ಮರ್ಸಿಡಿಸ್ಸಿಗೆ ಮುನ್ನಡೆ ಬಿಟ್ಟುಕೊಡದ ಬಿಎಂಡಬ್ಲ್ಯು

ಕಳೆದೆರಡು ವರ್ಷಗಳಿಂದ ಬಿಎಂಡಬ್ಲ್ಯು ಇಂಡಿಯಾದ ಐಷಾರಾಮಿ ಕಾರುಗಳ ವಿಭಾಗದಲ್ಲಿ ಅತ್ಯಧಿಕ ಮಾರಾಟ ಕಾಣುತ್ತಿದ್ದು ಈ ವಿಭಾಗದಲ್ಲಿ ಕಂಪನಿಯ ಒಟ್ಟಾರೆ ಪಾಲು ಶೇಕಡಾ 40ಕ್ಕಿಂತಲೂ ಹೆಚ್ಚಾಗಿದೆ.
"ಭವಿಷ್ಯದ ಕುರಿತು ಕಂಪನಿ ಎಚ್ಚರಿಕೆಯಿಂದ ರೂಪಿಸಿದ ಕಾರ್ಯತಂತ್ರಗಳು ಮಾರಾಟ ಹೆಚ್ಚಳಕ್ಕೆ ನೆರವಾಗಿದೆ' ಕಂಪನಿಯ ವಕ್ತಾರರು ಹೇಳಿಕೊಂಡಿದ್ದಾರೆ.
ಐಷಾರಾಮಿ ಕಾರುಗಳ ವಿಭಾಗದಲ್ಲಿ ಬಿಎಂಡಬ್ಲ್ಯು3 ಸೀರಿಸ್ ಕಾರು ಮಾರಾಟ 2,432 ಯೂನಿಟ್ ಗೆ ತಲುಪಿದ್ದು, ಶೇಕಡ 51ರಷ್ಟು ಏರಿಕೆ ಕಂಡಿದೆ. ಬಿಎಂಡಬ್ಲ್ಯು 7 ಸೀರಿಸ್ ಮಾರಾಟ 545 ಯೂನಿಟ್ ಅಂದರೆ ಶೇಕಡಾ 53ರಷ್ಟು ಏರಿಕೆ ದಾಖಲಿಸಿದೆ. ಉಳಿದಂತೆ ಬಿಎಂಡಬ್ಲ್ಯು 6ಸೀರಿಸ್ 12 ಯೂನಿಟ್, 187 ಎಕ್ಸ್ 1 ಕಾರ್, ಬಿಎಂಡಬ್ಲ್ಯು ಎಕ್ಸ್3 28 ಯೂನಿಟ್ ಮತ್ತು ಬಿಎಂಡಬ್ಲ್ಯು ಎಕ್ಸ್5ನ 228 ಯೂನಿಟ್ ಮಾರಾಟಗೊಂಡಿವೆ. [ಆಟೋಮೊಬೈಲ್]


Click it and Unblock the Notifications








