ಮಾರುತಿ ಸುಜುಕಿ ಲಾಭದಲ್ಲಿ ಇಳಿಕೆ

2010ರ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ವಹಿವಾಟು 565.17 ಕೋಟಿ ರೂ.ಗೆ ತಲುಪಿದ್ದು, ಇದಕ್ಕೂ ಹಿಂದಿನ ವರ್ಷದ ಇದೇ ಅವಧಿಯ 687.53 ಕೋಟಿ ರೂ. ಕೋಟಿ ರೂ.ಗಿಂತ ಸಂಕುಚಿತಗೊಂಡಿದೆ. ಆದರೂ ಇದೇ ಅವಧಿಯ ಮಾರಾಟದ ಪ್ರಮಾಣ 2009ರ 7,333.77 ಕೋಟಿ ರೂ.ಗೆ ಹೋಲಿಸಿದರೆ 9,276.73 ಕೋಟಿ ರೂ.ಗೆ ತಲುಪಿದ್ದು, ಶೇಕಡಾ 26.49ರಷ್ಟು ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಕಂಪನಿಯ ದೇಶೀಯ ಮಾರಾಟ 2,99,527 ಯೂನಿಟ್ ಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಯ 2,18,910 ಯೂನಿಟ್ ಗೆ ಹೋಲಿಸಿದರೆ ಶೇಕಡ 36.83ರಷ್ಟು ಪ್ರಗತಿ ದಾಖಲಿಸಿದೆ. 2010ರ ಅಕ್ಟೋಬರ್ ನಿಂದ ದೇಶದ ಮಾರುಕಟ್ಟೆಯಲ್ಲಿ ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನಾರ್ ಸೇರಿದಂತೆ ಕಾರು ಮಾರಾಟ 1,07,555 ಯೂನಿಟ್ ಗೆ ತಲುಪಿತ್ತು.
ಇದರೊಂದಿಗೆ ಮಾರುತಿಯ ರಫ್ತು ವಹಿವಾಟು 31,160 ಯೂನಿಟ್ ಗೆ ತಲುಪಿದ್ದು, 2009ರ ಮೂರನೇ ತ್ರೈಮಾಸಿಕದ 39,116 ಯೂನಿಟ್ ಗೆ ಹೋಲಿಸಿದರೆ ಶೇಕಡಾ 20.34ರಷ್ಟು ಇಳಿಕೆ ಕಂಡಿದೆ. [ಕಾರು]


Click it and Unblock the Notifications








