ಹ್ಯುಂಡೈ ಸ್ಯಾಂಟ್ರೊ ಕಮಾಲ್ ಹೀಗಿದೆ ನೋಡಿ

ಹ್ಯುಂಡೈನ ಎತ್ತರದ ಹುಡುಗ ಸ್ಯಾಂಟ್ರೊ ರಸ್ತೆಗಿಳಿದಾಗಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಅದರ ಸ್ಟೈಲ್, ಸುರಕ್ಷತೆ ಮತ್ತು ಆರಾಮದಾಯಕತೆ ಫೀಚರ್ ಗಳಿಂದ ಲೆಕ್ಕವಿಲ್ಲದಷ್ಟು ಗ್ರಾಹಕರ ಮೆಚ್ಚುಗೆ ಪಡೆದಿದೆ. ಮೇಡ್ ಇನ್ ಇಂಡಿಯಾ ಟ್ಯಾಗ್ ನೊಂದಿಗೆ ಸ್ಯಾಂಟ್ರೊ ಸುಮಾರು 80 ದೇಶಗಳಲ್ಲಿ ಮಾರಾಟವಾಗುತ್ತಿದೆ.
"ಈಗ ಸ್ಯಾಂಟ್ರೊ ರಫ್ತು 5 ಲಕ್ಷ ಯೂನಿಟ್ ದಾಟಿದೆ. ತನ್ನ ವಿನ್ಯಾಸ ಮತ್ತಿತ್ತರ ಫೀಚರ್ ಗಳಿಂದ ವಿದೇಶಿ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ. ಕಂಪನಿ ಇನ್ನೂ ಮುಂದೆಯು ಗ್ರಾಹಕರಿಗೆ ಇಷ್ಟವಾಗುವಂತಹ ವಿಶ್ವದರ್ಜೆಯ ಉತ್ಪನ್ನ ಹೊರತರಲಿದೆ" ಎಂದು ಎಚ್ ಎಂಐಎಲ್ ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಕಾಂಪ್ಯಾಕ್ಟ್ ಕಾರ್ ಗಳಿಗೆ ಹ್ಯುಂಡೈ ಪ್ರಮುಖ ಜಾಗತಿಕ ರಫ್ತುದಾರ ಕಂಪನಿಯಾಗಿದೆ. ಎಚ್ ಎಂಐಎಲ್ ಸುಮಾರು 10 ಲಕ್ಷ ಕಾರ್ ರಫ್ತು ಮಾಡಿದ ಭಾರತದ ಮೊದಲ ಕಂಪನಿಯಾಗಿದೆ. ಯುರೋಪ್, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಸೇರಿದಂತೆ ಸುಮಾರು 115 ರಾಷ್ಟ್ರಗಳಿಗೆ ಹ್ಯುಂಡೈ ವಾಹನ ರಫ್ತು ಮಾಡುತ್ತಿದೆ.


Click it and Unblock the Notifications








