ಡೀಲರ್ ಮಾತಿನ ಮೋಡಿಗೆ..ಖರೀದಿಸಿದ ನೋಡಿ ಕೆಟ್ಟ ಗಾಡಿ

ಸಾರ್ ನಾನು ಹೊಸದಾಗಿ ಈ ಜಾಬ್ ಗೆ ಸೇರಿದ್ದಿನಿ: ಕೆಲವು ಸೇಲ್ಸ್ ಮ್ಯಾನ್ ನಿಮ್ಮಲ್ಲಿ ಖಂಡಿತಾ ಈ ಮಾತು ಹೇಳುತ್ತಾರೆ. ಸಾರ್ ನಾನು ಈ ಉದ್ಯೋಗಕ್ಕೆ ಹೊಸದಾಗಿ ಸೇರಿದ್ದೀನಿ. ಇದು ಟ್ರೈನಿಂಗ್ ಅವಧಿ. ಈ ಸಂದರ್ಭದಲ್ಲಿ ನಾವು ಇಷ್ಟು ವಾಹನ ಮಾರಾಟ ಮಾಡಿದರೆ ಉದ್ಯೋಗ ಪರ್ಮನೆಂಟ್ ಆಗುತ್ತದೆ ಎಂದೆಲ್ಲ ಹೇಳುತ್ತಾರೆ. ಬ್ಯುಸಿನೆಸ್ ಕಾರ್ಡ್ ಕೇಳಿದಾಗ, ಪ್ರಿಂಟ್ ಕಾರ್ಡ್ ಇಲ್ಲ. ಅಂತ ಕಾಗದದಲ್ಲಿ ಬರೆದುಕೊಡುತ್ತಾನೆ. ಓ ಇವನಿಗೆ ಇನ್ನೂ ಬ್ಯುಸಿನೆಸ್ ಕಾರ್ಡ್ ಕೊಟ್ಟಿಲ್ಲ. ಇವನು ಹೇಳುತ್ತಿರುವುದೆಲ್ಲ ನಿಜ ಆಗಿರಬಹುದು. ಹೀಗಾಗಿ ಇವನನ್ನು ನಂಬಬಹುದು ಅನ್ನೋ ಫೀಲಿಂಗ್ ನಿಮ್ಮಲ್ಲಿ ಉಂಟಾಗುವಂತೆ ನೋಡಿಕೊಳ್ಳುತ್ತಾನೆ.
ನನಗೆ ಅನುಭವಿಗಳು ಬೇಕು: ಮೇಲೆ ತಿಳಿಸಿದಂತಹ ವಂಚಕರಿಂದ ಪಾರಾಗುವುದು ಅತ್ಯಂತ ಮುಖ್ಯ. ಅದೇ ಸೇಲ್ಸ್ ಮ್ಯಾನ್ ನ್ಲಲಿ ನೀವು ಕೇಳಿ. ನನಗೆ ಹೆಚ್ಚು ಅನುಭವಿಗಳು ಬೇಕು. ನಿನಗೆ ಗೊತ್ತಿದ್ದರೆ ತಿಳಿಸು ಅಂತ ಹೇಳಿನೋಡಿ. ಆಗ ಅವನ ಪಾತ್ರ ಬದಲಾಗುತ್ತದೆ. ಅವನು ಚೆನ್ನಾಗಿ ಗೊತ್ತಿರುವವರ ತರಹ ನಟನೆ ಮಾಡುತ್ತಾನೆ. ಮತ್ತೆ ಸ್ವಲ್ಪ ಹೊತ್ತು ನಿಮಗೆ ಟೈಂ ಇದ್ರೆ ಮಾತಾಡಿ. ಸಾಧ್ಯವಾದರೆ "ನಿನ್ನ ಅನುಭವ ನನಗೆ ಸಾಕಾಗೊಲ್ಲ" ಅಂತ ಅವನಿಗೆ ತಿಳಿಸಿ. ಅವನು ನಿಮ್ಮನ್ನು ಪಳಗಿಸಲು ಯತ್ನಿಸುತ್ತಾನೆ ಅಂತ ಗೊತ್ತಾದರೆ ನೀವು ನೇರವಾಗಿ ಸೇಲ್ಸ್ ಮ್ಯಾನೆಜರ್ ನೊಂದಿಗೆ ವ್ಯವಹಾರ ಮಾಡಿ.
ಮಾತಿನ ಮೋಡಿಗೆ ಸಿಕ್ಕಿಬೀಳಬೇಡಿ: ಹೆಚ್ಚಿನ ಡೀಲರ್ ಗಳು ಉತ್ತಮ ಮಾತುಗಾರರಾಗಿರುತ್ತಾರೆ. ಮಾತಿನಲ್ಲಿಯೇ ಮದುವೆ ಮಾಡಿಬಿಡುತ್ತಾರೆ. ಕೆಲವು ಡೀಲರ್ ಗಳು ನೀವು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಯಾವುದೋ ಯಾವುದೋ ಪುರಾಣ ಮಾತನಾಡಿ ದೊಡ್ಡ ಪ್ರಶ್ನೆಯಾಗುತ್ತಾರೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಅವರೇ ಜಾಸ್ತಿ ಮಾತನಾಡುತ್ತಾರೆ ಮತ್ತು ನಿಮಗೆ ಮಾತನಾಡಲು ಎಡೆಯೇ ಕೊಡುವುದಿಲ್ಲ. ನೀವು ಬಸವನಂತೆ ಸುಮ್ಮಗೆ ತಲೆಯಾಡಿಸಬೇಕಷ್ಟೆ.
ನೀವು ಅವರ ಮೋಡಿಗೆ ಬೀಳದೆ ನೀವು ಕೇಳಿದ ಎಲ್ಲ ಪ್ರಶ್ನೆಗೆ ಸರಿಯಾಗಿ ಆತನಿಂದ ಉತ್ತರಿಸುವಂತೆ ನೋಡಿಕೊಳ್ಳಿ. ನಿಮಗೆ ಅಗತ್ಯವಿಲ್ಲದನ್ನು ಆತ ಮಾತನಾಡಿದರೆ ನೇರವಾಗಿ ಹೇಳಿ. ನಾನು ಕೇಳಿದ ಪ್ರಶ್ನೆಗೆ ಉತ್ತರ ಇದಲ್ಲ ಅಂತ.
ಇಂತಹ ಡೀಲರ್ ಗಳು ತುಂಬಾ ಹೊತ್ತು ಮಾತನಾಡುತ್ತಾರೆ. ಕೊನೆಗೂ ನೀವು ಒಪ್ಪುವುದಿಲ್ಲವೆಂದಾಗ "ಬೇಕಾದ್ರೆ ಖರೀದಿಸಿ, ಇಲ್ಲ ಹೊರಟು ಹೋಗಿ ಅಂತಾರೆ" ಥೇಟ್ ಜಾತ್ರೆಯಲ್ಲಿ ಜರ್ಕಿನ್ ಮಾರುವರ ಹಾಗೇ. ಆ ಸಮಯದಲ್ಲಿ ಆತ ಹೇಳುವ ದರ ಸರಿಯಾಗಿದೆ ಅಂತ ನಿಮಗೆ ಅನಿಸಿದರೆ ಖರೀದಿಸಿ. ಇಲ್ಲದಿದ್ದರೆ ಸರಿ ಹೋಗ್ತಿನಿ ಅಂತ ಹೇಳಿ ಹೊರಟು ಬಿಡಿ. ಆಗ ಆತ ನಿಮ್ಮನ್ನು ವಾಪಸ್ಸು ಕರೆಯಬಹುದು. ಕರೆಯದೆಯೂ ಇರಬಹುದು.
ನನಗಿಂತ ಉತ್ತಮರಿಲ್ಲ: ಕೆಲವು ಡೀಲರ್ ಗಳಿದ್ದಾರೆ. ತಾವು ಒಳ್ಳೆಯವರೆಂದು ತೋರಿಸಿಕೊಳ್ಳಲು ತುಂಬಾ ಶ್ರಮಪಡುತ್ತಾರೆ. ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ ಎಂದೇ ಅವರು ತೋರಿಸಿಕೊಳ್ಳುತ್ತಾರೆ. ಇದು ಒಳ್ಳೆಯ ಮತ್ತು ಕೆಟ್ಟ ಸೇಲ್ಸ್ ಮ್ಯಾನ್ ಗಳಿಬ್ಬರೂ ಈ ಟ್ರಿಕ್ ಉಪಯೋಗಿಸುತ್ತಾರೆ. ನೀವು ಹೊಸ ಕಾರ್ ಖರೀದಿಸಲು ಕೆಟ್ಟ ಸೇಲ್ಸ್ ಮ್ಯಾನ್ ಸಂಪೂರ್ಣ ಸಹಕಾರ ನೀಡುವನಂತೆ ವರ್ತಿಸುತ್ತಾನೆ.
ಡೀಲರ್ ಗಳೊಂದಿಗೆ ಡೀಲ್ ಹೀಗಿರಲಿ
* ಟೆಸ್ಟ್ ಡ್ರೈವ್ ಮಾಡಿ. ಆದರೆ ದರದ ಕುರಿತು ಆರಂಭದಲ್ಲಿ ಮಾತನಾಡಬೇಡಿ.
* ನೀವು ಮಾರುಕಟ್ಟೆಯಲ್ಲಿರುವ ವಿವಿಧ ವಾಹನಗಳ ಬಗ್ಗೆ ತಿಳುವಳಿಕೆ ಉಳ್ಳವರೆಂದು ಸೇಲ್ಸ್ ಮ್ಯಾನ್ ಗೆ ಗೊತ್ತಿದೆ. . ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ತನ್ನಲ್ಲಿರುವ ಕಾರ್ ಖರೀದಿಸುವುದರಿಂದ ಆಗುವ ಲಾಭವನ್ನು ನಿಮಗೆ ಮನವರಿಕೆ ಮಾಡಲು ಇಷ್ಟಪಡುತ್ತಾರೆ.
* ಡೀಲರ್ ನಿಮ್ಮಲ್ಲಿ ಹೇಳಿದ ವಿಷಯದ ಕುರಿತು ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಆತುರ ಪಟ್ಟರೆ ಅಪಾಯ ಖಂಡಿತ. ಎಚ್ಚರಿಕೆಯಿಂದ ಡೀಲ್ ಮಾಡಿ.
* ಕೆಟ್ಟ ಡೀಲರೊಬ್ಬನ ಮಾತಿನ ಮೋಡಿಗೆ ಸಿಲುಕಿ, ಕೆಟ್ಟ ಗಾಡಿ ಖರೀದಿಸಿದ ಭೂಪ ನೀವಾಗಬೇಡಿ.


Click it and Unblock the Notifications







