ಕಿಝಾಷಿ ಬುಕ್ಕಿಂಗ್ ಕಂಡು ಖುಷಿಗೊಂಡ ಮಾರುತಿ ಸುಜುಕಿ

Maruti Kizashi
ಕೆಲವು ದಿನಗಳ ಹಿಂದೆ ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಹೊರಬಂದ ಕಿಝಾಷಿ ಬೇಡಿಕೆ ಕಂಡು ಮಾರುತಿ ಖುಷಿಗೊಂಡಿದೆ. ಕಂಪನಿಯ ನಿರೀಕ್ಷೆಯನ್ನು ಓವರ್ ಟೆಕ್ ಮಾಡಿರುವ ಲಕ್ಷುರಿ ಸೆಡಾನ್ ಕಾರ್ ಕಿಝಾಷಿ, ಮಾರುಕಟ್ಟೆಗೆ ಪರಿಚಯಿಸಿದ 25 ದಿನಗಳಲ್ಲಿ ಸುಮಾರು 350 ಕಾರ್ ಗಳ ಬುಕ್ಕಿಂಗ್ ಆಗಿರುವುದಾಗಿ ಕಂಪನಿಯ ಮಾರಾಟ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ.

ಕಂಪನಿಯ ಕಿಝಾಷಿ ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ನೂತನ ಕಾರ್ ಮ್ಯಾನುಯಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಹೊಂದಿದೆ. 2.4 ಲೀಟರ್ ಆಟೋಮ್ಯಾಟಿಕ್ ವರ್ಸನ್ ನಲ್ಲಿ ಕಿಝಾಷಿ ಸುಮಾರು ಪ್ರತಿಲೀಟರ್ ಗೆ 10.9 ಕಿ.ಮೀ. ಮೈಲೇಜ್ ನೀಡುತ್ತದೆ. ಮ್ಯಾನುಯಲ್ ಟ್ರಾನ್ಸ್ ಮಿಷನ್ ನ ಕಿಝಾಷಿಗೆ 16.5 ಲಕ್ಷ ರೂ. ಮತ್ತು ಆಟೋಮ್ಯಾಟಿಕ್ ವರ್ಸನ್ ನ ಕಾರ್ ಗೆ 17.5 ಲಕ್ಷ ರೂ. ದರವಿದೆ.

ಹೋಂಡಾ ಅಕಾರ್ಡ್, ನಿಸ್ಸಾನ್ ಟೀನಾ, ವೋಕ್ಸ್ ವ್ಯಾಗನ್ ಪಸ್ಸಾಟ್, ಸ್ಕೋಡಾ ಸೂಪರ್ಬ್ ಮತ್ತು ಟೊಯೊಟಾ ಕ್ಯಾಮ್ರೆಗೆ ಕಿಝಾಷಿ ಪೈಪೋಟಿ ನೀಡುವ ನಿರೀಕ್ಷೆಯಿದೆ. ಮಾರುತಿ ಕಂಪನಿಯು ದುಬಾರಿ ಕಾರ್ ಲೋಕದಲ್ಲಿ ಒಳ್ಳೆಯ ಇತಿಹಾಸ ಹೊಂದಿಲ್ಲ. ಅಂದರೆ ಕಂಪನಿಯ ಗ್ರಾಂಡ್ ವಿಟಾರಾ ಮತ್ತು ಬೊಲೆನೊ ಕಾರ್ ಗಳಿಗೆ ಬೇಡಿಕೆ ಅಷ್ಟಕಷ್ಟೇ ಇದೆ. ಆದರೆ ನೂತನ ಕಿಝಾಷಿ ಮಾತ್ರ ಕಂಪನಿಗೆ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಹೊಸ ಸ್ಥಾನ ದೊರಕಿಸುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಕಿಝಾಷಿ ಟೆಕ್ ಟಿಪ್ಪಣಿ
* ಎಂಜಿನ್- 2,393 ಸಿಸಿ, ಡಿಒಎಚ್ ಸಿ, 16 ವಾಲ್ವೆ, ಪೆಟ್ರೊಲ್ ಚಾಲಿತ
* ಪವರ್- 6 ಸಾವಿರ ಆರ್ ಪಿಎಂಗೆ 176 ಹಾರ್ಸ್ ಪವರ್
* ಟ್ರಾನ್ಸ್ ಮಿಷನ್- 6 ಸ್ಪೀಡ್ ಮ್ಯಾನುಯಲ್/ಸಿವಿಟಿ
* ತೂಕ- 1,510 ಕೆ.ಜಿ.
* ಇಂಧನ ಟ್ಯಾಂಕ್ ಸಾಮರ್ಥ್ಯ- 63 ಲೀಟರ್
* ದರ- 16.5 ಲಕ್ಷ ರೂ.ನಿಂದ 17.5 ಲಕ್ಷ ರೂ.

More from DriveSpark

Article Published On: Tuesday, March 1, 2011, 15:18 [IST]
English summary
The recent launch of Maruti’s Kizashi has some good cheers to share for the car lovers and the maker. The company has received 350 units of Kizashi in just 25 days of launch of this sports luxury sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+