ಹೋಂಡಾದಿಂದ ಸಂಪೂರ್ಣ ವಿದ್ಯುತ್ ಚಾಲಿತ ಕಾರು

Honda Motorto launch plug-in hybrid and battery electric car
ಟೋಕಿಯೊ, ಜು.21: ಜಪಾನ್ ನ ಎರಡನೇ ಅತೀ ದೊಡ್ಡ ಕಾರು ತಯಾರಕ ಹೋಂಡಾ ಮೋಟಾರ್ ಕಂಪೆನಿ 2012 ಕ್ಕೆ ಪ್ಲಗ್ ಇನ್ ಹೈಬ್ರಿಡ್ ಹಾಗೂ ಬ್ಯಾಟರಿ ವಿದ್ಯುತ್ ಚಾಲತ ಕಾರನ್ನು ಬಿಡುಗಡೆ ಮಾಡುವುದಾಗಿ ಮಂಗಳವಾರ ತಿಳಿಸಿದೆ .

ಕಂಪೆನಿಯ ಪ್ರತಿಸ್ಪರ್ಧಿಗಳು ಹೆಚ್ಚು ಇಂಧನ ಮಿತವ್ಯಯದ ಪರಿಸರ ಸ್ನೇಹಿ ಕಾರುಗಳನ್ನು ತಯಾರಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕಂಪೆನಿಯೂ ಇದೇ ಮಾದರಿಯ ಕಾರುಗಳ ತಯಾರಿಕೆಗೆ ಮುಂದಾಗಿದೆ.

ಹೋಂಡಾ ಗ್ಯಾಸೋಲಿನ್ ವಿದ್ಯುತ್ ಕಾರುಗಳನ್ನು ಕಳೆದ ದಶಕದಿಂದ ತಯಾರಿಸುತ್ತಿರುವ ವಿಶ್ವದ ಏಕೈಕ ಕಂಪೆನಿಯಾಗಿದ್ದು ಸಂಪೂರ್ಣ ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಗೆ ಮುಂದಾಗಿದೆ.

ತನ್ನ ದೊಡ್ಡ ಕಾರುಗಳಿಗೆ ಸ್ವಚ್ಛ ಡೀಸೆಲ್ ಎಂಜಿನ್ ಅಳವಡಿಕೆಯ ಪ್ರಸ್ತಾಪವನ್ನು 2008 ರಲ್ಲಿ ಕೈ ಬಿಟ್ಟ ಹೋಂಡಾ ಈಗ ಶಕ್ತಿಶಾಲಿ ಹೈಬ್ರಿಡ್ ವ್ಯವಸ್ಥೆಯ ಕಾರುಗಳ ತಯಾರಿಕೆಗೆ ಮುಂದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಮುಖ್ಯ ಅಧಿಕಾರಿ ಟಕನೋಬು ಅವರು ಪ್ಲಗ್ ಇನ್ ಹೈಬ್ರಿಡ್ ಕಾರುಗಳನ್ನು 2012 ರಲ್ಲಿ ಜಪಾನ್ ಮತ್ತು ಅಮೇರಿಕಾದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು. ಕಂಪೆನಿ 2012 ರಲ್ಲಿ ಯೂರೋಪ್ ನಲ್ಲಿ ಸಣ್ಣ ಡೀಸೆಲ್ ಕಾರುಗಳನ್ನು ತಯಾರಿಸಲಿದೆ ಎಂದು ಅವರು ಹೇಳಿದರು.

ಜಾಗತಿಕ ಪ್ರತಿಸ್ಪರ್ಧಿಗಳಾದ ವೋಲ್ಸ್ ವ್ಯಾಗನ್ ಏಜಿ ಮತ್ತು ಹ್ಯುಂಡೈ ಮೋಟಾರ್ ಕಂಪೆನಿಗಳು ಹೆಚ್ಚು ಇಂಧನ ಮಿತವ್ಯಯದ ಬಲಿಷ್ಠ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಿದ್ದು ಇವು ಹೋಂಡಾದ ಮೈಲ್ಡ್ ಗಿಂತ ಹೆಚ್ಚು ಇಂಧನ ಮಿತವ್ಯಯಿ ಕಾರುಗಳಾಗಿವೆ.

ಹೋಂಡಾ ವಾರ್ಷಿಕ 5 ಲಕ್ಷ ಮೋಟಾರ್ ಸೈಕಲ್ ಗಳ ತಯಾರಿಕೆಯ ಘಟಕವನ್ನು ಇಂಡೋನೇಷ್ಯಾದಲ್ಲಿ 2011ರಲ್ಲಿ ಸ್ಥಾಪಿಸಲಿರುವದಾಗಿಯೂ ಪ್ರಕಟಿಸಿದೆ. ಕಂಪೆನಿ ಚೀನಾದಲ್ಲಿ ಜನಪ್ರಿಯವಾಗುತ್ತಿರುವ ವಿದ್ಯುತ್ ಚಾಲಿತ ಬೈಸಿಕಲ್ ಗಳಿಗೆ ಪ್ರತಿಸ್ಪರ್ಧಿಯಾಗಿ ಉತ್ಪಾದನೆಯೊಂದನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಿದೆ.

More from DriveSpark

Article Published On: Wednesday, July 21, 2010, 11:27 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+