ನಕಲಿ ಹಾವಳಿಯಿಂದ ಕಂಪನಿಗಳಿಗೆ ಖೋತ

ವಾಹನ ಬಿಡಿಭಾಗಗಳ ಉದ್ಯಮ ಒಟ್ಟು ವಾಹನ ಮಾರುಕಟ್ಟೆಯ ನಿವ್ವಳ ಆದಾಯಕ್ಕೆ ಸುಮಾರು 24,800 ಕೋಟಿ ರೂ. ಕೊಡುಗೆ ನೀಡುತ್ತಿದೆ. ಆದರೆ ಕಾನೂನು ಬಾಹಿರವಾಗಿ ಬೋಗಸ್ ಬಿಡಿಭಾಗಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮಕ್ಕೆ ನಷ್ಟವುಂಟಾಗಿದೆ ಎಂದು ಎಸಿಎಂಎ ತಿಳಿಸಿದೆ. ಕಳೆದ ವರ್ಷ ಸುಮಾರು 8,700 ಕೋಟಿ ರೂ. ಮೌಲ್ಯದ ಬೋಗಸ್ ಬಿಡಿಭಾಗಗಳನ್ನು ಮಾರಾಟ ಮಾಡಲಾಗಿದೆ.
ಇಂತಹ ಬೋಗಸ್ ಬಿಡಿಭಾಗ ಮಾರಾಟಕ್ಕೆ ತಡೆ ನೀಡಲು ಮೋಟರ್ ವೆಹಿಕಲ್ ಕಾಯಿದೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಎಸಿಎಂಎ ಅಧ್ಯಕ್ಷರು ಹೇಳಿದ್ದಾರೆ. ಬೋಗಸ್ ಉತ್ಪನ್ನಗಳನ್ನು ಪತ್ತೆ ಹಚ್ಚಲು ಉತ್ಪನ್ನ ಸುರಕ್ಷತೆ ಕಾನೂನಿಂದ ಮಾತ್ರ ಸಾಧ್ಯವಿದೆ ಎಂದರು.
ದೇಶದ ರಸ್ತೆಯಲ್ಲಿರುವ ವಾಹನಗಳು ಸುಮಾರು 33,000 ಕೋಟಿ ರೂ. ಆದಾಯ ತರುತ್ತವೆ. ಇದರಲ್ಲಿ ಶೇ. 25ರಷ್ಟು ಸರ್ವಿಸ್ ಸೇವೆಗಳಿಂದ ಬರುತ್ತವೆ. ಉಳಿದ ಶೇ. 75ರಷ್ಟು ಆದಾಯ ವಾಹನ ಬಿಡಿಭಾಗಗಳ ಕೊಡುಗೆಯಾಗಿದೆ.


Click it and Unblock the Notifications








