SUV ಮಾರುಕಟ್ಟೆಯಲ್ಲಿ ಮೆರೆಯುವುದೇ ಹ್ಯುಂಡೈ

Hyundai santa fe launched
ಭಾರತದ ಕಾರು ಮಾರುಕಟ್ಟೆಯಲ್ಲಿ ದ್ವಿತೀಯ ಸ್ಥಾನವನ್ನು ಕಾಯ್ದುಕೊಂಡಿರುವ ಹ್ಯುಂಡೈ ಮೋಟರ್ಸ್ ಸಂಸ್ಥೆ, ಈಗ ಅಗ್ಗದ ದರದಲ್ಲಿ ಕ್ರೀಡಾ ಉಪಯುಕ್ತ ವಾಹನವನ್ನು ಪರಿಚಯಿಸುತ್ತಿದೆ. ಸುಮಾರು 20.95 ರಿಂದ 22.95 ಲಕ್ಷ ಮುಖಬೆಲೆಯ SUV ಗಳ ಬುಕ್ಕಿಂಗ್ ಮುಂದಿನ ವಾರದಿಂದ ಆರಂಭವಾಗಲಿದೆ. ಈ ವರ್ಷದ ಕೊನೆಯೊಳಗೆ 150 ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕ ಅರವಿಂದ್ ಸಕ್ಸೇನಾ ಹೇಳುತ್ತಾರೆ.

ಸದ್ಯಕ್ಕೆ ಕ್ಷಿಣ ಕೊರಿಯಾದ ಕೇಂದ್ರ ಘಟಕದಲ್ಲಿ ಈ ಸಾಂಟಾ ಫೆ ಕ್ರೀಡಾ ಉಪಯುಕ್ತ ವಾಹನದ ವಿನ್ಯಾಸ ಹಾಗೂ ಉತ್ಪಾದನೆಯಾಗಲಿದೆ. ಸ್ಥಳೀಯವಾಗಿ ಉತ್ಪಾದನೆ ಆರಂಭಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಸಕ್ಸೇನಾ ಹೇಳಿದರು.

ಸಾಂಟಾ ಫೆ 2.2 ಲೀ. CRDi ಇಂಜಿನ್ ಸಾಮರ್ಥ್ಯ ಹೊಂದಿದ್ದು, 6 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಜೊತೆಗೆ 2 ವ್ಹೀಲ್ ಹಾಗೂ 4 ವ್ಹೀಲ್ ಡ್ರೈವ್ ನ ಆಯ್ಕೆಯನ್ನು ನೀಡಲಾಗಿದೆ. ಪ್ರತಿ ಲೀಟರ್ ಗೆ 14.66 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಸಂಸ್ಥೆ ಹೇಳಿದೆ.

ದಕ್ಷಿಣ ಕೊರಿಯಾದ ಹ್ಯುಂಡೈ ಹೊರತರುತ್ತಿರುವ ಏಳನೇ ಉತ್ಪನ್ನವಾಗಿ ಸಾಂಟಾ ಫೆ ಭಾರತದ ರಸ್ತೆಗಿಳಿಯಲಿದೆ. SUV ಕ್ಷೇತ್ರದಲ್ಲಿ ಉತ್ತಮ ಪ್ರತಿಸ್ಪರ್ಧಿನೀಡಲು ಸಜ್ಜಾಗಿರುವ ಸಾಂಟಾ ಫೆ ಫ್ಯಾಂಟಂ ಬ್ಲಾಕ್, ಸ್ಲೀಕ್ ಸಿಲ್ವರ್, ಸ್ಟೀಲ್ ಬ್ಲೂ ಹಾಗೂ ವೆನಿಲ್ಲಾ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಉದ್ದದಲ್ಲಿ ಹೋಂಡಾ ಸಿಆರ್ ವಿಗಿಂತ ಕಮ್ಮಿಯಿದ್ದು, ಎತ್ತರದಲ್ಲಿ ಟೋಯೋಟಾ ಫಾರ್ಚ್ಯೂನರ್ ಗಿಂತ ಗಿಡ್ಡವಿರುವ ಸಾಂಟಾ ಫೆ ಭವಿಷ್ಯವನ್ನು ಭಾರತದ ಗ್ರಾಹಕರು ನಿರ್ಧರಿಸಲಿದ್ದಾರೆ. ಹ್ಯುಂಡೈ ಈಗಾಗಲೇ ಟೆರ್ರಾಕಾನ್ ಹಾಗೂ ಟಕ್ಸನ್ ಮಾರಾಟ ಹೆಚ್ಚಿಸುವಲ್ಲಿ ವಿಫಲವಾಗಿದೆ. ಆದರೆ, ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಕನಿಷ್ಠ 7,000ಸಾವಿರ ಐ10 ಮಾರಾಟ ಕಾಣುತ್ತಿದೆ.

More from DriveSpark

Article Published On: Monday, October 18, 2010, 15:24 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+