,17,645 ವಾಹನಗಳು ಮಾರಾಟವಾಗಿದ್ದವು


Click it and Unblock the Notifications








