ಪಾದಚಾರಿಗಳಿಂದ ಸಂಭವಿಸೋ ಅಪಘಾತ ತಪ್ಪಿಸುವ ಆಪ್ತರಕ್ಷಕ

ರಸ್ತೆ ಅಪಘಾತ
"ಪಾದಚಾರಿ ಅಡ್ಡಬಂದು ಕಾರ್ ಅಪಘಾತ", "ದನ ಅಡ್ಡ ಬಂದು ಕಾರ್ ಕಮಾರಿಗೆ", ಹೀಗೆ ದಿನನಿತ್ಯ ಹಲವು ಅಪಘಾತಗಳನ್ನು, ಸಾವು ನೋವಿನ ಸುದ್ದಿಗಳನ್ನು ಓದುತ್ತೇವೆ. ಕೆಲವು ಯಮದೂತ ವಾಹನಗಳು ಯಾವ ಸಂದಿಯಿಂದ ಬರುತ್ತಿವೆ ಎಂಬುದು ಪಾದಚಾರಿಗಳಿಗೆ ಗೊತ್ತಾಗದೇ ವಾಹನದಡಿಗೆ ಬೀಳುತ್ತಾರೆ. ಕಾರ್ ಚಾಲಕರಿಗಂತೂ ಡ್ರೈವಿಂಗ್ ನಲ್ಲಿ ಮೈಯೆಲ್ಲ ಕಣ್ಣಾಗಿ ನೋಡಿದರೂ ಅಡ್ಡಬರುವ ಪಾದಚಾರಿಗಳು ಯಮದೂತರಾಗಿ ಕಾಡುತ್ತಾರೆ. ಇವರಿಂದ ಪಾರಾಗುವುದು ಹೇಗೆ ಅಂತ ತಲೆಮೇಲೆ ಕೈಹೊತ್ತು ಕುಳಿತುಬಿಡುತ್ತಾರೆ.

ಸ್ವಿಡಿಸ್ ನ ಬೃಹತ್ ವಾಹನ ಕಂಪನಿ ವೊಲ್ವೊ ನೂತನ ಸಾಧನವೊಂದನ್ನು ಪರಿಚಯಿಸಿದೆ. ಇದರ ಹೆಸರು ಪೆಡಸ್ಟ್ರೀಯನ್ ಡಿಟೆಕ್ಸನ್ ಸಿಸ್ಟಮ್. ಅರ್ಥಾತ್ ಪಾದಚಾರಿ ಅಡ್ಡಬಂದರೆ ವಾಹನ ಸ್ಟಾಪ್ ಆಗೋ ವ್ಯವಸ್ಥೆ. ಇದರಿಂದಾಗಿ ವಾಹನ ವೇಗವಾಗಿ ಸಾಗುತ್ತಿರುವಾಗ ಯಾರಾದರೂ ಪಾದಚಾರಿಗಳು, ಗ್ರಹಚಾರ ಕೆಟ್ಟವರು, ಪ್ರಾಣಿಗಳು ಅಡ್ಡಬಂದರೆ ವಾಹನ ತನ್ನಷ್ಟಕ್ಕೆ ನಿಲ್ಲುತ್ತದೆ. ಈ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸುತ್ತದೆ.

ಕ್ಯಾಮರಾ ಮತ್ತು ರಾಡರ್ ನೆರವಿನಿಂದ ರಸ್ತೆಯಲ್ಲಿ ಏನಾದರೂ ಅಡ್ಡಬಂದರೆ ಗಕ್ಕನೆ ಕಾರ್ ನಿಲ್ಲುತ್ತದೆ. ನೂತನ ತಂತ್ರಜ್ಞಾನವು ನಗರಗಳಲ್ಲಿ ಹೆಚ್ಚಾಗಿ ಸಂಭವಿಸುವ ಅಪಘಾತಗಳಿಂದ ಮುಕ್ತಿ ನೀಡಲಿದೆ ಎಂದು ಕಂಪನಿ ಪ್ರತಿಪಾದಿಸಿದೆ. ಪ್ರತಿಗಂಟೆಗೆ ಕನಿಷ್ಟ 30 ಕಿ.ಮೀ. ವೇಗದಲ್ಲಿದ್ದಾಗ ಈ ಸಾಧನ ಆನ್ ಆಗುತ್ತದೆ. ಗರಿಷ್ಟ ಎಷ್ಟೇ ವೇಗದಲ್ಲಿದ್ದರೂ ಇದು ಕಾರ್ಯ ನಿರ್ವಹಿಸುತ್ತದೆ ಎಂದು ವೊಲ್ವೊ ತಿಳಿಸಿದೆ. ಕಾರ್ ಚಲಿಸುತ್ತಿರುವಾಗ ಎದುರಿನಲ್ಲಿ ಏನಾದರೂ ಅಡ್ಡಬಂದರೆ ಆಡಿಯೋ ಸಂದೇಶದ ಮೂಲಕ ಚಾಲಕನಿಗೆ ಎಚ್ಚರಿಗೆ ಸಂದೇಶ ರವಾನಿಸುತ್ತದೆ. ಆದರೆ ಡ್ರೈವರ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಆಟೋಮ್ಯಾಟಿಕ್ ಆಗಿ ಬ್ರೇಕ್ ಬಿದ್ದು ವಾಹನ ನಿಲ್ಲುತ್ತದೆ.

ಆದರೆ ನೂತನ ಸಾಧನವು ಕತ್ತಲಿನಲ್ಲಿ ಮತ್ತು ಪ್ರತಿಕೂಲ ಹವಾಮಾನಗಳಲ್ಲಿ ಕಾರ್ಯನಿರ್ವಹಿಸದು. ಹೆಚ್ಚು ಸುರಕ್ಷತೆಯ ಸಾಧನ ಬಯಸುವ ಚಾಲಕನಿಗೆ ಇದು ಸೂಕ್ತವಾಗಿದೆ ಎಂದು ಕಂಪನಿ ತಿಳಿಸಿದೆ. ಹೆಚ್ಚಿನ ರಸ್ತೆ ಅಪಘಾತಗಳು ಪಾದಚಾರಿಗಳು ಅಡ್ಡ ಬಂದು ಸಂಭವಿಸುವುದರಿಂದ ಈ ಸಾಧನ ಅತ್ಯಂತ ಅಗತ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

ನೂತನ ಸಾಧನವು ಪಾದಚಾರಿ ಅಪಘಾತಗಳನ್ನು ಸುಮಾರಾಗಿ ಕಡಿಮೆ ಮಾಡುತ್ತದೆ. ಇಂತಹ ಸಾಧನ ಅಳವಡಿಕೆ ಕಾರ್ ಮತ್ತು ಪಾದಚಾರಿಗಳಿಬ್ಬರು ಗಾಯಗೊಳ್ಳುವುದನ್ನು ತಪ್ಪಿಸುತ್ತದೆ ಎಂದು ಕಂಪನಿ ತಿಳಿಸಿದೆ. ಈ ಸಾಧನವನ್ನು ಕಂಪನಿಯ ಪ್ರಮುಖ ಕಾರ್ ಮಾಡೆಲ್ ಗಳಾದ ವೋಲ್ವೊ ಎಕ್ಸ್ ಸಿ 60, ವೊಲ್ವೊ ಎಸ್60 ಮತ್ತು ವೊಲ್ವೊ ವಿ60 ಮಾದರಿಗಳಿಗೆ ಅಳವಡಿಸಲಾಗಿದೆ. ಹೀಗೆ ಒಮ್ಮೆಗೆ ಆಟೋಮ್ಯಾಟಿಕ್ ಆಗಿ ಬ್ರೇಕ್ ಹಾಕಿದರೆ ಹಿಂದಿನಿಂದ ಬರುತ್ತಿರುವ ವಾಹನ ಕಾರ್ ಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ಸದ್ಯ ಕಂಪನಿ ಉತ್ತರ ನೀಡಿಲ್ಲ.

More from DriveSpark

Article Published On: Monday, February 28, 2011, 15:24 [IST]
English summary
Auto major Volvo has come up with a unique technology advancement of a pedestrian detection system. The new system is automatically stops the car whenever it traces an object in front of it.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+