ಥಂಡರ್ ಸ್ಟ್ರಿಂಟ್: ಮಹೀಂದ್ರ ಮೊಜೊ ಮೇಲೆ ಡ್ಯಾನಿ ರೈಡ್

ಥಂಡರ್ ಸ್ಟ್ರಿಂಟ್ ಎಂದರೆ ಯುರೋಪ್ ನ ಬೃಹತ್ ಮತ್ತು ಆಕರ್ಷಕ ಮೋಟರ್ ಸೈಕಲ್ ಹಬ್ಬ. ಭಾರತದ ತಂಡದಲ್ಲಿ ಡ್ಯಾನಿ ವೆಬ್ ಬಂದಿರುವುದು ಹೆಚ್ಚಿನವರ ಹುಬ್ಬೇರುವಂತೆ ಮಾಡಿದೆ. ಆತ ಕಳೆದ ವರ್ಷದ ಥಂಡರ್ ಸ್ಟ್ರಿಂಟ್ ರೇಸ್ ನಲ್ಲಿ ಪ್ರಮುಖ ಸ್ಟಾರ್. ಪ್ರಸಕ್ತ ವರ್ಷದ ರೈಡಿಂಗ್ ಲಿಸ್ಟ್ ನಲ್ಲಿ ಆತನ ಹೆಸರು ಅಗ್ರ ಸ್ಥಾನದಲ್ಲಿ ಉಳಿಯುವ ನಿರೀಕ್ಷೆಯನ್ನು ಹೆಚ್ಚಿನವರು ವ್ಯಕ್ತಪಡಿಸುತ್ತಾರೆ. ಮಹೀಂದ್ರ ರೈಡಿಂಗ್ ತಂಡವು ವಿಶ್ವದ ಬೃಹತ್ ಮೋಟರ್ ಸೈಕಲ್ ಚಾಂಪಿಯನ್ ಷಿಪ್ ನಲ್ಲಿ ಅತ್ಯುತ್ತಮ ಫರ್ಫಾಮೆನ್ಸ್ ನೀಡುವ ನಿರೀಕ್ಷೆಯನ್ನು ಮಹೀಂದ್ರವ್ಯಕ್ತಪಡಿಸಿದೆ.
ಥಂಡರ್ ಸ್ಪ್ರಿಂಟ್ ನಲ್ಲಿ ಪಾಲ್ಗೊಳ್ಳುವ ಕುರಿತು ಡ್ಯಾನಿ ಕೂಡ ಸಕತ್ ಹ್ಯಾಪಿಯಾಗಿದ್ದಾನೆ. ಈ ಥಂಡರ್ ಸ್ಪ್ರಿಂಟ್ ಎಂಬ ಬೃಹತ್ ಗ್ರಾಂಡ್ ಪ್ರಿಕ್ಸ್ ಇವೆಂಟನ್ನು ಆತ ಯಾವಾಗಲೂ ಎಂಜಾಯ್ ಮಾಡುತ್ತಾನಂತೆ. ಪ್ರಸಕ್ತ ವರ್ಷ ಮಹೀಂದ್ರ ಮೊಜೊವನ್ನು ಆತ ರೈಡ್ ಮಾಡಲಿರುವುದು ವಿಶೇಷ. ಆಕರ್ಷಕ, ಒಂದಿಷ್ಟು ಫನ್ನಿ ಫೀಚರ್ ಗಳ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಮಹೀಂದ್ರ ಮೊಜೊ ಕುರಿತು ಡ್ಯಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಭಾರತದ ಕಂಪನಿಯೊಂದು ಇಂತಹ ಪ್ರಮುಖ ಇವೆಂಟ್ ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಇಟಲಿಯ ಎಂಜಿನ್ ಘಟಕದ ನೆರವಿನಿಂದ ಮಹೀಂದ್ರ ಕಂಪನಿಯು ಈ ಬೈಕನ್ನು ವಿಶೇಷವಾಗಿ ವಿನ್ಯಾಸ ಮಾಡಿದೆ.


Click it and Unblock the Notifications