ಟೊಯೋಟಾ SUV ವಾರ್ಷಿಕೋತ್ಸವ ಸಂಭ್ರಮ

ಫಾರ್ಚೂನರ್ ನ ಮುಂದೆ ಹಾಗೂ ಹಿಂದೆ ಕಡೆ ಬಂಪರ್ , ಹಿಂಬದಿ ರೂಪ್ ಬಣ್ಣ ಹಾಗೂ ವಿನ್ಯಾಸ ಕೊಂಚ ಬದಲಿಸಲಾಗಿದೆ. ಸದ್ಯ ವಾರ್ಷಿಕೋತ್ಸವದ ಅಂಗವಾಗಿ 250 ಲಿಮಿಟೆಡ್ ಎಡಿಷನ್ ವಾಹನಗಳು ಮಾತ್ರ ಲಭ್ಯವಿದೆ.
ದೆಹಲಿಯ ಎಕ್ಸ್ ಷೋರೂಂನ ಬೆಲೆಯಂತೆ ಟೊಯೋಟಾ ಫಾರ್ಚೂನರ್ ಬೆಲೆ 20,45,000 ರು. ಬುಕ್ ಆದ ಮೇಲೆ ಸಾಮಾನ್ಯವಾಗಿ ಆರು ತಿಂಗಳ ಕಾಲ ವಿತರಣೆ ಅವಧಿ ತೆಗೆದುಕೊಂಡರು. ಫಾರ್ಚೂನರ್ ಜನಪ್ರಿಯತೆ ಕಮ್ಮಿಯಾಗಿಲ್ಲ. 2009 ಆ.24 ರಂದು ಮೊದಲ ಫಾರ್ಚೂನರ್ ವಾಹನ ರಸ್ತೆಗಳಿದ ನಂತರ ಸುಮಾರು 10 ಸಾವಿರ ವಾಹನಗಳು ಭಾರತದಾದ್ಯಂತ ಸಂಚರಿಸತೊಡಗಿವೆ.
ಈಗಾಗಲೇ 6 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಗಳು ಆಗಿವೆ. ಮೊದಲಿಗೆ ಜನವರಿ 31,2010ಕ್ಕೂ ಮೊದಲು ಬುಕ್ಕಿಂಗ್ ಆಗಿ ಬಾಕಿ ಉಳಿದಿರುವ ವಾಹನಗಳನ್ನು ವಿತರಿಸಿ ನಂತರ ಹೊಸದನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಟೊಯೋಟಾ ಕಿರ್ಲೋಸ್ಕರ್ ಹೇಳಿದೆ. SUV ಮಾದರಿ ವಾಹನಗಳ ಉತ್ಪಾದನಾ ಸಾಮರ್ಥ್ಯ ಕೂಡಾ ಹೆಚ್ಚಾಗಿದ್ದು, ಸರಾಸರಿ ಪ್ರತಿ ತಿಂಗಳಿಗೆ 1000ಕ್ಕೂ ಅಧಿಕ ವಾಹನಗಳನ್ನು ಹೊರಬಿಡಲಾಗುತ್ತಿದೆ.


Click it and Unblock the Notifications








