ಫಾಬಿಯಾ ಮೇನಿಯಾ, ಇದು ಸ್ಕೋಡಾ ದುನಿಯಾ

1.2 ಲೀಟರ್ ಎಂಜಿನ್ ನ ವೋಕ್ಸ್ ವ್ಯಾಗನ್ ಪೊಲೊ, 1.6 ಲೀಟರ್ ನ ವೋಕ್ಸ್ ವ್ಯಾಗನ್ ವೆಂಟೊಗೆ ಸರಿಸಾಟಿಯಾಗಿ ರಸ್ತೆಗಿಳಿದದ್ದು ಹೊಸ ಫಾಬಿಯಾ. ಒಂದಿಷ್ಟು ಹೆಚ್ಚು ಅಶ್ವಶಕ್ತಿಯಿಂದ ಫಾಬಿಯಾ ಹೊರಬಂದಿದೆ. ನೂತನವಾಗಿ ಫಾಬಿಯಾ ಕುಟುಂಬಕ್ಕೆ ಸೇರಿರುವ "ನ್ಯೂ ಫಾಬಿಯಾ" 3 ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.
ನ್ಯೂ ಫಾಬಿಯಾ 75 ಹಾರ್ಸ್ ಪವರ್ ನ 1.2 ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿ ಮತ್ತು 1.6 ಲೀಟರ್ ನ 105 ಹಾರ್ಸ್ ಪವರ್ ನ ಪೆಟ್ರೋಲ್ ಎಂಜಿನ್ ಆವೃತ್ತಿಗಳಲ್ಲಿ ದೊರಕುತ್ತವೆ. ಕ್ಲಾಸಿಕ್, ಆಂಬಿಯೆಂಟ್ ಮತ್ತು ಎಲಿಜೆನ್ಸ್ ಎಂಬ ಮೂರು ಮಾಡೆಲ್ ಗಳಲ್ಲಿ ಈ ಕಾರ್ ಗಳು ದೊರಕುತ್ತವೆ. ಎಲ್ಲ ಆವೃತ್ತಿಗಳು ಫ್ರಂಟ್ ವೀಲ್ ಡ್ರೈವ್ ನೊಂದಿಗೆ 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಬರೀ ಎಂಜಿನ್ ಮಾತ್ರ ಬದಲಾಗಿದೆಯೇ? ಅಷ್ಟೇಯಾ? ಅಂತ ಯೋಚಿಸಬೇಡಿ. ಕಳೆದ ಕೆಲವು ತಿಂಗಳ ಹಿಂದೆ ರಸ್ತೆಗಿಳಿದ ಹೊಸ ಫಾಬಿಯಾದಲ್ಲಿ ಸಾಕಷ್ಟು ಫೀಚರ್ ಗಳಿವೆ. ಸುರಕ್ಷತೆಗೆ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಎಂಜಿನ್ ಬ್ರೇಕಿಂಗ್ ಕಂಟ್ರೊಲ್, ಅಗಲವಾದ ಟೈರ್ ಗಳು, ಡ್ಯೂಯಲ್ ಏರ್ ಬ್ಯಾಗ್ ಇತ್ಯಾದಿಗಳಿವೆ.
ಹೊಸ ಟೇಲ್ ಲ್ಯಾಂಪ್, ಎರಡು ಟೋನ್ ಡ್ಯಾಷ್ ಬೋರ್ಡ್, ಮ್ಯಾನುಯಲ್ ಏರ್ ಕಂಡಿಷನರ್, ಸಿಡಿ/ಎಂಪಿ3 ಪ್ಲೇಯರ್, 14 ಇಂಚಿನ ಆಲಾಯ್ ವೀಲ್, 3ಡಿ ವಿನ್ಯಾಸದ ಹೆಡ್ ಲ್ಯಾಂಪ್, ಕಾರ್ ನ ಎದುರುಗಡೆ ಆಕರ್ಷಕ ವಿನ್ಯಾಸ, ಬೋಲ್ಡಾಗಿರುವ ಫಾಗ್ ಲ್ಯಾಂಪ್, ಹೀಗೆ ಎಲ್ಲವೂ ಹೊಸತು ಹೊಸತು...
ಸ್ಕೋಡಾ ದೇಶದಲ್ಲಿ ಹೊರತಂದ ಮೊದಲ ಹ್ಯಾಚ್ ಬ್ಯಾಕ್ ಕಾರಾಗಿದೆ. ಇದರಲ್ಲಿ ಹಿಂಬದಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವಿದೆ. ಇದು ಆರಾಮದಾಯಕತೆಯ ಫೀಚರ್ ಹೊಂದಿದ್ದು ಲಕ್ಷುರಿ ಕಾರ್ ನಂತೆ ಭಾಸವಾದರೆ ಅಚ್ಚರಿಯಿಲ್ಲ. ಇದರ ಇಂಟಿರಿಯರ್ ಮತ್ತು ಎಕ್ಸ್ ಟಿರಿಯರ್ ಎರಡೂ ಆಕರ್ಷಕವಾಗಿದೆ. ಸ್ಲೀಕ್ ಬಾಡಿ ಗ್ರಾಫಿಕ್ಸ್ ಮತ್ತು ಗ್ರಿಲ್ ವಿನ್ಯಾಸದಿಂದ ಫಾಬಿಯಾ ಡೈನಾಮಿಕ್ ಮತ್ತು ಸ್ಪೋರ್ಟಿ ಬ್ಯೂಟಿಯಾಗಿ ಕಾಣುತ್ತದೆ. ಬಾನೆಟ್ ನಲ್ಲಿರುವ ಲೊಗೊ ಕಂಪನಿಯ ಬ್ರಾಂಡ್ ಮೌಲ್ಯವನ್ನೂ ಸೂಚಿಸುವುದರೊಂದಿಗೆ ಕಾರ್ ಗೆ ಹೊಸ ಲುಕ್ ನೀಡುತ್ತದೆ.
ಮೈಲೇಜ್ ಮತ್ತು ದರ: ನೂತನ ಫಾಬಿಯಾ ಡೀಸಲ್ ಆವೃತ್ತಿಗಳು ನಗರಗಳಲ್ಲಿ ಪ್ರತಿಲೀಟರ್ ಇಂಧನಕ್ಕೆ 14.1 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 18.5 ಕಿ.ಮೀ. ಮೈಲೇಜ್ ನೀಡುತ್ತವೆ. ಪೆಟ್ರೋಲ್ ಆವೃತ್ತಿಯ ಫಾಬಿಯಾ ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 14.7 ಕಿ.ಮೀ. ಮೈಲೇಜ್ ನೀಡುತ್ತದೆ. ಸ್ಕೂಡಾ ಫಾಬಿಯಾಕ್ಕೆ ಬೆಂಗಳೂರು ಎಕ್ಸ್ ಶೋರೂಂದರ 4,36,725 ರೂ.ನಿಂದ 6,72,805 ರೂ.ವರೆಗಿದೆ.


Click it and Unblock the Notifications







