ದೇಶದ ರಸ್ತೆಗಿಳಿಯಲಿದೆ ರೆನಾಲ್ಟ್ ನ 5 ಹೊಸ ಕಾರ್

Renault
ಮುಂದಿನ ವರ್ಷದೊಳಗೆ 5 ಹೊಸ ಮಾಡಲ್ ಗಳನ್ನು ದೇಶದ ವಾಹನ ಮಾರುಕಟ್ಟೆಗೆ ಪರಿಚಯಿಸಲು ರೆನಾಲ್ಟ್ ಯೋಜಿಸಿದೆ. ಇದಕ್ಕಾಗಿ ಕಂಪನಿಯು ತನ್ನ ಚೆನ್ನೈ ಸಮೀಪದ ಘಟಕಕ್ಕೆ ಸುಮಾರು 4,500 ಕೋಟಿ ರೂ. ವಿನಿಯೋಗಿಸಲಿದೆ. ಈ ಘಟಕವು ನಿಸ್ಸಾನ್ ನ ಜಂಟಿ ಉದ್ಯಮದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ 5 ವರ್ಷದಲ್ಲಿ 70 ಸಾವಿರ ವಾಹನ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಉತ್ಪಾದನಾ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೂಡಿಕೆ ಮಾಡಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಕಂಪನಿಯು ಮುಂದಿನ ವರ್ಷದೊಳಗೆ 5 ಹೊಸ ಕಾರ್ ಗಳನ್ನು ಹೊರತರಲು ಯೋಜಿಸಿದೆ. ಅದರಲ್ಲಿ ಒಂದು ಮಾಡೆಲ್ "ಫ್ಲ್ಯೂಯನ್ಸ್" ಈ ವರ್ಷದ ಮಧ್ಯಾವಧಿಯಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ರಷ್ಯಾ ಮತ್ತು ಬ್ರೇಝಿಲ್ ಸೇರಿದಂತೆ ಭಾರತ ಕೂಡ ಕಂಪನಿಗೆ ಬೃಹತ್ ಮಾರುಕಟ್ಟೆಯಾಗಿದೆ ಎಂದರು. ಈ ವರ್ಷ ಅಕ್ಟೋಬರ್ ವೇಳಗೆ ಕಂಪನಿಯ ಕೊಲಿಯೊಸ್ ಹೈ ಎಂಡ್ ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಕಾರ್ ದೇಶದ ರಸ್ತೆಗಿಳಿಯಲಿದೆ.

"ಫ್ಲ್ಯೂಯನ್ಸ್" ರಸ್ತೆಗಿಳಿಯುವ ಮುನ್ನ ಕಂಪನಿಯು ಡೀಲರ್ ನೆಟ್ ವರ್ಕ್ ಸಂಖ್ಯೆಯನ್ನು 7ರಿಂದ 10ಕ್ಕೆ ಹೆಚ್ಚಿಸಲು ರೆನಾಲ್ಟ್ ನಿರ್ಧರಿಸಿದೆ. 2012ಕ್ಕೆ ಡೀಲರ್ ನೆಟ್ ವರ್ಕ್ ಸಂಖ್ಯೆಯನ್ನು ಸುಮಾರು 70ಕ್ಕೆ ಹೆಚ್ಚಿಸುವ ಯೋಜನೆಯನ್ನು ಕಂಪನಿ ಹೊಂದಿದ್ದು, ಶೇ. 80ರಷ್ಟು ಭಾರತದ ಮಾರುಕಟ್ಟೆಯನ್ನು ತಲುಪುವ ಗುರಿ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಪ್ರಸಕ್ತ ದಶಕದಿಂದ ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಪಾಲು ಪಡೆಯುವ ಗುರಿಯನ್ನು ಹೊಂದಿರುವುದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

2014ಕ್ಕೆ ಕಂಪನಿಯು ಸುಮಾರು 70 ಸಾವಿರ ವಾಹನಗಳನ್ನು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಕಂಪನಿಯ ಉಪಾಧ್ಯಕ್ಷರು ಹೇಳಿದ್ದಾರೆ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಗ್ರಾಹಕರಿಂದ ಕಂಪನಿಯು ಬೇಡಿಕೆ ಪಡೆಯುತ್ತಿದ್ದು, ಹೈಯರ್ ಎಂಡ್ ಸೆಗ್ಮೆಂಟ್ ಗೆ ಪ್ರವೇಶಿಸುವ ಯೋಜನೆ ಕಂಪನಿಗೆ ಸದ್ಯಕ್ಕಿಲ್ಲ ಎಂದರು.

More from DriveSpark

Article Published On: Friday, February 25, 2011, 11:51 [IST]
English summary
Within the next year there will be five new models from Renault in the Indian market as the company is shelling Rs4500 crore for erecting the manufacturing plant near Chennai.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+