ಡಿಸೆಂಬರ್ ನಲ್ಲಿ ಟೊಯೋಟಾ ಸಣ್ಣಕಾರು ಬುಕ್ಕಿಂಗ್

ಇನ್ನೋವಾ, ಫಾರ್ಚ್ಯೂನರ್ ಮೂಲಕ MUV ಹಾಗೂ SUV ಮಾರುಕಟ್ಟೆಯಲ್ಲಿ ಉತ್ತಮ ನೆಲೆಯನ್ನು ಟೊಯೋಟಾ ಕಂಡುಕೊಂಡಿದೆ. ಕಿರ್ಲೋಸ್ಕರ್ ಸಹಯೋಗದೊಂದಿಗೆ 65 ಸಾವಿರ ಸೆಡಾನ್ ಮಾದರಿ ಎಟಿಯೋಸ್ ಸಣ್ಣಕಾರುಗಳನ್ನು ನಿರ್ಮಿಸಿ, ಬುಕ್ಕಿಂಗ್ ಆರಂಭಿಸಲು ಉತ್ತುಕವಾಗಿದೆ.
ಬಿಡದಿ ಬಳಿಯ ವಿಸ್ತರಣಾ ಘಟಕದ ಮೇಲೆ ಸುಮಾರು 3,200 ಕೋಟಿ ಬಂಡವಾಳ ಹೂಡಿ, ಸಣ್ಣಕಾರು ತಯಾರಿಕೆಯಲ್ಲಿ ಟೊಯೋಟಾ ತೊಡಗಿದೆ. ವಾರ್ಷಿಕವಾಗಿ ಸುಮಾರು 70 ಸಾವಿರ ವಾಹನಗಳನ್ನು ರಸ್ತೆಗಿಳಿಸಲು ಸಿದ್ಧತೆ ನದೆಸಿದೆ. ವರ್ಷಕ್ಕೆ 1.5 ದಿಂದ 2 ಲಕ್ಷ ವಾಹನಗಳನ್ನು ತಯಾರಿಸುವುದು ನಮ್ಮ ಗುರಿ. ಇದರಲ್ಲಿ ಸುಮಾರು 65 ಸಾವಿರ ವಾಹನಗಳು ಎಟಿಯೋಸ್ ಆಗಲಿವೆ ಎಂದು ಟೊಯೋಟಾ ಸಂಸ್ಥೆ ಪ್ರಕಟಿಸಿದೆ.
ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಅವರನ್ನು ಎಟಿಯೋಸ್ ಕಾರಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವ ಟೊಯೋಟಾ, ಇನ್ನೂ ಹೊಸ ಕಾರಿನ ಬೆಲೆ ನಿರ್ಧರಿಸಿಲ್ಲ. ಶೀಘ್ರದಲ್ಲೇ ಸಣ್ಣಕಾರಿನ ಬೆಲೆ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಕಗವಾ ಹೇಳಿದರು.


Click it and Unblock the Notifications








