ದೇಶದ ರಸ್ತೆಗೆ ಹೊಸ ವೇಷದಲ್ಲಿ ಫಿಯೆಟ್ ಪಾಲಿಯೊ ಮರುಪ್ರವೇಶ

Fiat Palio
ಕೆಲವು ವರ್ಷಗಳ ಹಿಂದೆ ದೇಶದ ರಸ್ತೆಯಲ್ಲಿ ಮೋಡಿ ಮಾಡಿ ಮಾಯವಾಗಿದ್ದ ಫಿಯೆಟ್ ಪಾಲಿಯೊ ಮತ್ತೆ ಬಿಡುಗಡೆಯಾಗಲಿದೆ. ಅದು ಕೂಡ ಹೊಸ ಹೆಸರು ಮತ್ತು ವಿನ್ಯಾಸದಲ್ಲಿ. ಇಲ್ಲಿನ ವಾಹನ ಮಾರುಕಟ್ಟೆಯಲ್ಲಿ ಒಂದಿಷ್ಟು ಕಾಲ ರಜೆ ಹಾಕಿ ಹೋಗಿದ್ದ ಪಾಲಿಯೋ ದೇಶದಲ್ಲಿ ಮತ್ತೆ ಪಾಲು ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿದೆ. ಪುಂಟೊ ಹ್ಯಾಚ್ ಬ್ಯಾಕ್ ಗಿಂತ ಒಂದಿಷ್ಟು ಕಡಿಮೆ ದರದ ನೂತನ ಪೊಲಿಯೊ 1.0 ಲೀಟರ್ ನ ಪೆಟ್ರೊಲ್ ಮತ್ತು 1.3 ಲೀಟರ್ ನ ಮಲ್ಟಿಜೆಟ್ ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ.

ಫಿಯೆಟ್ ಕಂಪನಿಯು ತನ್ನ ಗ್ರಾಂಡೆ ಪುಂಟೊ ಕಾರ್ ಗೆ ಮಾರುಕಟ್ಟೆ ಹೆಚ್ಚಿಸುವ ಉದ್ದೇಶದಿಂದ ಪಾಲಿಯೊ ಕಾರ್ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಆದರೆ ಪಾಲಿಯೊ ಕಾರ್ ಕುರಿತು ಮಾರುಕಟ್ಟೆಯಲ್ಲಿನ್ನೂ ಬೇಡಿಕೆ ಚಾಲ್ತಿಯಲ್ಲಿರುವುದರಿಂದ ಮತ್ತೆ ಹೊರತರಲು ಯೋಜಿಸಿರುವುದಾಗಿ ಫಿಯೆಟ್ ಉಪಾಧ್ಯಕ್ಷರು ಹೇಳಿದ್ದಾರೆ. ಷೆವರ್ಲೆ ಸ್ಪಾರ್ಕ್, ಬೀಟ್, ಟಾಟಾ ಇಂಡಿಕಾ, ಫೋರ್ಡ್ ಫಿಗೊ ಮತ್ತು ಹ್ಯುಂಡೈ ಸ್ಯಾಂಟ್ರೊ ಕ್ಸಿಂಗ್ ಮುಂತಾದ ನಾಲ್ಕು ಲಕ್ಷ ರೂ. ಆಸುಪಾಸಿನ ಕಾರ್ ಸೆಗ್ಮೆಂಟ್ ನಲ್ಲಿ ಪಾಲಿಯೊ ಗುರುತಿಸಿಕೊಂಡಿತ್ತು.

ದೇಶದಲ್ಲಿ ಟಾಟಾ ಮೊಟರ್ಸ್ ಜಂಟಿ ಉದ್ಯಮವಾಗಿ ಫಿಯೆಟ್ ಕಾರ್ಯ ನಿರ್ವಹಿಸುತ್ತಿದೆ. ಇವೆರಡು ಜಂಟಿ ಉದ್ಯಮಗಳು 50:50 ಪಾಲು ಹೊಂದಿವೆ. ಫಿಯೆಟ್ ಎಂಜಿನ್ ತಂತ್ರಜ್ಞಾನದ ಲಾಭ ಪಡೆಯುವ ಉದ್ದೇಶದಿಂದ ಟಾಟಾ ಮೋಟರ್ಸ್ ಫಿಯೆಟ್ ನೊಂದಿಗೆ ಜಂಟಿ ಉದ್ಯಮಕ್ಕೆ ಪ್ರವೇಶಿಸಿತ್ತು. ಈ ವಹಿವಾಟು ಸುಮಾರು 4 ಸಾವಿರ ಕೋಟಿ ರೂ. ಹೂಡಿಕೆಯಿಂದ ನಡೆಯುತ್ತಿದೆ. ಜಂಟಿ ಉದ್ಯಮ ಸ್ಥಾಪನೆಯಾದ ನಂತರ ಫಿಯೆಟ್ ಗ್ರಾಂಡೆ ಪುಂಟೊ ಮತ್ತು ಫಿಯೆಟ್ ಲಿನಿಯಾ ಕಾರ್ ಗಳು ಮಾರಾಟ ಆರಂಭವಾಗಿದೆ. ಆದರೆ ಮಾರಾಟದ ಪ್ರಮಾಣ ಇಳಿಮುಖವಾಗಿರುವುದರಿಂದ ಟಾಟಾ ಮೋಟರ್ಸ್ ಡೀಲರ್ ನೆಟ್ ವರ್ಕ್ ಹೆಚ್ಚಿಸಲು ತೊಡಗಿದೆ.

More from DriveSpark

Article Published On: Friday, February 25, 2011, 14:47 [IST]
English summary
Fiat’s Palio will reenter into India in a new name and a refined facial changes. The move comes as Fiat intends to secure a marginal share in the Indian car market after a long spell of absence.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+