ಕಾರಿನಲ್ಲಿ ಬಟ್ಟೆನೂ ಒಗಿಬಹುದು, ಅಡುಗೆನೂ ಮಾಡಬಹುದು

i-MiEV electric car
ಕಾರೆಂದರೆ ಒಂದು ಪುಟ್ಟ ಮನೆ ತರಹ. ಅಲ್ಲಿ ಮೊಬೈಲ್ ಚಾರ್ಜ್ ಮಾಡಬಹುದು, ಪುಟ್ಟ ಪರದೆಯಲ್ಲಿ ಟಿವಿ ನೋಡಬಹುದು. ಇಂಟರ್ ನೆಟ್ ಆಕ್ಸೆಸ್ ಮಾಡಬಹುದು. ನಿದ್ದೆ ಮಾಡಬಹುದು. ಬೇರೆ ಕೆಲಸ ಸಹ ಮಾಡುವರಿದ್ದಾರೆ.

ಆದರೆ ಕಾರಿನೊಳಗಿನ ಕರೆಂಟ್ ಬಳಸಿ ದೋಸೆ ಹೊಯ್ಯಬಹುದೇ? ಅನ್ನ ಮಾಡಬಹುದೇ? ಬಟ್ಟೆ ಒಗಿಬಹುದೇ? ಇಸ್ತ್ರಿ ಮಾಡಬಹುದೇ? ನೀರು ಬಿಸಿ ಮಾಡಿ ಸ್ನಾನ ಮಾಡಬಹುದೇ? ಇತ್ಯಾದಿ ಪ್ರಶ್ನೆಗಳಿಗೆ ವಾಹನ ತಯಾರಿಕಾ ಕಂಪನಿ ಮಿಟ್ಸುಬಿಸಿ "ಯೆಸ್" ಅಂದಿದೆ.

ಐ-ಎಂಐಇವಿ(i-MiEV) ಎಲೆಕ್ಟ್ರಿಕ್ ಕಾರಿಗೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಮಿಟ್ಸುಬಿಸಿ ಪ್ರಕಟಿಸಿದೆ. ವಾಷಿಂಗ್ ಮೆಷಿನ್, ರೈಸ್ ಕುಕ್ಕರ್ ಇತ್ಯಾದಿ ಮನೆಬಳಕೆಯ ಸಾಧನಗಳಿಗೆ ವಿಶೇಷ ಪ್ಲಗ್ ಜೋಡಿಸಲು ಕಂಪನಿ ನಿರ್ಧರಿಸಿದೆ.

ರೈಸ್ ಕುಕ್ಕರ್, ವಾಷಿಂಗ್ ಮೆಷಿನ್ ಮುಂತಾದ ಸಾಧನಗಳಿಗೆ ಅತ್ಯಧಿಕ ಕರೆಂಟ್ ಬೇಕಾಗುತ್ತದೆ. ಅಚ್ಚರಿಯೆಂದರೆ ಕಾರಿನ ಬ್ಯಾಟರಿ ಮೂಲಕವೇ ಇದಕ್ಕೆ ವಿದ್ಯುತ್ ಒದಗಿಸಲಾಗುವುದಂತೆ. ಅಂದ್ರೆ 16 ಕಿ.ವೋಲ್ಟೆಜ್ ಐ-ಎಂಐಇವಿ ಬ್ಯಾಟರಿ ಹೆಚ್ಚು ಶಕ್ತಿಶಾಲಿಯಾಗಿದ್ದು ದೀರ್ಘ ಬಾಳಿಕೆಯನ್ನೂ ಹೊಂದಿದೆ.

ಜಪಾನಿನಲ್ಲಿ ಭೂಕಂಪ ಮತ್ತು ಸುನಾಮಿ ಸಂಭವಿಸಿದ ನಂತರ ಇಂಥ ಆಲೋಚನೆ ಮಿಟ್ಸುಬಿಸಿಗೆ ಹೊಳೆದಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಕುಟುಂಬ ಸಮೇತ ದೂರದೂರಿಗೆ ಪ್ರಯಾಣ ಹೊರಟ ಸಂದರ್ಭದಲ್ಲಿ ಐ-ಎಂಐಇವಿ ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಮುಂದಿನ ಒಂದು ವರ್ಷದೊಳಗೆ ಇಂತಹ ಸಾಧನ ಹೊರ ತರುವುದಾಗಿ ಕಂಪನಿ ಪ್ರಕಟಿಸಿದೆ. ಈಗಾಗಲೇ ಐ-ಎಂಐಇವಿ ಕಾರಿನಲ್ಲಿ ಮೊಬೈಲ್ ಚಾರ್ಜರ್, ಲ್ಯಾಪ್ ಟಾಪ್ ಇತ್ಯಾದಿಗಳನ್ನು ಜಾರ್ಜ್ ಮಾಡಬಹುದಾಗಿದೆ. ಒಂದು ವರ್ಷದೊಳಗೆ ಅದಕ್ಕೆ ವಾಷಿಂಗ್ ಮೆಷಿನ್ ಮತ್ತು ರೈಸ್ ಕುಕ್ಕರ್ ಸಹ ಜೋಡಿಸಬಹುದು. ಯಾವುದಕ್ಕೂ ಕಾದು ನೋಡೋಣ.

More from DriveSpark

Article Published On: Thursday, June 2, 2011, 10:38 [IST]
English summary
Mitsubishi has announced it will market a device that can turn its i-MiEV electric car into a power source for domestic appliances like washing machines and rice cookers, reports The Daily Yomiuri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+