ಚೀನಾ, ಅಮೆರಿಕಾವನ್ನು ಓವರ್ ಟೆಕ್ ಮಾಡಲಿದೆ ಭಾರತ

ವಿಶ್ವದ ವಾಹನ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಅವಕಾಶಗಳ ಹುಡುಕಾಟದಲ್ಲಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ ವಿಶ್ವದ ನಾಲ್ಕನೇ ಬೃಹತ್ ವಾಹನ ಹಬ್ ಆಗಲಿದೆ ಎಂದು ವರದಿ ಹೇಳಿದೆ. 2030ಕ್ಕೆ ಭಾರತ ಅಮೆರಿಕವನ್ನು ಹಿಂದಿಕ್ಕಲಿದ್ದು ಸುಮಾರು 117 ಕೋಟಿ ಪ್ರಯಾಣಿಕ ಕಾರ್ ಮಾರಾಟ ಮಾಡಲಿದೆ ಎಂದು ಹೇಳಿದೆ.
ಮುಂದಿನ 10 ವರ್ಷಗಳಲ್ಲಿ ದೇಶದ ವಾಹನ ಉದ್ಯಮ ಸುಮಾರು 25-30 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಪಡೆಯಲಿದೆ ಎಂದು ವರದಿ ಅಂದಾಜಿಸಿದೆ. ಇನ್ನೂ 20 ವರ್ಷಗಳಲ್ಲಿ ವಿಶ್ವ ವಾಹನ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಯಲ್ಲಿರಲಿದೆ. ಜಾಗತಿಕ ವಾಹನ ದೈತ್ಯರಾದ ಅಮೆರಿಕ ಮತ್ತು ಚೀನಾಗಳಿಗೆ ಪೈಪೋಟಿ ನೀಡಲಿದೆ ಎಂದು ವರದಿ ಹೇಳಿದೆ.


Click it and Unblock the Notifications








