ಹೋಂಡಾ ಸಿವಿಕ್ ಕಾರಿಗೆ ಹೊಸ ಅವತಾರ

Honda Civic car
ಹೋಂಡಾ ಸಿವಿಕ್ ಈಗ ಹೊಸ ಸನ್ ರೂಫ್ ಆವೃತ್ತಿಯಲ್ಲಿ ಅನಾವರಣಗೊಂಡಿದೆ. ಕಂಪನಿಯ ಸೆಡಾನ್ ಆವೃತ್ತಿಗಳಲ್ಲಿ ಹಳೆಯ ಸಿವಿಕ್ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ಮಾರಾಟವಾಗುವ ಆವೃತ್ತಿಯಾಗಿದೆ. ಅದರ ಆಕರ್ಷಕ ವಿನ್ಯಾಸ, ಸ್ಟೈಲ್ ಎಲ್ಲರಿಗೂ ಇಷ್ಟ. ಹೋಂಡಾ ಸಿಯೆಲ್ ಕಾರ್ ಸಿವಿಕ್ ನ್ನು ಹಲವು ವರ್ಷಗಳಿಂದ ಅಪ್ ಗ್ರೇಡ್ ಮಾಡುತ್ತಲೇ ಇದೆ. ಈಗ ಮಾರುಕಟ್ಟೆಗೆ ಬಂದಿರುವ ಸಿವಿಕ್ ಗಾಳಿ, ಬೆಳಕು ಇತ್ಯಾದಿಗಳು ಒಳಗೆ ಪ್ರವೇಶಿಸದಂತೆ ನೀಟಾಗಿ ಸನ್ ರೂಫ್ ವಿನ್ಯಾಸ ಹೊಂದಿದೆ.

ಗ್ರಾಹಕರ ಬೇಡಿಕೆಯಿಂದಾಗಿ ನೂತನ ಸನ್ ರೂಫ್ ಕಾರನ್ನು ತಂದಿರುವುದಾಗಿ ಹೋಂಡಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೊಸ ಸನ್ ರೂಫ್ ಸಿವಿಕ್ ಆರಾಮದಾಯಕ ಸವಾರಿಗೆ ಸೂಕ್ತವಾಗಿದ್ದು ಇಂಟಿರಿಯರ್ ಹೊಸ ಅನುಭವ ನೀಡುತ್ತದೆ. ಹೊಸ ಸನ್ ರೂಫ್ ಕಾರನ್ನು ಗ್ರಾಹಕರು ಆಟೋಮ್ಯಾಟಿಕ್ ಅಥವಾ ಮ್ಯಾನುಯಲ್ ಆವೃತ್ತಿಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಮ್ಯಾನುಯಲ್ ಟ್ರಾನ್ಷ್ ಮಿಷನ್ ನ ಹೊಸ ಸಿವಿಕ್ ದರ(ದೆಹಲಿ ಎಕ್ಸ್ ಷೋರೂಂ) 13.53 ಲಕ್ಷ ರೂಪಾಯಿ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರ್ ದರ 14.27 ಲಕ್ಷ ರೂಪಾಯಿ ಆಗಿದೆ. ನೂತನ ಸಿವಿಕ್ 1.8 ಲೀಟರ್ ನ ಐ-ವಿಟಿಇಸಿ ಎಂಜಿನ್ ಹೊಂದಿದೆ. ಇದರಲ್ಲಿ ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಡಿಸ್ಟ್ರಿಬ್ಯೂಷನ್, ಎರಡು ಏರ್ ಬ್ಯಾಗ್ ಮತ್ತು ಜಿ-ಕಾನ್ ಇತ್ಯಾದಿ ಸೇಫ್ಟಿ ಫೀಚರ್ ಗಳಿವೆ. [ಕಾರು]

More from DriveSpark

Article Published On: Friday, January 21, 2011, 9:58 [IST]
English summary
Now is the season for the car makers to woo the customers with some sort of attractive accessories. Honda has devised the sunroof attachment for its Civic sedan with the addition of new shade in Urban Titanium. The car comes in two versions, manual transmission for Rs13.53 lakhs and automatic transmission for Rs14.27lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+