ಭಾರತದ ರಸ್ತೆಗಿಳಿಯಲಿದೆ ಮತ್ತೊಂದು ಬೆಂಟ್ಲಿ ಕಾರ್

ಕಾಂಟಿನೆಂಟಲ್ ಜಿಟಿ ಆವೃತ್ತಿಯನ್ನು ಕಂಪನಿಯಿಂದ ಆರ್ಡರ್ ಮಾಡಿದ ಸುಮಾರು 5ರಿಂದ 6 ತಿಂಗಳಲ್ಲಿ ಡೆಲಿವರಿ ಮಾಡಲಾಗುವುದು ಎಂದು ಕಂಪನಿಯ ಡೀಲರ್ ಎಕ್ಸ್ ಕ್ಲೂಸಿವ್ ಮೋಟರ್ ಪ್ರಕಟಿಸಿದೆ. ಭಾರತದಲ್ಲಿ ಜಿಟಿ ದರ ಎಷ್ಟಿರಲಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಕಾಂಟಿನೆಂಟಲ್ ಜಿಟಿ ದರ ಸುಮಾರು 2 ಕೋಟಿ ರೂ.ಗಿಂತ ಹೆಚ್ಚಿರುವ ನಿರೀಕ್ಷೆಯನ್ನು ಎಕ್ಸ್ ಕ್ಲೂಸಿವ್ ಮೋಟರ್ ನ ವ್ಯವಸ್ಥಾಪಕ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
ಕಾಂಟಿನೆಂಟಲ್ ಆವೃತ್ತಿ 4 ಸೀಟ್ ನ ಐಷಾರಾಮಿ ಕಾರಾಗಿದ್ದು, 6 ಲೀಟರ್ ಪೆಟ್ರೊಲ್ ಎಂಜಿನ್ ಹೊಂದಿರಲಿದೆ. ಕಾಟಿನೆಂಟಲ್ ಜಿಟಿ ಕಾರನ್ನು ಬೆಂಟ್ಲಿ ಜಾಗತಿಕವಾಗಿ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಅನಾವರಣ ಮಾಡಿತ್ತು. ಇದರಲ್ಲಿ ನ್ಯಾವಿಗೇಷನ್ ಸಿಸ್ಟಮ್, ಟಚ್ ಸ್ಕ್ರೀನ್, ಗೂಗಲ್ ಮ್ಯಾಪ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ ಗಳಿವೆ. 2003ರಲ್ಲಿ ರಸ್ತೆಗಿಳಿದ ನಂತೆ ಸುಮಾರು 22 ಸಾವಿರ ಕಾಂಟಿನೆಂಟಲ್ ಕಾರ್ ಗಳು ಮಾರಾಟಗೊಂಡಿವೆ. ಬೆಂಟ್ಲಿಯ ಇನ್ನೊಂದು ಲಕ್ಷುರಿ ಕಾರ್ ಗೆ ಭಾರತದ ಮಾರುಕಟ್ಟೆಯಲ್ಲಿ ಸುಮಾರು 2.5 ಕೋಟಿ ರೂ. ಇದೆ.


Click it and Unblock the Notifications








