ಎಕೊ ಕಾರು ಯೋಜನೆ ಕೈಬಿಟ್ಟ ಟಾಟಾ ಮೋಟರ್ಸ್

ಯೋಜನೆಯಿಂದ ಹಿಂದೆ ಸರಿದಿರುವದಕ್ಕೆ ಕಂಪೆನಿ ನಿರ್ದಿಷ್ಟ ಕಾರಣ ನೀಡಿಲ್ಲವಾದರೂ ಅನುಕೂಲಕರವಲ್ಲದ ಅಬ್ಕಾರಿ ತೆರಿಗೆ ಮತ್ತು ಭಾರೀ ಬಂಡವಾಳ ಹೂಡಿಕೆ ಕಾರಣದಿಂದ ಕಂಪೆನಿ ಎಕೋ ಕಾರ್ ತಯಾರಿಕಾ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.
ಸರ್ಕಾರ ಅಭಿವೃದ್ದಿಯ ಕಾರಣದಿಂದ ಎಕೋ ಕಾರ್ ಗಳಿಗೆ ಶೇ.17 ಅಬ್ಕಾರಿ ತೆರಿಗೆ ವಿಧಿಸುವುದಾಗಿ ಪ್ರಕಟಿಸಿದ್ದು ನಂತರ ಅದನ್ನು ಶೇ.22 ಕ್ಕೇರಿಸಿತ್ತು. ಈಥೆನಾಲ್ ಇ 85 ಇಂಧನ ಬಳಸಿ ಓಡುವ ಹಾಗೂ ಇತರ ಹೈಬ್ರಿಡ್ ಕಾರುಗಳಿಗೆ ಕಡಿಮೆ ಬಂಡವಾಳ ಸಾಕಾಗುತ್ತದೆ ಮತ್ತು ಉತ್ಪಾದನೆಗೆ ನಿರ್ದಿಷ್ಟ ಗುರಿ ಇಲ್ಲ ಆದರೆ ಎಕೋ ಕಾರ್ ತಯಾರಕರು ಹೆಚ್ಚಿನ ಬಂಡವಾಳ ಹೂಡಬೇಕಲ್ಲದೆ ವಾರ್ಷಿಕ ಒಂದು ಲಕ್ಷ ಕಾರ್ ಗಳನ್ನು ತಯಾರಿಸಬೇಕಿದೆ.
ಅಲ್ಲದೆ ಎಕೋ ಕಾರ್ ತಯಾರಿಕಾ ಯೋಜನೆಯನ್ನು ಕಳೆದ ಮಾರ್ಚ್ ೩೧ ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದು ಅದನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಲು ಟಾಟಾ ವಿಫಲವಾಗಿತ್ತು. ಜಪಾನ್ ನ ಮೂರನೆ ಅತೀ ದೊಡ್ಡ ಕಾರ್ ತಯಾರಿಕಾ ಕಂಪೆನಿ ನಿಸ್ಸಾನ್ ಮೊದಲು ಎಕೋ ಕಾರ್ ನ್ನು ಅಭಿವೃದ್ದಿ ಪಡಿಸಿದ್ದು, ಕಳೆದ ತಿಂಗಳು ಬಿಡುಗಡೆ ಮಾಡಿದೆ.
ಕಂಪೆನಿ ಮುಂದಿನ ತಿಂಗಳು ಈ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಎಕೋ ಕಾರ್ ಗಳ ತಯಾರಿಕೆ ನಿಗದಿತ ಗುರಿ ತಲುಪಿದರೆ ತೆರಿಗೆ ವಿನಾಯ್ತಿ ಸಿಗುತ್ತದೆ. ಟಾಟಾ ದ ಪ್ರಯಾಣಿಕರ ಕಾರುಗಳು ಈಗಾಗಲೇ ಥೈಲ್ಯಾಂಡಿನಲ್ಲಿ ಮಾರಾಟವಾಗುತ್ತಿದ್ದು ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಕಾರು ನ್ಯಾನೋ ವನ್ನು ಥೈಲ್ಯಾಂಡಿನಲ್ಲಿ ಬಿಡುಗಡೆ ಮಾಡಲಿದೆ.


Click it and Unblock the Notifications








