ಮಾರುತಿ ಎಸ್ಎಕ್ಸ್4 ಡೀಸಲ್, 7.74 ಲಕ್ಷ ರೂಪಾಯಿಯ ಕಾರ್

Maruti sx4 Diesel
ಕೊನೆಗೂ ಬಹುನಿರೀಕ್ಷಿತ ಮಾರುತಿ ಎಸ್ಎಕ್ಸ್4 ಡೀಸಲ್ ಆವೃತ್ತಿಯನ್ನು ಮಾರುತಿ ಸುಜುಕಿ ಅನಾವರಣಗೊಳಿಸಿದೆ. ಇದು ಪ್ರತಿಲೀಟರ್ ಡೀಸಲ್ ಗೆ ಸುಮಾರು 21.5 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಪ್ರತಿಪಾದಿಸಿದೆ. ಇದರ ದರ ಸುಮಾರು 7.74 ಲಕ್ಷ ರೂ.ನಿಂದ 8.62 ಲಕ್ಷ ರೂ.ವರೆಗಿದೆ.

ಹೊಸ ಎಸ್ಎಕ್ಸ್4 ಶಕ್ತಿಶಾಲಿ ಸೂಪರ್ ಟರ್ಬೊ ಡಿಡಿಐಎಸ್ ಎಂಜಿನ್ ಹೊಂದಿದೆ. "ನೂತನ ಡೀಸಲ್ ತಂತ್ರಜ್ಞಾನದೊಂದಿಗೆ ಬಂದಿರುವ ಎಸ್ಎಕ್ಸ್4 ಅತ್ಯಧಿಕ ಶಕ್ತಿ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಮತ್ತೊಂದು ಹೆಸರಾಗಿದೆ. ಎಸ್ಎಕ್ಸ್4 ಡೀಸಲ್ ಮಿತ ವೆಚ್ಚದ ಆರಾಮದಾಯಕತೆಯ ಡ್ರೈವಿಂಗ್ ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ" ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಂಝೊ ನಕಾನಶಿ ಹೇಳಿದ್ದಾರೆ.

ಹೊಸ ಡೀಸಲ್ ಕಾರ್ ಕಡಿಮೆ ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ ಕೂಡ ಹೌದು. ಕಂಪನಿಯ ಇತರ ಡೀಸಲ್ ಕಾರ್ ಗಳೊಂದಿಗೆ ನೂತನ ಎಸ್ಎಕ್ಸ್4 ಗೆಲುವು ಪಡೆಯುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಕಂಪನಿಯ ಸ್ವಿಫ್ಟ್ ಡಿಜೈರ್ ಮತ್ತು ರಿಟ್ಜ್ ಕೂಡ ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಎಸ್ ಎಕ್ಸ್4 ಪೆಟ್ರೋಲ್ ಮತ್ತು ಡೀಸಲ್ ಮಾದರಿಗಳಲ್ಲೂ ದೊರಕುತ್ತದೆ. ನೂತನ ಡೀಸಲ್ ಆವೃತ್ತಿಯ ನೆರವಿನಿಂದ ಮಾರಾಟ ಪ್ರಮಾಣವೂ ಗಣನೀಯವಾಗಿ ಏರಿಕೆ ಕಾಣುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಕಂಪನಿಯ ಅಂದಾಜಿನ ಪ್ರಕಾರ ಈಗ ಎ3 ಸೆಗ್ಮೆಂಟ್ ನಲ್ಲಿ ತನ್ನ ಸೆಡಾನ್ ಕಾರ್ ಗಳಾದ ಎಸ್ಎಕ್ಸ್4 ಮತ್ತು ಡಿಜೈರ್ ಪ್ರತಿತಿಂಗಳಿಗೆ ಸುಮಾರು 30 ಸಾವಿರ ಯೂನಿಟ್ ಮಾರಾಟವಾಗುತ್ತಿದೆ. ಕಂಪನಿಗೆ ಎ3 ಸೆಗ್ಮೆಂಟ್ ನಲ್ಲಿ ಉತ್ತಮ ಅವಕಾಶವಿದ್ದು ಇದರಲ್ಲಿ ಶೇ. 30ರಷ್ಟು ಪಾಲನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.ಮಾರುತಿ ಎಸ್ಎಕ್ಸ್4 ಕಾರ್ ವಿಡಿಐ, ಝಡ್ ಡಿಐ ಮತ್ತು ಝಡ್ ಡಿಐ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ.

More from DriveSpark

Article Published On: Wednesday, February 23, 2011, 10:45 [IST]
English summary
The Indian car giant Maruti Suzuki has unleashed the diesel version of SX4 for Rs7.74 lakhs and this could be the company’s fourth diesel vehicle in its platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+