ಬೆಂಜ್ ಈ ಕ್ಲಾಸ್ ಐಷಾರಾಮಿ ಕಾರು ಬಿಡುಗಡೆ

Mercedes Benz launches new E-Class at Rs. 64.5 lakh
ನವದೆಹಲಿ, ಆ.17: ಜರ್ಮನಿಯ ಕಾರು ತಯಾರಕ ಕಂಪೆನಿ ಮರ್ಸಿಡಿಸ್ ಬೆಂಜ್ ಮಂಗಳವಾರ ತನ್ನ ಹೊಸ ಮಾದರಿಯ ಈ ಕ್ಲಾಸ್ ಸೇಡಾನ್ ಕಾರನ್ನು ಬಿಡುಗಡೆ ಮಾಡಿದೆ.

ಕಂಪೆನಿ ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲು ಈ ಕಾರನ್ನು ಬಿಡುಗಡೆ ಮಾಡಿದ್ದು ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 64.5ಲಕ್ಷ ರುಪಾಯಿಗಳಾಗಿವೆ. ಇದರಿಂದ ಕಂಪೆನಿ ಈ ಕ್ಲಾಸ್ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗುತ್ತಿರುವ 7ನೇ ಕಾರು ಇದಾಗಿದೆ.

ಕಂಪೆನಿ ಈವರೆಗೆ ದೇಶದಲ್ಲಿ ಬಿಡುಗಡೆ ಮಾಡಿರುವ ಈ ಕ್ಲಾಸ್ ಶ್ರೇಣಿಯ ಕಾರುಗಳ ಬೆಲೆ ರೂ 42 ಲಕ್ಷ ರುಪಾಯಿಗಳಿಂದ 50 ಲಕ್ಷ ರೂಪಾಯಿಗಳ ವರೆಗೆ ಇದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೋಬೈಲ್ ಮ್ಯಾನುಫ್ಯಾಕ್ಚರರ್ಸ್ ಅಂಕಿ ಅಂಶಗಳ ಪ್ರಕಾರ ಬೆಂಜ್ ತನ್ನ ಪ್ರತಿಸ್ಪರ್ಧಿ ಬಿಎಮ್ ಡಬ್ಲ್ಯೂವನ್ನು ಕಾರುಗಳ ಮಾರಾಟದಲ್ಲಿ ಈ ವರ್ಷ ಹಿಂದಿಕ್ಕಿದೆ.

ಕಳೆದ ಜನವರಿ- ಜುಲೈ ಅವಧಿಯಲ್ಲಿ ಬೆಂಜ್ ಕಾರುಗಳ ಮಾರಾಟದಲ್ಲಿ ಶೇ 79.31ರಷ್ಟು ಏರಿಕೆ ದಾಖಲಾಗಿದ್ದು, ಕಂಪೆನಿ 2921ಕಾರುಗಳನ್ನು ಮಾರಾಟ ಮಾಡಿದ್ದರೆ ಹಿಂದಿನ ವರ್ಷ ದ ಇದೇ ಅವಧಿಯಲ್ಲಿ 1,629 ಕಾರುಗಳನ್ನು ಮಾರಾಟ ಮಾಡಿತ್ತು. ಈ ಏಳು ತಿಂಗಳ ಅವಧಿಯಲ್ಲಿ ಬಿಎಮ್ ಡಬ್ಲ್ಯೂ ಕಳೆದ ವರ್ಷ 2,718 ಕಾರುಗಳನ್ನು ಮಾರಾಟ ಮಾಡಿತ್ತು.

More from DriveSpark

Article Published On: Tuesday, August 17, 2010, 15:45 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+