ಟೊಯೊಟಾ ರಿಕಾಲ್ ಪರ್ವ; ಮತ್ತೆ 14 ಲಕ್ಷ ವಾಹನಗಳು ಹಿಂದಕ್ಕೆ

ಆಕ್ಸಿಲರೇಟರ್ ಪೆಡಲ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಆರಂಭದಲ್ಲಿ 14 ಲಕ್ಷ ವಾಹನಗಳನ್ನು ವಾಪಸ್ಸು ಪಡೆಯಲಾಗುವುದು ಎಂದು ಕಂಪನಿ ತಿಳಿಸಿದೆ. 2006ರಿಂದ 2010ರವರೆಗೆ ರಸ್ತೆಗಿಳಿದ ಮೂರು ಮಾಡೆಲ್ ಕಾರ್ ಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಇದರಲ್ಲಿ 7,61,000 ರಾವ್4 ಕ್ರಾಸೊವರ್ ಕಾರ್ ಗಳು ಸೇರಿವೆ. ಕಂಪನಿ ಈ ವರ್ಷ ರಿಕಾಲ್ ಮಾಡುವುದಾಗಿ ತಿಳಿಸಿದ ಕಾರ್ ಒಟ್ಟಾರೆಯಾಗಿ 24 ಲಕ್ಷ ದಾಟಿದೆ.
ಇತ್ತೀಚೆಗೆ ಕಂಪನಿಯು ಜಾಗತಿಕವಾಗಿ ಸುಮಾರು 90 ಲಕ್ಷ ವಾಹನಗಳನ್ನು ವಾಪಸ್ಸು ಪಡೆಯಲು ನಿರ್ಧರಿಸಿತ್ತು. 2009ರಿಂದ 2010ರ ಫೆಬ್ರವರಿವರೆಗೆ ಖರೀದಿಸಿದ ಕಂಪನಿಯ ವಾಹನಗಳ ಇಂಧನ ಪೈಪ್ ನಲ್ಲಿ ತೊಂದರೆ ಸರಿಪಡಿಸಲು ಕಂಪನಿ ಈ ನಿರ್ಧಾರಕ್ಕೆ ಬಂದಿತ್ತು. ಇದಕ್ಕೂ ಮುನ್ನ ಎಂಜಿನ್ ಸಮಸ್ಯೆಯ ಹಿನ್ನಲೆಯಲ್ಲಿ ಹೋಂಡಾ ಮೋಟರ್ಸ್ ಕೂಡ ತನ್ನ ಸಿಟಿ ಸೆಡಾನ್ ಕಾರ್ ಗಳನ್ನು ಹಿಂಪಡೆಯಲು ನಿರ್ಧರಿಸಿರುವುದು ಸಿಟಿ ಮಾಲಿಕರ ಹುಬ್ಬೇರಿಸುವಂತೆ ಮಾಡಿತ್ತು.


Click it and Unblock the Notifications







