ಮತ್ತೆ ಬರಲಿದೆ ಸೆಡಾನ್ ಕಾರ್ ಪಿಜೊಟ್ ಸಿಟ್ರೊನ್

ಪಿಜೊಟ್ ಪೂರ್ಣ ಪ್ರಮಾಣದ ಸ್ಥಳೀಯ ಉತ್ಪಾದನಾ ಘಟಕ ತೆರೆಯುವ ಯೋಜನೆಯಲ್ಲಿರುವುದರಿಂದ ಕಂಪನಿಯು ಭಾರತಕ್ಕೆ ಪ್ರವೇಶಿಸುವಲ್ಲಿ ಒಂದಿಷ್ಟು ವಿಳಂಬವಾಗುತ್ತಿದೆ. ಕಂಪನಿಯು ಈಗ ಸೂಕ್ತ ಪ್ರದೇಶದ ಅನ್ವೇಷಣೆಯಲಿದ್ದು, ಒಮ್ಮೆ ಈ ಪ್ರಕ್ರಿಯೆ ಕೊನೆಗೊಂಡರೆ ಇಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಹಿವಾಟು ಆರಂಭಿಸುವುದಾಗಿ ಪಿಜೊಟ್ ಸಿಟ್ರೊನ್ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ನೂತನ ಸೆಡಾನ್ ಕಾರ್ ಯಾವಾಗ ಭಾರತ ಪ್ರವೇಶಿಸಲಿದೆ ಎಂದು ಕಂಪನಿ ಸ್ಪಷ್ಟಪಡಿಸಿಲ್ಲ. ಮುಂದಿನ 4 ವರ್ಷಗಳಲ್ಲಿ ಯುರೋಪ್ ಹೊರಗಡೆ ಕಂಪನಿಯು ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ. ಈಗ ಇದರ ಪ್ರಮಾಣ ಶೇಕಡಾ 39ರಷ್ಟಿದೆ.
ಏಷ್ಯಾ ದೇಶಗಳಲ್ಲಿ ಭಾರತದ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಅವಕಾಶವಿರುವುದಾಗಿ ಕಂಪನಿಯ ಏಷ್ಯಾ ವಿಭಾಗದ ಉಪಾಧ್ಯಕ್ಷರು ಹೇಳುತ್ತಾರೆ. ಸದ್ಯ ಕಂಪನಿಯ ಚೀನಾದ ಕಾರ್ಯತಂತ್ರವನ್ನೇ ಭಾರತದಲ್ಲಿ ಉಪಯೋಗಿಸಿಕೊಳ್ಳಲಿದೆ ಎಂದರು. ಪಿಜೊಟ್ ಸಿಟ್ರೊನ್ ಭಾರತಕ್ಕೆ ಅಪರಿಚಿತ ಕಂಪನಿಯಲ್ಲ. 2011ರಲ್ಲಿಯೇ ಭಾರತದ ಪ್ರಿಮಿಯರ್ ಗ್ರೂಪ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡ ಕಂಪನಿಯಾಗಿದೆ.


Click it and Unblock the Notifications








